30.5 C
ಪುತ್ತೂರು, ಬೆಳ್ತಂಗಡಿ
September 21, 2026
ತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ- ರೂ.116 ಕೋಟಿ ವ್ಯವಹಾರ, ರೂ.47.22 ಲಕ್ಷ ಲಾಭ, ಶೇ.11 ಡಿವಿಡೆಂಟ್

ಬೆಳ್ತಂಗಡಿ: ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮಹಾಸಭೆಯು ಸೆ.20ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಹೆಚ್‌. ಪದ್ಮಗೌಡ ರವರ ಆಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಮಾತನಾಡಿ 2025-26ಸಾಲಿನಲ್ಲಿ 116 ಕೋಟಿ ವ್ಯವಹಾರ ನಡೆಸಿ, ರೂ. 47.22ಲಕ್ಷ ಲಾಭ ಗಳಿಸಿದ್ದು, ಶೇ.11ಡಿವಿಡೆಂಟ್ ನೀಡಲಾಯಿತು. ನಮ್ಮಲ್ಲಿ 4500ಸದಸ್ಯರಿದ್ದು, ಪ್ರಸ್ತುತ 26 ಕೋಟಿಗಿಂತ ಹೆಚ್ಚು ಸಾಲ ಕೊಟ್ಟಿದ್ದು, 25.51ಕೋಟಿ ಠೇವಣಿ ಇದ್ದು, 50ಕೋಟಿ ಡೆಪಾಸಿಟಿ ಗುರಿ ಇದೆ. ನಮ್ಮ ಸೊಸೈಟಿ ಸದೃಢವಾಗಿದೆ. ಮುಂಡಾಜೆ ಶಾಖೆಯಿಂದ ಲಾಭವಾಗಿದೆ. ಕಲ್ಲೇರಿ ಶಾಖೆಯಲ್ಲಿ ಮುಂದಿನ ವರ್ಷ ಲಾಭನಿರೀಕ್ಷೆಯಲ್ಲಿದ್ದೇವೆ.

ನಿವೇಶನ ಖರೀದಿಸುವ ಯೋಚನೆಯಲ್ಲಿದ್ದೇವೆ ಎಂದರು. ತಿಳುವಳಿಕೆ ಪತ್ರ ಚರಣ್ ಓದಿದರು. ಮಹಾಸಭೆಯ ನಡವಳಿಕೆ ಯನ್ನು ನಿತೇಶ್ ಓದಿ ದಾಖಲಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಮುಖ್ಯ ಕಾರ್ಯನಿರ್ವಣಾಧಿಕಾರಿ ಧನಂಜಯ ಕುಮಾರ್ ಮಂಡಿಸಿದರು. ನಿರ್ದೇಶಕರಾದ ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ಸವಣಾಲು, ಜಯಾನಂದ ಗೌಡ, ಗೋಪಾಲಕೃಷ್ಣ ಗುಲ್ಲೋಡಿ, ಸುರೇಶ್ ಕೌಡಂಗೆ, ಯಶವಂತ ಗೌಡ, ಮಾಧವ ಗೌಡ, ಪುರಂದರ ಗೌಡ, ಸುನಿಲ್ ಅನವು, ಉಷಾದೇವಿ, ಭವಾನಿಗೌಡ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಕುಶಾಲಪ್ಪ ಗೌಡ ಸ್ವಾಗತಿಸಿ, ಸೋಮಂತಡ್ಕ ಶಾಖೆಯ ಉಮೇಶ್ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಶ್ರೀನಾಥ್ ಕೆಎಂ ವಂದಿಸಿದರು.

Related posts

ಅಳದಂಗಡಿ ಪಾಲಬೆ ಮನೆಯ ಭವ್ಯ ರಂಗಮಂಟಪದಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

Suddi Udaya

5, 8, 9 ಮತ್ತು 11ನೇ ತರಗತಿಗಳ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ

Suddi Udaya

ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಬಿಜೆಪಿ ಶಾಸಕರ ಹೋರಾಟ ಯಶಸ್ವಿ -ಕಳೆಂಜ ದೇವಣ್ಣ ಗೌಡರ ಮನೆ ತೆರವು ಅರಣ್ಯ ಇಲಾಖೆಯ ಪ್ರಯತ್ನ ವಿಫಲ – ಜಂಟಿ ಸರ್ವೆಗೆ ಸಮ್ಮತಿ: ಸರ್ವೆ ನಡೆಸುವವರೆಗೆ ಯಥಾ ಸ್ಥಿತಿ ಮುಂದುವರಿಕೆ

Suddi Udaya

ಮೊಗ್ರು : ಮುಗೇರಡ್ಕ ದೈವಸ್ಥಾನ ವತಿಯಿಂದ ಮುಗೇರಡ್ಕ ಮುಳುಗು ಸೇತುವೆ ಸಂಚಾರಕ್ಕೆ ಮುಕ್ತ

Suddi Udaya

ಮಾ.14-15: ನಿಡ್ಲೆ ಬೂಡುಜಾಲು ನಾಡ ದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ದೊಂಪದ ಬಲಿ ಜಾತ್ರಾ ಮಹೋತ್ಸವ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ವಾರ್ಷಿಕ ಮಹೋತ್ಸವ ಸಂಪನ್ನ

Suddi Udaya
error: Content is protected !!