ಬೆಳ್ತಂಗಡಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ) ವತಿಯಿಂದ ಪದವಿ ಪೂರ್ವ ವಿಭಾಗದ ಬಾಲಕ ಬಾಲಕಿಯರಿಗೆ ನಡೆಸಲಾದ ಬೆಳ್ತಂಗಡಿ ತಾಲೂಕಿನ ಖೋ ಖೋ ಪಂದ್ಯಾಟವು ಸರಕಾರಿ ಪದವಿ ಪೂರ್ವ ಕಾಲೇಜು ಅಳದಂಗಡಿ ಇಲ್ಲಿ ಜರುಗಿತು.
ಇದರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ನಡ ಇಲ್ಲಿನ ಬಾಲಕರ ಹಾಗೂ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿತು. ಬಾಲಕರ ವಿಭಾಗದಲ್ಲಿ ಅಖಿಲೇಶ್ “ಬೆಸ್ಟ್ ರನ್ನರ್” ಪ್ರಶಸ್ತಿಯನ್ನು ಬಾಲಕಿಯರ ವಿಭಾಗದಲ್ಲಿ ಪ್ರಿಯಾ”ಬೆಸ್ಟ್ ಚೆಸರ್” ಪ್ರಶಸ್ತಿಯನ್ನು ಪಡೆದುಕೊಂಡರು. ಕ್ರೀಡಾಳುಗಳಾದ ಅಖಿಲೇಶ್, ಮಹಮ್ಮದ್ ಸುಹೇಲ್, ಮಹಮ್ಮದ್ ಮನ್ಸೂರ್, ಪ್ರಿಯಾ, ಲಾವಣ್ಯ, ಗಾಯತ್ರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಸಂಸ್ಥೆಯ ಪ್ರಾಂಶುಪಾಲರಾದ ಲಿಲ್ಲಿ ಪಿ ವಿ ಇವರ ಮಾರ್ಗದರ್ಶನದಲ್ಲಿ ಕ್ರೀಡಾಧಿಕಾರಿಯಾದ ಶ್ರೀಮತಿ ವಸಂತಿ ಪಿ ಇವರ ನೇತೃತ್ವದಲ್ಲಿ, ಕ್ರೀಡಾಭಿಮಾನಿ ಅಜಿತ್ ಇವರ ಸಮರ್ಥ ಮುಂದಾಳುತ್ವದಲ್ಲಿ, ಸುಕನ್ಯಾ ಹಾಗೂ ಸವಿತಾ ಸೇರಿದಂತೆ ಎಲ್ಲಾ ಉಪನ್ಯಾಸಕರ ಸಹಕಾರದೊಂದಿಗೆ ಈ ಸಾಧನೆ ಸಾಧ್ಯವಾಯಿತು.











