28.8 C
ಪುತ್ತೂರು, ಬೆಳ್ತಂಗಡಿ
September 18, 2026
Uncategorized

ತುಳು ಭಾಷೆ ಅಧಿಕೃತ ಭಾಷೆ ಘೋಷಣೆ : ಸಂತಸ ವ್ಯಕ್ತ ಪಡಿಸಿದ ಶಿವಪ್ರಸಾದ್ ಅಜಿಲ


ಬೆಳ್ತಂಗಡಿ : ತುಳು ಭಾಷೆಗೆ ಅಧಿಕೃತ ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯ ಮಾನ್ಯತೆ ದೊರೆತಿರುವುದು ಸಮಸ್ತ ತುಳುನಾಡಿನ ಜನತೆಗೆ ಹಾಗೂ ಭಾಷಾ ಪ್ರೇಮಿಗಳಿಗೆ ಅತ್ಯಂತ ಹೆಮ್ಮೆಯ ಮತ್ತು ಸಂತಸದ ವಿಷಯ ಎಂದು ತುಳುವ ಮಹಾಸಭೆ ಇಂಟರ್ನ್ಯಾಷನಲ್ ದಕ್ಷಿಣ ಕನ್ನಡ ಅಧ್ಯಕ್ಷರಾದ ಶಿವಪ್ರಸಾದ್ ಅಜಿಲರು ತಿಳಿಸಿದ್ದಾರೆ.
ಶತಮಾನಗಳ ಇತಿಹಾಸ, ಶ್ರೀಮಂತ ಸಂಸ್ಕೃತಿ ಹಾಗೂ ಜನಪದ ಪರಂಪರೆಯನ್ನು ಹೊಂದಿರುವ ತುಳು ಭಾಷೆಯ ಈ ಐತಿಹಾಸಿಕ ಮೈಲಿಗಲ್ಲು ಕರಾವಳಿಯ ಜನತೆಯ ದಶಕಗಳ ಕನಸನ್ನು ನನಸು ಮಾಡಿದೆ.

ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದ ಸಾಹಿತಿಗಳು, ತುಳು ಒಕ್ಕೂಟಗಳು, ಸಾಂಸ್ಕೃತಿಕ ನಾಯಕರು ಮತ್ತು ಹೋರಾಟಗಾರರ ಶ್ರಮ ಅಪಾರವಾದದ್ದು.

ಜನರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿ, ನಿರ್ಧಾರ ಕೈಗೊಂಡ ಸನ್ಮಾನ್ಯ ಮುಖ್ಯಮಂತ್ರಿಗಳು, ಸಚಿವ ಸಂಪುಟದ ಸದಸ್ಯರು ಹಾಗೂ ಈ ವಿಷಯವಾಗಿ ಗಟ್ಟಿಯಾಗಿ ಧ್ವನಿ ಎತ್ತಿದ ಕರಾವಳಿ ಭಾಗದ ಜನಪ್ರತಿನಿಧಿಗಳು ಅಭಿನಂದನೆಗಳಿಗೆ ಸಂಪೂರ್ಣ ಅರ್ಹರು.
ಎಂದು ಶಿವಪ್ರಸಾದ್ ಅಜಿಲರು ತಿಳಿಸಿದ್ದಾರೆ.
ತುಳು ಭಾಷೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗಮನಕ್ಕೆ ತರುವಂತೆ ಈ ಹಿಂದೆ ವಿಶ್ವ ತುಳು ಸಮ್ಮೇಳನವನ್ನು ಸಂಘಟಿಸಿದ ಶಿಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಆದ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಹಾಗೂ ದುಬೈನಲ್ಲಿ ವಿಶ್ವ ತುಳು ಸಮ್ಮೇಳನವನ್ನು ಸಂಘಟಿಸಿದ ಮಾನ್ಯ ಸರ್ವೋತ್ತಮ್ ಶೆಟ್ಟಿ ಅವರನ್ನು ಕೂಡ ನಾನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸುತ್ತಿದ್ದೇನೆ. 2028ಕ್ಕೆ ವಿಶ್ವ ತುಳು ಸಂಘಟನೆಯ ನೂರನೇ ವರ್ಷ ಆಚರಣೆಯು ಬಹಳ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸುತ್ತೇನೆ.

Related posts

ವಿಧಾನ ಪರಿಷತ್‌ನ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಭಾರಿ ಮತಗಳ ಅಂತರದಿಂದ ಗೆಲುವು

Suddi Udaya

ನಾಗರಿಕ ಸೇವಾ ಟ್ರಸ್ಟ್ ನ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ದಯಾನಂದ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ 8 ಮಂದಿ ಪೌರ ಕಾರ್ಮಿಕರ ನೇರ ನೇಮಕಾತಿ

Suddi Udaya

ಮಡಂತ್ಯಾರು ಪುಂಜಾಲಕಟ್ಟೆ ಎಲ್ಲಾ ಸಂಘಟನೆಗಳ ಸಹಕಾರದಲ್ಲಿ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಹೆದ್ದಾರಿಯ ಶ್ರಮದಾನ

Suddi Udaya

ಮೇಲಂತಬೆಟ್ಟುವಿನ ಮನೆಯಂಗಳದಲ್ಲಿ ಭಾರಿಗಾತ್ರದ ಕಾಳಿಂಗ ಸರ್ಪ: ಕಾಳಿಂಗ ಸರ್ಪವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

Suddi Udaya

ಅಳದಂಗಡಿ ಶ್ರೀ ಸತ್ಯ ದೇವತೆಗೆ ಹರಕೆ ರೂಪದಲ್ಲಿ ಗಗ್ಗರ ಸಮಪ೯ಣೆ

Suddi Udaya
error: Content is protected !!