September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಏ.19: ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಆರಾಧಕರ ಸಭೆ

ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಏ.19ರ ಭಾನುವಾರದಂದು ಬೆಳಗ್ಗೆ 10:30ಕ್ಕೆ ಕೊಕ್ಕಡದ ಶ್ರೀರಾಮ ಭಜನಾ ಮಂದಿರದಲ್ಲಿ ಆರಾಧಕರ ಸಭೆಯನ್ನು ಆಯೋಜಿಸಲಾಗಿದೆ. ಸಮಸ್ತ ಭಕ್ತರು ಹಾಗೂ ಹಿಂದೂ ಬಾಂಧವರು ಸಮಯಕ್ಕೆ ಮುಂಚಿತವಾಗಿ ಹಾಜರಾಗುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿದೆ.

10:30ಕ್ಕೆ ದೇವರ ಸಾನಿಧ್ಯದಲ್ಲಿ ಭಕ್ತರ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಬಳಿಕ ಜಮಾ-ಖರ್ಚಿನ ವಿವರಗಳನ್ನು ಸಮಿತಿಯವರು ಮಂಡಿಸಲಿದ್ದು, ದೇವಸ್ಥಾನದ ಮುಂದಿನ ಕಾಮಗಾರಿಗಳ ಬಗ್ಗೆ ಮೇಸ್ತ್ರಿ ಮತ್ತು ಆಚಾರಿ ಇವರಿಂದ ಮಾಹಿತಿ ನೀಡಲಾಗುತ್ತದೆ. ಗ್ರಾಮದ ಎಲ್ಲಾ ಬೈಲುವಾರು ಸಮಿತಿಗಳ ಚರ್ಚೆ, ಪದಾಧಿಕಾರಿಗಳ ಆಯ್ಕೆ ಹಾಗೂ ಮೇ ತಿಂಗಳಲ್ಲಿ ಬೈಲುವಾರು ಸಭೆ ನಡೆಸುವ ಕುರಿತು. ಜೊತೆಗೆ ಒಂದು ದಿನದ ಶ್ರಮದಾನ ಕಾರ್ಯಕ್ರಮ, ವಂತಿಗೆ ಸಂಗ್ರಹ, ಹಿಡಿ ಅಕ್ಕಿ ಯೋಜನೆ, ಸಮಿತಿಯ ಮಾಹಿತಿ ಫಲಕ ಅಳವಡಿಸುವುದು, ಮಹಿಳಾ ಸಮಿತಿ ರಚನೆ ಮಾಡುವ ಕುರಿತು ಹಾಗೂ ಗ್ರಾಮದಲ್ಲಿನ ವಿವಿಧ ಸಂಘ-ಸಂಸ್ಥೆಗಳ ಸಭೆಗಳನ್ನು ನಡೆಸುವ ವಿಚಾರಗಳೂ ಚರ್ಚೆ. ವಿಶೇಷವಾಗಿ ದೇವಸ್ಥಾನದ ಗರ್ಭಗುಡಿಯ ಕಾಮಗಾರಿ ನಿಗದಿತವಾಗಿ ಸೆಪ್ಟೆಂಬರ್ ತಿಂಗಳೊಳಗೆ ಪೂರ್ಣಗೊಳಿಸುವ ಬಗ್ಗೆ ಸಭೆಯಲ್ಲಿ
ಚರ್ಚೆ ನಡೆಯಲಿದೆ.

ಸಭೆಯ ಸಮಾಪನ ಕಾರ್ಯಕ್ರಮವು ಮಧ್ಯಾಹ್ನ 12:30ಕ್ಕೆ ನಡೆಯಲಿದ್ದು, ಬಳಿಕ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಸಮಸ್ತ ಭಕ್ತರು ಈ ಮಹತ್ವದ ಸಭೆಯಲ್ಲಿ ಭಾಗವಹಿಸಿ, ಸೂಕ್ತ ಸಲಹೆಗಳನ್ನು ನೀಡುವ ಮೂಲಕ ದೇವಸ್ಥಾನದ ಅಭಿವೃದ್ಧಿಗೆ ಕೈಜೋಡಿಸಬೇಕಾಗಿ ಕಾರ್ಯಕಾರಿ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

Related posts

ಕೊಕ್ಕಡ ಮಾಯಿಲಕೋಟೆ ದೈವಸ್ಥಾನಕ್ಕೆ ಪುತ್ತೂರು ಗೇರು ಅಭಿವೃದ್ಧಿ ನಿಗಮದ ರವಿಕುಮಾರ್ ಭೇಟಿ

Suddi Udaya

ಹೊಸಂಗಡಿ ಗ್ರಾ. ಪಂ. ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Suddi Udaya

ಕೊಕ್ಕಡ: ದಿ| ಸುಹಾಸ್ ಶೆಟ್ಟಿ ಹುಟ್ಟು ಹಬ್ಬದ ಪ್ರಯುಕ್ತ ಕಳೆಂಜ ನಂದಗೋಕುಲ ಗೋಶಾಲೆಗೆ ಮೇವು ಸಮರ್ಪಣೆ

Suddi Udaya

ದ್ವಿಚಕ್ರ ವಾಹನದಿಂದ ರಸ್ತೆಗೆ ಎಸೆಯಲ್ಪಟ್ಟು ಮಹಿಳೆಗೆ ಗಂಭೀರ ಗಾಯ: ಮಂಗಳೂರು ಆಸ್ಪತ್ರೆಗೆ ದಾಖಲು

Suddi Udaya

ನಾರಾವಿ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಹಾಗೂ ಬೆಸ್ಟ್ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಉಚಿತ ಪುಸ್ತಕ ವಿತರಣೆ

Suddi Udaya

ಮುಂಬೈನ ಡೊಂಬಿವಿಲಿನಲ್ಲಿ ನಡೆದ ಶಾರದೋತ್ಸವ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಭಕ್ತಿಹೆಜ್ಜೆ ಬಳಗದ ಭಜನಾ ಮಂಡಳಿಯ ಭಜಕರಿಂದ ಭಜನಾ ಸೇವೆ

Suddi Udaya
error: Content is protected !!