32 C
ಪುತ್ತೂರು, ಬೆಳ್ತಂಗಡಿ
September 20, 2026
ತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ–ಶಿಕ್ಷಕ ಸಂಘದ ಸಾಮಾನ್ಯ ಸಭೆ – ರಕ್ಷಕ–ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಅಭಿನಂದನ್ ಹರೀಶ್ ಕುಮಾರ್,ಉಪಾಧ್ಯಕ್ಷರಾಗಿ ಸವಿತಾ ರಮೇಶ್ ಶೆಟ್ಟಿ ಆಯ್ಕೆ

ಬೆಳ್ತಂಗಡಿ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026–27ನೇ ಸಾಲಿನ ರಕ್ಷಕ–ಶಿಕ್ಷಕ ಸಂಘದ ಸಾಮಾನ್ಯ ಸಭೆ ಸೆ.19ರಂದು ನಡೆಯಿತು.

ಸಭೆಗೆ ಲೊರೆಟೊ ಸೆಂಟ್ರಲ್ ಸ್ಕೂಲ್, ಬಂಟ್ವಾಳದ ಪ್ರಾಂಶುಪಾಲರಾದ ವಂದನೀಯ ಧರ್ಮಗುರು ಫಾದರ್ ಜೈಸನ್ ವಿಜಯ್ ಮೋನಿಸ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಅವರು ಮಕ್ಕಳ ಶಿಕ್ಷಣ, ವ್ಯಕ್ತಿತ್ವ ವಿಕಸನ, ಬೆಳವಣಿಗೆ ಹಾಗೂ ಉತ್ತಮ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರದ ಕುರಿತು ಪೋಷಕರಿಗೆ ಅಗತ್ಯವಾದ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ 2026–27ನೇ ಸಾಲಿನ ರಕ್ಷಕ–ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಅಭಿನಂದನ್ ಎಚ್. ಹಾಗೂ ಉಪಾಧ್ಯಕ್ಷರಾಗಿ ಸವಿತಾ ರಮೇಶ್ ಶೆಟ್ಟಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ರೆವ. ಸಿಸ್ಟರ್ ಪ್ರೀತಿ ಜಾರ್ಜ್, ಶಾಲಾ ಸಂಚಾಲಕಿ ರೆವ. ಸಿಸ್ಟರ್ ಎಲ್ಸಿ ಪ್ಯಾಲೆಟ್, ರಕ್ಷಕ–ಶಿಕ್ಷಕರ ಸಮಿತಿಯ ಮಾಜಿ ಅಧ್ಯಕ್ಷ ರೆಜಿ ಜಾರ್ಜ್, ಉಪಾಧ್ಯಕ್ಷೆ ಸುಮಿತ ಫೆರ್ನಾಂಡಿಸ್, ಶಾಲಾ ಸಿಬ್ಬಂದಿ ಕಾರ್ಯದರ್ಶಿ ಲಾವಣ್ಯ, ಪೋಷಕರು ಹಾಗೂ ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ರೆವ. ಸಿಸ್ಟರ್ ಪ್ರೀತಿ ಜಾರ್ಜ್ ಗಣ್ಯರನ್ನು ಸ್ವಾಗತಿಸಿದರು. ಸಹ ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಪ್ರಮೀಳಾ ಶೆಟ್ಟಿ ವಂದಿಸಿದರು.

Related posts

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಉಜಿರೆ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ಮೈರೋಳ್ತಡ್ಕ: ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉನ್ನತಿ ಫೌಂಡೇಶನ್ ವತಿಯಿಂದ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ

Suddi Udaya

ನಾರಾವಿ ಮಾಂಡೋವಿ ಮೋಟಾರ್ಸ್ ನಲ್ಲಿ 100 ನೇ ಕಾರಿನ ಕೀ ಹಸ್ತಾಂತರ ಕಾರ್ಯಕ್ರಮ

Suddi Udaya

ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಪ್ರಾಧ್ಯಾಪಕ ಸುವೀರ್ ಜೈನ್ ಅವರಿಗೆ ಪಿಎಚ್. ಡಿ. ಪದವಿ

Suddi Udaya

ಬೆಳ್ತಂಗಡಿ ತಹಶೀಲ್ದಾರ ಯಾಗಿ ಸುರೇಶ್ ಕುಮಾರ್ ಟಿ ಎಸ್ ನೇಮಕ

Suddi Udaya
error: Content is protected !!