28.6 C
ಪುತ್ತೂರು, ಬೆಳ್ತಂಗಡಿ
September 19, 2026
ಅಭಿನಂದನೆ

ತಾಲೂಕು ಮಟ್ಟದ ಫುಟ್ಬಾಲ್‌ನಲ್ಲಿ ಬೆಳ್ತಂಗಡಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಗೆ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ

ಉಜಿರೆ: ಎಸ್.ಡಿ.ಎಂ. ಸೆಕೆಂಡರಿ ಶಾಲೆ, ಉಜಿರೆ ಇವರ ನೇತೃತ್ವದಲ್ಲಿ ಉಜಿರೆಯ ಶ್ರೀ. ಡಿ .ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದ ಪ್ರಾಥಮಿಕ ವಿಭಾಗದಲ್ಲಿ ಬೆಳ್ತಂಗಡಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ತಂಡವು ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಪಂದ್ಯಾವಳಿಯಲ್ಲಿ ಅತ್ಯುತ್ತಮ ಕ್ರೀಡಾ ಕೌಶಲ್ಯ, ಶಿಸ್ತುಬದ್ಧ ಆಟ ಹಾಗೂ ಸಂಘಟಿತ ತಂಡದ ಪ್ರಯತ್ನವನ್ನು ಪ್ರದರ್ಶಿಸಿದ ಎಸ್.ಡಿ.ಎಂ. ತಂಡವು ಮತ್ತೊಮ್ಮೆ ತಾಲೂಕು ಮಟ್ಟದಲ್ಲಿ ತನ್ನ ಮೇಲುಗೈ ಸಾಧಿಸಿದೆ. ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿರುವುದು ಶಾಲೆಯ ಕ್ರೀಡಾ ಸಾಧನೆಗೆ ಮತ್ತೊಂದು ಗರಿಮೆ ತಂದಿದೆ.

ತಂಡಕ್ಕೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ್ ಎನ್. ಅವರು ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದು, ವಿದ್ಯಾರ್ಥಿಗಳ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ತಂಡದ ಈ ಗಮನಾರ್ಹ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಲತಾ ಎಂ. ಆರ್. ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿ, ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಶಾಲೆಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.

Related posts

ತುಳು ಭಾಷೆಗೆ ಐತಿಹಾಸಿಕ ಗೌರವ: ಅಧಿಕೃತ ಸ್ಥಾನಮಾನ ನೀಡಿರುವುದು ಸಂತಸ ತಂದಿದೆ-ಡಾ|| ಹೆಗ್ಗಡೆ

Suddi Udaya

ಗೇರುಕಟ್ಟೆ: ವರ್ಗಾವಣೆ ಹೊಂದಿದ ಶಿಕ್ಷಕಿ ಮಮತಾರಿಗೆ ಸನ್ಮಾನ

Suddi Udaya

ಸುದ್ದಿ ಉದಯ ವಾರಪತ್ರಿಕೆಯ ವತಿಯಿಂದ ಮುಳಿಯ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡ ‘ರಾಧೆ-ಕೃಷ್ಣ’ ಪೋಟೋ ಸ್ಪರ್ಧಾ ವಿಜೇತ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಣೆ

Suddi Udaya

ಬೆಳ್ತಂಗಡಿ ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದಿಂದ : ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಆರತಿಯವರಿಗೆ ಸನ್ಮಾನ

Suddi Udaya

ತುಳು ಭಾಷೆಗೆ ಐತಿಹಾಸಿಕ ಗೌರವ: ಅಪ್ಪೆ ಬಾಸೆ ತುಳುಕ್ಕು ಮಾನಾದಿಗೆ ತಿಕ್ಕರೆಗ್ ರಾತ್ರೆ ಪಗೆಲ್ ಬೆಂದಿನ ಮಾತೆರ್ಗ್ಲಾ ಸೊಲ್ಮೆಲು-ಶಾಸಕ ಹರೀಶ್ ಪೂಂಜ

Suddi Udaya

ನವದೆಹಲಿಯ ಗಣರಾಜ್ಯೋತ್ಸವ ಪೆರೇಡ್ ಗೆ ಮೂಡುಕೋಡಿಯ ನಿಷ್ಮಾ ಪೂಜಾರಿ ಆಯ್ಕೆ

Suddi Udaya
error: Content is protected !!