28.6 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ತುಳುವರ ಹಲವು ದಶಕಗಳ ಕನಸು: ಶೈಲೇಶ್ ಆರ್. ಜೆ.

ಬೆಳ್ತಂಗಡಿ : ತುಳುವರ ಹಲವು ದಶಕಗಳ ಕನಸು ತುಳು ಭಾಷೆಯು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ರಾಜ್ಯ ಭಾಷೆಯಾಗಬೇಕೆಂಬುದು. ತುಳು ಭಾಷೆಯು ಲಕ್ಷ ಅರ್ಹತೆಗಳನ್ನು ಹೊಂದಿತ್ತು ಮತ್ತು ತುಳುವರ ಲಕ್ಷ ವಿವಿಧ ರೀತಿಯ ಹೋರಾಟಗಳ ಫಲಶೃತಿಯೆ ತುಳು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ಎಂದು ತುಳುನಾಡ್ ಒಕ್ಕೂಟ ಸಂಸ್ಥಾಪಕರು ಶೈಲೇಶ್ ಆರ್. ಜೆ. ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರು ಮಂಗಳೂರಲ್ಲಿ ಸಚಿವ ಸಂಪುಟ ಸಭೆ ನಡೆಸಿ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು ಈ ಮೂಲಕ ಸಮಸ್ತ ತುಳುವರ ಹೃದಯದ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.

ತುಳು ಭಾಷೆಗೆ ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ರಾಜ್ಯ ಭಾಷೆಯ ಸ್ಥಾನಮಾನಕ್ಕಾಗಿ ಸರಕಾರಿ ಮಟ್ಟದಲ್ಲಿ ವಿಶೇಷ ಪ್ರಯತ್ನ ಪಟ್ಟ ಸಚಿವರಾದ ಯು. ಟಿ. ಖಾದರ್ ಮತ್ತು ಪುತ್ತೂರಿನ ಶಾಸಕ ಆಶೋಕ್ ಕುಮಾರ್ ರೈಯವರಿಗೆ ಮತ್ತು ಎಲ್ಲಾ ಸಚಿವರಿಗೆ, ಶಾಸಕರಿಗೆ ಸಮಸ್ತ ತುಳುವರ ಪರವಾಗಿ ಹೃದಯಪೂರ್ವಕ ಧನ್ಯವಾದಗಳು.

ಮುಂದಿನ ಅಧಿವೇಶನದಲ್ಲಿ ತುಳು ಅಧಿಕೃತ ಭಾಷೆಯ ಮಸೂದೆಯನ್ನು ಮಂಡಿಸಿದಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜೊತೆಗೆ ಈ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಘಟ್ಟ ಪ್ರದೇಶದ ತಾಲ್ಲೂಕುಗಳನ್ನು ಸೇರಿಸುವಂತೆ ತುಳುನಾಡಿನ ಶಾಸಕರು ಒತ್ತಾಯಿಸಬೇಕು. ಏಕೆಂದರೆ ಘಟ್ಟ ಪ್ರದೇಶದ ಈ ತಾಲೂಕುಗಳಲ್ಲಿ ಬಹುಸಂಖ್ಯಾತ ತುಳುವರು ಅನಾದಿ ಕಾಲದಿಂದಲೂ ವಾಸಿಸುತ್ತಿದ್ದು, ಈ ಭಾಗಗಳ ತುಳುವರಿಗೂ ಅನುಕೂಲವಾಗುವಂತೆ ಈ ತಾಲೂಕುಗಳನ್ನು ತುಳು ಎರಡನೇ ಅಧಿಕೃತ ಭಾಷೆಯ ಮಸೂದೆಯಲ್ಲಿ ಸೇರ್ಪಡೆಗೊಳಿಸಬೇಕು ಈ ಮೂಲಕ ವಿನಂತಿಸುತ್ತಿದ್ದೇವೆ.


Related posts

ಬೆಳ್ತಂಗಡಿ: ಸಂಜಯನಗರ ನಿವಾಸಿ ಅಬ್ದುಲ್ ರಹಿಮಾನ್ ಹೃದಯಾಘಾತದಿಂದ ನಿಧನ

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 78655 ಅಂತರದಿಂದ ಭಾರಿ ಮುನ್ನಡೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಹಿನ್ನಡೆ

Suddi Udaya

ಭಾರೀ ಗಾಳಿ ಮಳೆ: ಇಂದಬೆಟ್ಟುವಿನಲ್ಲಿ ಮನೆಗೆ ಮರ ಬಿದ್ದು ಹಾನಿ: ವಿದ್ಯುತ್ ಕಂಬ ಹಾಗೂ ರಬ್ಬರ್ ಗಿಡಗಳು ಧರಾಶಾಹಿ

Suddi Udaya

ತಾಲೂಕು ಮಟ್ಟದ ಅಥ್ಲೆಟಿಕ್ಸ್ : ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯ 4 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಪರ್ಸಿನಿಂದ ರೂ 2.16ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 5 ಸಾವಿರ ನಗದು ಕಳವು

Suddi Udaya

ಕೃಷಿ ಇಲಾಖೆಯಲ್ಲಿ ಜಲಾನಯನ ಪ್ರದೇಶದ ರೈತರಿಗೆ ಕೈಗಾಡಿ, ಪವರ್ ವಿಹಾರ್ ಯಂತ್ರೋಪಕರಣ ವಿತರಣೆ

Suddi Udaya
error: Content is protected !!