30.5 C
ಪುತ್ತೂರು, ಬೆಳ್ತಂಗಡಿ
September 21, 2026
ಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ತುಳು ಭಾಷೆಗೆ ಎರಡನೇ ಅಧಿಕೃತ ರಾಜ್ಯಭಾಷೆ ಸ್ಥಾನಮಾನ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸ್ವಾಗತ: ಡಾ.ಎಂ.ಪಿ.ಶ್ರೀನಾಥ

ಬೆಳ್ತಂಗಡಿ: ತುಳು ಭಾಷೆಯನ್ನು ಕರ್ನಾಟಕದ ಎರಡನೆಯ ಅಧಿಕೃತ ರಾಜ್ಯಭಾಷೆಯಾಗಿ ಘೋಷಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಅವರು ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.

ತುಳುನಾಡಿನ ಜನತೆಯ ದಶಕಗಳ ಕನಸು ಮತ್ತು ನಿರಂತರ ಹೋರಾಟಕ್ಕೆ ಕೊನೆಗೂ ಸೂಕ್ತ ಗೌರವ ಸಿಕ್ಕಂತಾಗಿದೆ. ತುಳುವರು ಇಂದು ಉದ್ಯೋಗ ಹಾಗೂ ವಿವಿಧ ಕಾರಣಗಳಿಗಾಗಿ ಜಗತ್ತಿನಾದ್ಯಂತ ಪಸರಿಸಿದ್ದು, ತಮ್ಮ ವಿಶಿಷ್ಟ ಭಾಷೆ ಮತ್ತು ಸಮೃದ್ಧ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ತುಳು ಭಾಷಿಕರು ಅತ್ಯಂತ ಉದಾರ ಮತ್ತು ಹೃದಯವಂತ ಮನಸ್ಸಿನವರಾಗಿದ್ದು, ತಮ್ಮ ಮಾತೃಭಾಷೆ ತುಳುವಿನೊಂದಿಗೆ ಕನ್ನಡ ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ರಂಗಕ್ಕೂ ಅನಾದಿ ಕಾಲದಿಂದಲೂ ಅಪಾರ ಕೊಡುಗೆ ನೀಡುತ್ತಾ ಬಂದಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳ ನಡುವೆ ನಿಕಟ ಹಾಗೂ ಸಾಮರಸ್ಯದ ಬಾಂಧವ್ಯವಿದೆ. ಈ ಎಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಪರಿಗಣಿಸಿ, ಸರ್ಕಾರವು ತುಳು ಭಾಷೆಗೆ ಎರಡನೇ ಅಧಿಕೃತ ರಾಜ್ಯಭಾಷೆಯ ಸ್ಥಾನಮಾನ ನೀಡಿರುವುದು ಅತ್ಯಂತ ಶ್ಲಾಘನೀಯ ಹಾಗೂ ಚಾರಿತ್ರಿಕ ಹೆಜ್ಜೆಯಾಗಿದೆ.
ಈ ಐತಿಹಾಸಿಕ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರಕ್ಕೆ ಹಾಗೂ ಈ ಹೋರಾಟದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Related posts

ಪುಂಜಾಲಕಟ್ಟೆ – ಚಾಮಾ೯ಡಿ‌ ಹೆದ್ದಾರಿ ಕಾಮಗಾರಿ ಗುತ್ತಿಗೆಯಲ್ಲಿ ಬದಲಾವಣೆ: ಮೊಗ್ರೋಡಿ ಕನ್ ಸ್ಟ್ರಕ್ಷನ್ ಗೆ ನೀಡುವ ಕುರಿತು ನಿಧಾ೯ರ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಬೆಂಚು-ಡೆಸ್ಕ್ ವಿತರಣೆ

Suddi Udaya

ತುಮಕೂರಿನಲ್ಲಿ ‘ಜಿ.ಎನ್.ಆರ್ ಕಲ್ಪತರು ಸಿರಿ ಮಾರ್ಟ್’ ಸಿರಿ ಉತ್ಪನ್ನಗಳ ನೂತನ ಮಾರಾಟ ಮಳಿಗೆ ಶುಭಾರಂಭ

Suddi Udaya

ಜ.5ರಂದು ಕೋರ್ಟುಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ನ್ಯಾಯಾಲಯ ಆದೇಶ

Suddi Udaya

ಮೇಲಂತಬೆಟ್ಟು: ಕೃಷಿಕ ಯುವಕ ಮಂಡಲ (ರಿ.) ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

Suddi Udaya

ಕಾಯರ್ತಡ್ಕ ಸರಕಾರಿ ಪ್ರೌಢಶಾಲೆಗೆ ಕ್ಯಾನ್ ಫಿನ್ ಹೋಂಮ್ಸ್ ವತಿಯಿಂದ ಕೊಡುಗೆ

Suddi Udaya
error: Content is protected !!