September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎರಡು ದಿನಗಳಿಂದ ಬೆಳ್ತಂಗಡಿ ನಗರಕ್ಕೆ ಪೂರೈಕೆಯಾಗದ ಕುಡಿಯುವ ನೀರು: ಕುಡಿಯವ ನೀರಿಗಾಗಿ ಜನರ ಪರದಾಟ


ಸಾಂದರ್ಬಿಕ ಚಿತ್ರ

ಬೆಳ್ತಂಗಡಿ: ಬೆಳ್ತಂಗಡಿ ನಗರಕ್ಕೆ ಬೇಕಾದ ನೀರು ಇದೆ. ಸರಬರಾಜಿಗೆ ಎಲ್ಲಾ ವ್ಯವಸ್ಥೆ ಇದೆ. ಆದರೆ ಕಳೆದ ಎರಡು ದಿನಗಳಿಂದ ಬೆಳ್ತಂಗಡಿ ಪಟ್ಟಣ ಪಂಚಾಯತು ವ್ಯಾಪ್ತಿಯ ನಾಗರಿಕರು ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಪಂಚಾಯತದ ಹೊರಗುತ್ತಿಗೆ ನೌಕರರು ಬೆಂಗಳೂರಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಗಾಗಿ ಪ್ರತಿಭಟನೆ ನಡೆಸುತ್ತಿರುವುದು.

ರಾಜ್ಯದ ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ಪೌರನೀರು ಸರಬರಾಜು ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ ವಿಶೇಷ ನೇರ ನೇಮಕಾತಿ, ನೇರಪಾವತಿ ಮಾಡಲು ಆಗ್ರಹಿಸಿ ಸೆ.೨೧ರಂದು ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಮುಖ್ಯ ಮಂತ್ರಿಗಳ ಮನೆಯವರೆಗೆ ಬೃಹತ್ ಮಟ್ಟದ ಪಾದಯಾತ್ರೆ ಹಮ್ಮಿಕೊಂಡಿದ್ದು, ಇದರಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಹೊರಗುತ್ತಿಗೆ ನೀರು ಸರಬರಾಜು ಸಹಾಯಕರು ಪಾಲ್ಗೊಳ್ಳುಗೊಂಡಿದ್ದಾರೆ.

ಇದರಿಂದಾಗಿ ಬೆಳ್ತಂಗಡಿ ನಗರಕ್ಕೆ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿದೆ. ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸುವುದು ಸಹಜ. ಆದರೆ ಪಂಚಾಯತು ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳು ಇದಕ್ಕೆ ಬದಲಿ ವ್ಯವಸ್ಥೆ ಮಾಡದೆ ಇರುವುದೇ ಈ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ. ಬೆಳ್ತಂಗಡಿ ನಗರದಲ್ಲಿ ಹಲವು ಮನೆಯವರು ಪಟ್ಟಣ ಪಂಚಾಯತದಿAದ ಪೂರೈಕೆ ಮಾಡುವ ಕುಡಿಯುವ ನೀರನ್ನೇ ಅವಲಂಭಿಸಿದ್ದಾರೆ. ಈಗ ನೀರಿಲ್ಲದೆ ಜನರು ಅಲೆದಾಟ ನಡೆಸುವ ಸ್ಥಿತಿಯಾಗಿದ್ದು, ಸಂಬAಧಟ್ಟ ಅಧಿಕಾರಿಗಳು ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

Related posts

ಅಳದಂಗಡಿ ಶ್ರೀ ಸೋಮನಾಥೇಶ್ವರೀ ಸನ್ನಿಧಿಯಲ್ಲಿ ಧೃಡ ಕಲಶ ಹಾಗೂ ಅಭಿನಂದನಾ ಸಮಾರಂಭ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಶಶಿಧರ್ ಶೆಟ್ಟಿ ನವಶಕ್ತಿ ಆಯ್ಕೆ

Suddi Udaya

ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಶ್ರೀ ನಾಗರಕ್ತೇಶ್ವರಿ ವೆಲ್ಡಿಂಗ್ಸ್ ನವರಿಂದ ಸ್ಟೀಲ್ ರೈಲಿಂಗ್ಸ್ ಮತ್ತು ನೇಮ್ ಬೋರ್ಡ್ ಅಳವಡಿಕೆ

Suddi Udaya

ಸಿರಿ ಕೇಂದ್ರ ಕಚೇರಿಯಲ್ಲಿ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ವನಮಹೋತ್ಸವ

Suddi Udaya

ಶಿಬಾಜೆ ದಲಿತ ಯುವಕ ಶ್ರೀಧರನ ಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯಿಸಿ ದಲಿತ ಸಂಘಟನೆಗಳ ನಿರಂತರ ಹೋರಾಟ: ಸಿ.ಐ.ಡಿ ತನಿಖೆಗೆ ಒಪ್ಪಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆದೇಶ: ಡಿಎಸ್‌ಎಸ್ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಣೆ

Suddi Udaya

ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ.172 ಕೋಟಿ ವ್ಯವಹಾರ, ರೂ. 87 ಲಕ್ಷ ಲಾಭ, ಶೇ.4 ಡಿವಿಡೆಂಡ್

Suddi Udaya
error: Content is protected !!