28.6 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಾಂಡವರಕಲ್ಲು ಸರಕಾರಿ ಶಾಲಾ ಕೊಠಡಿಗಳ ಗೋಡೆ ಮೇಲೆ ಬಣ್ಣದ ಚಿತ್ತಾರ ; ಶಿಕ್ಷಣಭಿಮಾನಿ ರಝಾಕ್ ಚಾನ್ಸ್ ರವರ ಕೊಡುಗೆ

ಬೆಳ್ತಂಗಡಿ: ಸರಕಾರಿ ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ಸಮಾಜಸೇವಕ ರಝಾಕ್ ಚಾನ್ಸ್ ಅವರು ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆಯ ಎಲ್‌ಕೆಜಿ/ಯುಕೆಜಿ ತರಗತಿಯ ಕೊಠಡಿಯ ಗೋಡೆಗಳ ಮೇಲೆ ಜ್ಞಾನಯುಕ್ತ ಮತ್ತು ಸುಂದರವಾದ ಚಿತ್ರಗಳನ್ನು ಬರೆಸಿ ಶಾಲೆಗೆ ಕೊಡುಗೆ ನೀಡಿ ಶಿಕ್ಷಣ ಪ್ರೇಮ ಬೆಳೆಸಿದ್ದಾರೆ.

ಗೋಡೆಗಳ ಮೇಲೆ ಜ್ಞಾನಯುಕ್ತ ಮತ್ತು ಸುಂದರವಾದ ಚಿತ್ರಗಳು, ವರ್ಣಮಾಲೆ, ಗಣಿತದ ಸೂತ್ರಗಳು, ಪ್ರಾಣಿ-ಪಕ್ಷಿಗಳು, ನಕ್ಷೆಗಳು ಮತ್ತು ವಿಜ್ಞಾನದ ಚಿತ್ರಗಳನ್ನು ಬಿಡಿಸಲಾಗುತ್ತಿದ್ದು, ಇವು ವಿದ್ಯಾರ್ಥಿಗಳಿಗೆ ದೃಶ್ಯ ಮಾಧ್ಯಮದ ಮೂಲಕ ಸುಲಭವಾಗಿ ಅರ್ಥೈಸಿಕೊಳ್ಳಲು ಕಲಿಕಾ ಸಾಧನವನ್ನಾಗಿ ಪರಿವರ್ತಿಸಲಾಗುತ್ತಿದೆ.

ತಮ್ಮ ಸ್ವಂತ ಖರ್ಚಿನಿಂದ ರೂ.50ಸಾವಿರ ವೆಚ್ಚದಲ್ಲಿ ವರ್ಣರಂಜಿತ ಚಿತ್ರಗಳನ್ನು ಬರೆಯಲಾಗಿದ್ದು ಸರಕಾರಿ ಶಾಲೆಗಳ ಅಬಿವೃದ್ಧಿಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಬಲರ್ವಧನೆ ನೀಡಿದ್ದಂತೆ ಹಾಗಾಗಿ ತನ್ನ ದುಡಿಮೆ ಒಂದಿಷ್ಟು ಭಾಗ ಸಮಾಜಮುಖಿ ಕಾರ್ಯಗಳಿಗೆ ಮೀಸಲಿರಿಸಿರುವುದಾಗಿ ರಝಾಕ್ ಚಾನ್ಸ್ ಹೇಳಿದರು.

ಶಾಲೆಯ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನೀಡಲಾದ ಈ ಸಹಾಯವು ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

ದೇಣಿಗೆ ಸ್ವೀಕರಿಸಿದ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ರಝಾಕ್ ಚಾನ್ಸ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮಾಜದ ವಿವಿಧ ವರ್ಗಗಳ ಸಹಕಾರ ಅಗತ್ಯವಾಗಿದ್ದು, ಇಂತಹ ಸೇವಾ ಮನೋಭಾವ ಇತರರಿಗೂ ಪ್ರೇರಣೆಯಾಗಲಿದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟರು.

ರಝಾಕ್ ಅವರು ಸ್ಥಳೀಯವಾಗಿ ರಸ್ತೆ ದುರಸ್ತಿ, ಕುಡಿಯುನೀರಿನ ಸಮಸ್ಯೆ, ಹಾಗೂ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಸಹಾಯ ನೀಡುತ್ತಿರುವುದು ಅವರು ಸಮಾಜಮುಖಿ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Related posts

ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ: ರೂ. 25.82 ಲಕ್ಷ ನಿವ್ವಳ ಲಾಭ – ಸದಸ್ಯರಿಗೆ ಶೇ.10 ಡಿವಿಡೆಂಡ್

Suddi Udaya

ತುಳುವಿಗೆ ಎರಡನೇ ಅಧಿಕೃತ ಭಾಷೆಯ ಸ್ಥಾನ ನೀಡುವಂತೆ ವಿಧಾನಸಭೆಯಲ್ಲಿ ಆಗ್ರಹ

Suddi Udaya

ಸೆ.10: ನಾಲ್ಕೂರು ಯುವಶಕ್ತಿ ಫ್ರೆಂಡ್ಸ್ ನಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ: ಧಾರ್ಮಿಕ ಕಾರ್ಯಕ್ರಮ, ಮುದ್ದು ಕೃಷ್ಣ ಸ್ಪರ್ಧೆ, ವಿವಿಧ ಆಟೋಟ ಸ್ಪರ್ದೆಗಳು

Suddi Udaya

ಅಕ್ರಮ ಮದ್ಯ ಮಾರಾಟಕ್ಕೆ ಯತ್ನ: ಧರ್ಮಸ್ಥಳ ಪೊಲೀಸರಿಂದ ದಾಳಿ ಆರೋಪಿಯ ಬಂಧನ

Suddi Udaya

ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡ ಷಷ್ಠಿ ಪೂರ್ತಿಯ ಸಮಾರೋಪ ಸಮಾರಂಭ ಕಾರ್ಯಕ್ರಮದ ಪ್ರಯುಕ್ತ ಪೂರ್ವಭಾವಿ ಪ್ರಮುಖರ ಸಮಾಲೋಚನೆ ಸಭೆ

Suddi Udaya

ಜಿಲ್ಲಾ ಮಟ್ಟದ ಛಾಯಾ ಕಲಾ ವೈಭವ ಸಾಂಸ್ಕೃತಿಕ ಸ್ಪರ್ಧೆ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ತೃತೀಯ ಸ್ಥಾನ

Suddi Udaya
error: Content is protected !!