September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆಯ ವಿಶಾಲ್ ಟ್ರೇಡರ್ಸ್‌ಗೆ ಸಿನಿ ತಾರೆ ಐಂದ್ರಿತಾ ರೇ ಭೇಟಿ

ಬೆಳ್ತಂಗಡಿ: ಉಜಿರೆ ಸಮೀಪದ ಟಿಬಿ ಕ್ರಾಸ್‌ನ ವಿಶಾಲ್ ಕಾಂಪ್ಲೆಕ್ಸ್‌ನಲ್ಲಿರುವ ಕಲರ್ ಕ್ಯೂಬ್ ವಿತ್ ಏಷಿಯನ್ ಪೈಂಟ್ಸ್‌ನ ವಿಶಾಲ್ ಟ್ರೇಡರ್ಸ್ ಮಳಿಗೆಗೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಐಂದ್ರಿತಾ ರೇ ಅವರು ವಿಶೇಷ ಅತಿಥಿಯಾಗಿ ಭೇಟಿ ನೀಡಿ, ಸಂಸ್ಥೆಗೆ ಶುಭ ಹಾರೈಸಿದರು.

ವಿಶಾಲ್ ಕಾಂಪ್ಲೆಕ್ಸ್‌ನ ಮಾಲಕರಾದ ವಿಶಾಲ್ ಆಗಸ್ಟಿನ್ ಅವರ ಮಾಲಕತ್ವದ ವಿಶಾಲ್ ಟ್ರೇಡರ್ಸ್ ಮಳಿಗೆಗೆ ಸಿನಿ ತಾರೆಯ ಆಗಮನ ಗ್ರಾಹಕರು ಹಾಗೂ ಅಭಿಮಾನಿಗಳ ಗಮನ ಸೆಳೆಯಿತು.

ಕಳೆದ ಎಂಟು ವರ್ಷಗಳಿಂದ ವಿಶಾಲ್ ಕಾಂಪ್ಲೆಕ್ಸ್ ಕಾರ್ಯಾಚರಿಸುತ್ತಿದ್ದು, ಇದರ ಅಂಗವಾಗಿ ಕಲರ್ ಕ್ಯೂಬ್ ವಿತ್ ಏಷಿಯನ್ ಪೈಂಟ್ಸ್‌ನ ವಿಶಾಲ್ ಟ್ರೇಡರ್ಸ್ ಮಳಿಗೆಯು ಸೆ. 9ರಂದು ಶುಭಾರಂಭಗೊಂಡಿದೆ. ಗ್ರಾಹಕರ ಕನಸಿನ ಮನೆಗಳ ಅಂದವನ್ನು ಹೆಚ್ಚಿಸಲು ಗುಣಮಟ್ಟದ ಪೇಂಟ್ ಹಾಗೂ ಸಂಬಂಧಿತ ಉತ್ಪನ್ನಗಳ ಅತ್ಯುತ್ತಮ ಆಯ್ಕೆಗಳನ್ನು ಒದಗಿಸುವ ಉದ್ದೇಶದಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಐಂದ್ರಿತಾ ರೇ ಅವರ ಭೇಟಿ ಸಂದರ್ಭದಲ್ಲಿ ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

Related posts

ಉರುವಾಲು: ಗ್ರಾಮ ದೈವಗಳಿಗೆ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

Suddi Udaya

ಬೆಳ್ತಂಗಡಿ ಹಾಗೂ ಬಂಗಾಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ: ಬೆಳ್ತಂಗಡಿ ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

Suddi Udaya

ಲಾಯಿಲ: 35ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ತೆಂಕಕಾರಂದೂರು: ರಸ್ತೆಯ ಬದಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ

Suddi Udaya

ವಾಣಿ ಆಂ.ಮಾ. ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ. ಕೆ ರವರಿಗೆ ‘ರಾಜ್ಯ ಮಟ್ಟದ ವಿದ್ಯಾರತ್ನ ಪ್ರಶಸ್ತಿ’ ಪ್ರದಾನ

Suddi Udaya

ಶ್ರೀ ಧ .ಮಂ. ಪ್ರೌಢ ಶಾಲೆಯಲ್ಲಿ ಭೌತಶಾಸ್ತ್ರ ಶಿಕ್ಷಕರ ಕಾರ್ಯಾಗಾರ

Suddi Udaya
error: Content is protected !!