ಬೆಳ್ತಂಗಡಿ: ಕರ್ನಾಟಕ ಸಾವಯವ ಕೃಷಿ ಯೋಜನೆ ಮಂಗಳ ಸಮೃದ್ಧಿ ವಿಭಾಗ ಇದರ 2026-27ನೇ ಸಾಲಿನ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಒಳಗೊಂಡ ಮಂಗಳೂರು ವಿಭಾಗದಲ್ಲಿ ಮಟ್ಟದಲ್ಲಿ ನೀಡಲಾಗುವ `ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಗತಿಪರ ಸಾವಯವ ಕೃಷಿಕ’ ಪ್ರಶಸ್ತಿಗೆ 27 ಮಂದಿ ಆಯ್ಕೆಯಾಗಿದ್ದು, ಇದರಲ್ಲಿ ಬೆಳ್ತಂಗಡಿ ತಾಲೂಕಿನ 13 ಮಂದಿ ಕೃಷಿಕರು ಪುರಸ್ಕಾರಗೊಳ್ಳಲಿದ್ದಾರೆ.
ಕಡಿರುದ್ಯಾವರ ಗ್ರಾಮದ ನೀಲಪ್ಪ ಗೌಡ, ಕಳೆಂಜ ಗ್ರಾಮದ ಎಲ್ಯಣ್ಣ ಗೌಡ, ಕಳೆಂಜ ಗ್ರಾಮದ ಪದ್ಮಯ್ಯ ಗೌಡ, ಹತ್ಯಡ್ಕ ಗ್ರಾಮದ ಬಾಲಮುಕುಂದ, ಬಡಗಕಾರಂದೂರು ಗ್ರಾಮದ ಲಿಂಬಯ್ಯ(ಶೇಖರ್) ದೇವಾಡಿಗ, ಕೊಯ್ಯೂರು ಗ್ರಾಮದ ಅಶೋಕ್ ಭಟ್, ಕೊಯ್ಯೂರು ಗ್ರಾಮದ ಮಹಾಬಲೇಶ್ವರ ಭಟ್, ಕಲ್ಮಂಜ ಗ್ರಾಮದ ಮೊಹಮ್ಮದ್ ಮುಜೀಬ್, ಕೊಕ್ಕಡ ಗ್ರಾಮದ ರಾಮಣ್ಣ ಗೌಡ, ನಿಡ್ಲೆ ಗ್ರಾಮದ ಕೊರಗಪ್ಪ ಗೌಡ, ಕೊಕ್ಕಡ ಗ್ರಾಮದ ಸೇಸಪ್ಪ ಮೂಲ್ಯ, ಸಾವ್ಯ ಗ್ರಾಮದ ಬಾಲಕೃಷ್ಣ ಭಟ್, ಮರೋಡಿ ಗ್ರಾಮದ ನಾರಾಯಣ ಪೂಜಾರಿ ಪ್ರಶಸ್ತಿಗೆ ಪಾತ್ರರಾದವರು.
ಸೆ.21ರಂದು ಬಿ.ಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ಸಾವಯವ ಕೃಷಿ ಯೋಜನೆಯ ಆಡಳಿತ ನಿರ್ದೇಶಕ ಮೋಹನ್ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಸರಕಾರದ ಆರೋಗ್ಯ ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕಾರ್ಯಕ್ರಮವನ್ನು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಉದ್ಘಾಟಿಸಲಿದ್ದು, ಶಾಸಕರು, ವಿವಿಧ ಕ್ಷೇತ್ರಗಳ ಗಣ್ಯರು, ಧಾರ್ಮಿಕ ಮುಖಂಡರು, ರೈತ ಮುಖಂಡರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.











