September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಈದ್‌ಮಿಲಾದ್ ಆಚರಣೆ

ಬೆಳ್ತಂಗಡಿ: ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ಈದ್ ಮಿಲಾದ್ ಆಚರಣೆ ಅರ್ಥಪೂರ್ಣವಾಗಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಸೂರಜ್ ಚಾರ್ಲ್ಸ್ ನ್ಯೂನಸ್ ವಹಿಸಿದ್ದು, ಕಾಲೇಜಿನಲ್ಲಿ ಸರ್ವಧರ್ಮದ ಹಬ್ಬಗಳನ್ನೂ ಆಚರಿಸಲಾಗುತ್ತಿದೆ. ಇದು ವಿದ್ಯಾರ್ಥಿ ಜೀವನದಿಂದಲೇ ಸೌಹಾರ್ದತೆಯ ನೆಲೆಗಟ್ಟನ್ನು ಗಟ್ಟಿಗೊಳಿಸುವ ಸಲುವಾಗಿ ಮತ್ತು ಪರಸ್ಪರ ಹಬ್ಬದ ಸಂದೇಶ ಹಂಚಿಕೆ, ಅದರೊಳಗಿನ ಸಂಸ್ಕೃತಿ ಸಾರ ತಿಳಿಯಲು ಅನುಕೂಲವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಮಾತನಾಡಿ, ಕ್ರೈಸ್ತ ಸಂಸ್ಥೆಯಾದ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಈದ್ ಹಬ್ಬವನ್ನು ಆಚರಿಸಲಾಗುತ್ತಿರುವುದು ವಿಶೇಷ. ಇದರ ಸಂಯೋಜಕರಾಗಿ ಉಪನ್ಯಾಸಕರಾದ ಅಶ್ವಿನಿ ಮತ್ತು ಪ್ರಿಯಾ ಅವರು ಜವಾಬ್ದಾರಿ ತೆಗೆದುಕೊಂಡಿದ್ದು, ಮತೀಯ ಸೌಹಾರ್ದತೆ ಸೂಚಿಸುತ್ತದೆ. ಪ್ರವಾದಿಯವರು ಹುಟ್ಟುವ ಕಾಲದಲ್ಲಿ ಅಂಧಕಾರದ ಕಾರ್ಗತ್ತಲು ಇತ್ತು. ಹೆಣ್ಣು ಮಗುವಿನ ಜೀವಂತ ಹೂಳುವಿಕೆ, ದುಡಿದವಿಗೆ ವೇತನ ನೀಡದೆ ತಾರತಮ್ಯ, ವ್ಯಸನಗಳ ಗೂಡಾಗಿದ್ದ ಜನತೆಗೆ ಪರಿವರ್ತನೆಯ ಮಾನವೀಯ ಸಂದೇಶದ ಜೊತೆಗೆ ಅವರ ಜನನವಾಯಿತು ಎಂದರು.‌

ಕಾರ್ಯಕ್ರಮ ಸಂಯೋಜಕರಾದ ಅಶ್ವಿನಿ ಮತ್ತು ಪ್ರಿಯಾ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳೇ ನಿರ್ವಹಿಸಿದ ಕಾರ್ಯಕ್ರಮದಲ್ಲಿ
ವಫಾ ಸ್ವಾಗತಿಸಿದರು. ಯುಸೈರ ಹಾಗೂ ಸೌಮ್ಯಾ ನಿರೂಪಿಸಿದರು.
ವಿಯಾನಿ ವಂದಿಸಿದರು. ಇಸ್ಲಾಮಿಕ್ ಸಾಂಪ್ರದಾಯಿಕ ದಪ್ಫ್ ಪ್ರದರ್ಶನ, ಪ್ರವಾದಿ ನಾಮಸಂಕೀರ್ತನೆಯ ಮೌಲೀದ್ ಮತ್ತು ಬುರ್ದಾ ಆಲಾಪನೆ ಸಹಿತ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಾಯಿತು. ಎಲ್ಲಾ ಉಪನ್ಯಾಸಕ ವೃಂದದವರು ಸಹಕರಿಸಿದರು.

Related posts

ಪಾಂಡವರಕಲ್ಲು : ಕಜೆಕಾರು ಶ್ರೀ ಮಹಾದೇವದೇವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿಯಿಂದ ದಿ| ಕಾಶಿ ಶೆಟ್ಟಿ ಹಾಗೂ ದಿ| ಎಮ್ ಜಿ ಶೆಟ್ಟಿ ಇವರಿಗೆ ನುಡಿನಮನ

Suddi Udaya

ಹಲವಾರು ಮೃತದೇಹ ಹೂತು ಹಾಕಿದ ದೂರು ಪ್ರಕರಣ ಧರ್ಮಸ್ಥಳ ಶೌಚಾಲಯದ ಸುತ್ತಮುತ್ತ ಸ್ಥಳ ಮಹಜರು

Suddi Udaya

ಕೊಕ್ಕಡ: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಪಿಟ್ ಇಂಡಿಯಾ ಕಾರ್ಯಕ್ರಮ

Suddi Udaya

ಉಜಿರೆ ಬೆನಕ ಆಸ್ಪತ್ರೆಯಲ್ಲಿ ಮಾಜಿ ಸೈನಿಕರ ನಗದು ರಹಿತ ಚಿಕಿತ್ಸಾ ಯೋಜನೆಯ ಉದ್ಘಾಟನೆ ಹಾಗೂ ಸನ್ಮಾನ

Suddi Udaya

ಲಾಯಿಲ ಅರಣ್ಯ ಪ್ರದೇಶದಲ್ಲಿ ಬೀಜ ಬಿತ್ತೋತ್ಸವ ಕಾರ್ಯಕ್ರಮ

Suddi Udaya
error: Content is protected !!