32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ರಾತ್ರಿ ವೇಳೆ ಖಾಸಗಿ ಬಸ್‌ಗಳ ಅಜಾಗರೂಕ ಚಾಲನೆ; ಪೊಲೀಸ್ ಠಾಣೆಗೆ ಯುವ ಕಾಂಗ್ರೇಸ್ ಗ್ರಾಮೀಣ ಬ್ಲಾಕ್ ಉಪಾಧ್ಯಕ್ಷ ಯತೀಶ್ ಧರ್ಮಸ್ಥಳ ದೂರು

ಬೆಳ್ತಂಗಡಿ: ಉಜಿರೆ-ಧರ್ಮಸ್ಥಳ ಮಾರ್ಗವಾಗಿ ರಾತ್ರಿ ವೇಳೆ ಸಂಚರಿಸುವ ಕೆಲವು ಖಾಸಗಿ ಬಸ್‌ಗಳ ಚಾಲಕರ ಬೇಜವಾಬ್ದಾರಿತನ ಹಾಗೂ ಅತಿ ವೇಗದ ಚಾಲನೆ ಸಾರ್ವಜನಿಕರ ಮತ್ತು ಪ್ರಯಾಣಿಕರ ಜೀವಕ್ಕೆ ಕುತ್ತು ತರುತ್ತಿದೆ ಎಂದು ಆರೋಪಿಸಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಉಪನಿರೀಕ್ಷಕರಿಗೆ ಯುವ ಕಾಂಗ್ರೇಸ್ ಗ್ರಾಮೀಣ ಬ್ಲಾಕ್ ಉಪಾಧ್ಯಕ್ಷ ಯತೀಶ್ ಧರ್ಮಸ್ಥಳ ದೂರು ನೀಡಿದ್ದಾರೆ.

ಉಜಿರೆಯಿಂದ ಧರ್ಮಸ್ಥಳ ಮಾರ್ಗವಾಗಿ ರಾತ್ರಿ ವೇಳೆ ಮೂಡಬಿದ್ರೆಯಿಂದ ಬೆಂಗಳೂರಿಗೆ ಸಂಚರಿಸುವ ಕೆಲವು ಖಾಸಗಿ ಬಸ್‌ಗಳ ಚಾಲಕರು ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಬಸ್‌ ಚಲಾಯಿಸುತ್ತಿರುವುದು ಕಂಡುಬರುತ್ತಿದೆ. ಇತರ ವಾಹನಗಳನ್ನು ಅಪಾಯಕಾರಿ ರೀತಿಯಲ್ಲಿ ಓವರ್‌ಟೇಕ್ ಮಾಡುವುದು, ವೇಗವಾಗಿ ವಾಹನ ಚಲಾಯಿಸುವುದು ಹಾಗೂ ಟ್ರಾಫಿಕ್ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದರಿಂದ ಪ್ರಯಾಣಿಕರು ಮತ್ತು ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರ ಜೀವಕ್ಕೆ ಅಪಾಯ ಉಂಟಾಗುತ್ತಿದೆ.

ಇಂತಹ ನಿರ್ಲಕ್ಷ್ಯ ಚಾಲನೆಯಿಂದ ಯಾವುದೇ ಸಮಯದಲ್ಲಿ ಗಂಭೀರ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ಬಸ್ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲಾ ಖಾಸಗಿ ಬಸ್ ಚಾಲಕರಿಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿ, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಕ್ರಮ ಕೈಗೊಳ್ಳಬೇಕಾಗಿ ಯುವ ಕಾಂಗ್ರೇಸ್ ಗ್ರಾಮೀಣ ಬ್ಲಾಕ್ ಉಪಾಧ್ಯಕ್ಷ ಯತೀಶ್ ಧರ್ಮಸ್ಥಳ ದೂರಿನಲ್ಲಿ ತಿಳಿಸಿದ್ದಾರೆ.

Related posts

ಕಕ್ಕಿಂಜೆ ಮನ್ನಡ್ಕಪಾದೆ ಗುಡ್ಡಕ್ಕೆ ಬೆಂಕಿ

Suddi Udaya

ಧರ್ಮಸ್ಥಳ: ನೇರ್ತನೆ ನಿವಾಸಿ ಉದ್ಯಮಿ ಆ್ಯಂಟನಿ ಎ.ಜೆ ನಿಧನ

Suddi Udaya

ಓಡಿಲ್ನಾಳ: ಶಕ್ತಿ ಯುವಕ ಮಂಡಲ ರೇಷ್ಮೆ ರೋಡ್ ಇದರ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಸುಲ್ಕೇರಿಮೊಗ್ರು: ಬಾಣಂತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ಉಪ ಕಾರ್ಯನಿರ್ವಹಣಾಧಿಕಾರಿಯಾಗಿ ಸುಂದರ ಗೌಡ ನೇಮಕ

Suddi Udaya

ಓಡಿಲ್ನಾಳ ಸ ಉ. ಪ್ರಾ ಶಾಲೆಯ ಎಸ್‌ ಡಿ ಎಂ ಸಿ ರಚನೆ, ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪುನರಾಯ್ಕೆ

Suddi Udaya
error: Content is protected !!