September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ವಲಯ ಮಟ್ಟದ ಕ್ರೀಡಾಕೂಟ: ಎಲ್ . ಸಿ ಆರ್ ವಿದ್ಯಾಸಂಸ್ಥೆಗೆ ಪ್ರಶಸ್ತಿ

ಕಕ್ಯಪದವು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ರಾಯಿ ಕ್ಲಸ್ಟರ್ ನೇತೃತ್ವದೊಂದಿಗೆ ವಾಮದಪದವು ವಲಯದ ಕ್ರೀಡಾ ಕೂಟವು ಸೆ. 21 ರಂದು ಎಸ್.ವಿ. ಎಸ್ ದೇವಳ ಆಂಗ್ಲಮಾಧ್ಯಮ ಶಾಲಾ ಕ್ರೀಡಾಂಗಣ ಬಂಟ್ವಾಳದಲ್ಲಿ ನಡೆಯಿತು.

ಈ ಕ್ರೀಡಾ ಕೂಟದಲ್ಲಿ ಎಲ್ ಸಿ .ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪ್ರೌಢವಿಭಾಗದ ಒಟ್ಟು 14 ವಿದ್ಯಾರ್ಥಿಗಳು ಭಾಗವಹಿಸಿದರು. ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಾಲಕ ಬಾಲಕಿಯರ 17ರ ವಯೋಮಾನದ (ಜಾವೆಲಿನ್ ) ಈಟಿ ಎಸೆತದ ಸ್ಪರ್ಧೆಯಲ್ಲಿ ಧನ್ವಿತಾ 9ನೇ ತರಗತಿ ಪ್ರಥಮ ಸ್ಥಾನ, ಜಿರಾಗ್ ಕೆ ಎಸ್ 10ನೇ ತರಗತಿ ಪ್ರಥಮ ಸ್ಥಾನ , ಆದ್ಯ ಜಿ ಕೆ 9ನೇ ತರಗತಿ ತೃತೀಯ ಸ್ಥಾನ, ರಾಹೀದ್ 9ನೇ ತರಗತಿ ತೃತೀಯ ಸ್ಥಾನ ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ಅಪರ್ಣ ಶೆಟ್ಟಿ 8 ನೇ ತರಗತಿ ದ್ವಿತೀಯ ಸ್ಥಾನ, ರಾಹೀದ್ 9ನೇ ತರಗತಿ ತೃತೀಯ ಸ್ಥಾನ ಹಾಗೂ ಹರ್ಡಲ್ಸ್ ಓಟದಲ್ಲಿ ಶ್ರಾವಿತ್ 10ನೇ ತರಗತಿ ದ್ವಿತೀಯ ಸ್ಥಾನ ವನ್ನು ಪಡೆದಿರುತ್ತಾರೆ. ಹಾಗೂ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಅಧೀಶ್ ಎಸ್ ಪಿ 9 ನೇ ತರಗತಿ ದ್ವಿತೀಯ ಸ್ಥಾನ , 1500 ಮೀಟರ್ ಓಟದ ಸ್ಪರ್ದೆಯಲ್ಲಿ ಭವಿಷ್ 9ನೇ ತರಗತಿ ತೃತೀಯ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಪ್ರಶಸ್ತಿ ವಿಜೇತ ಎಲ್ಲಾ ಕ್ರೀಡಾ ಪಟುಗಳು ಮುಂದೆ ನಡೆಯುವ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿಯರಾದ ಹರಿಣಾಕ್ಷಿ ಜಿ.ಕೆ ಮತ್ತು ಪ್ರಥ್ವಿರಾಜ್ ಇವರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿರುತ್ತಾರೆ.

Related posts

ಪಣಕಜೆ ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ವತಿಯಿಂದ ಅಶಕ್ತ ಕುಟುಂಬಗಳಿಗೆ ಧನ ಸಹಾಯ

Suddi Udaya

ನಾರಾವಿ: ಪರಸ್ಪರ ಯುವಕ ಮಂಡಲ ನೂತನ ಅಧ್ಯಕ್ಷರಾಗಿ ಅಶೋಕ್ ಎಂ.ಕೆ ಹಾಗೂ ಪರಸ್ಪರ ಸೇವಾ ಬ್ರಿಗೇಡಿನ ಅಧ್ಯಕ್ಷರಾಗಿ ಪ್ರವೀಣ್ ದೇವಾಡಿಗ ಆಯ್ಕೆ

Suddi Udaya

ಬೆಳ್ತಂಗಡಿ : ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿ ಕಿಶೋರ್ ಪಿ ನೇಮಕ

Suddi Udaya

ಕೊಕ್ಕಡ ಶ್ರೀ ಲಕ್ಷ್ಮೀ ಲೇಡಿಸ್ ಬ್ಯೂಟಿಪಾರ್ಲರ್ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಮಾಲಾಡಿ ಶಕ್ತಿ ಕೇಂದ್ರದ ವತಿಯಿಂದ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಒಂಬತ್ತನೇ ಸ್ಥಾನ ಪಡೆದ ಕು| ಅನನ್ಯಾ ರಿಗೆ ಸನ್ಮಾನ

Suddi Udaya

ಮೂಡಿಗೆರೆ ಜಾವಳಿ ಸಮೀಪ ತೋಟದ ಮನೆ ದರೋಡೆ ಪ್ರಕರಣ ; ಬೆಳ್ತಂಗಡಿಯ ಖಲಂದರ್ ಆಲಿಯಾಸ್ ಮೊಹಮ್ಮದ್ ಗೌಸ್, ಸೇರಿದಂತೆ ಐವರು ದರೋಡೆಕೋರರ ಬಂಧನ

Suddi Udaya
error: Content is protected !!