ಮಡಂತ್ಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ಮಡಂತ್ಯಾರು ವಲಯ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಬಸವನಗುಡಿ ಒಕ್ಕೂಟದಲ್ಲಿ ವಾತ್ಸಲ್ಯ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ತಾಲೂಕಿನ ಮಾನ್ಯ ಯೋಜನಾಧಿಕಾರಿ ಹರೀಶ್ ಮಕ್ಕಳಿಗೆ ವಿದ್ಯಾನಿಧಿಯಿಂದ ದೊರೆತ ಪುಸ್ತಕ ಬ್ಯಾಗುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು, ಮೇಲ್ವಿಚಾರಕರಾದ ಕೇಶವ್ ಹಾಗೂ ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿ ರವಿಕಲಾ ಸೇವಾ ಪ್ರತಿನಿಧಿ ಭಾರತಿ ಉಪಸ್ಥಿತರಿದ್ದರು.











