November 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೋಧಕರ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಶುಭಾರಂಭ

ಬೆಳ್ತಂಗಡಿ: ಬೋಧಕರ ಪತ್ತಿನ ಸಹಕಾರ ಸಂಘ ಬೆಳ್ತಂಗಡಿ ಇದರ ನೂತನ ಕಚೇರಿಯ ಶುಭಾರಂಭವು ಸೆ. 23ರಂದು ಲಯನ್ಸ್ ಸೇವಾ ಭವನದ ಕಟ್ಟಡದಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಸಂಘದ ಕಚೇರಿಯನ್ನು ಲಯನ್ಸ್ ಸೇವಾ ಭವನದ ನೂತನ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಪೂಜಾ ವಿಧಿ ವಿಧಾನಗಳ ಬಳಿಕ ನೂತನ ಕಚೇರಿಗೆ ಶುಭ ಚಾಲನೆ ನೀಡಲಾಯಿತು. ಶಿಕ್ಷಕ ಸಮುದಾಯದ ಆರ್ಥಿಕ ಹಿತಾಸಕ್ತಿ ಹಾಗೂ ಸದಸ್ಯರಿಗೆ ಉತ್ತಮ ಸಹಕಾರಿ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘವು ಕಾರ್ಯನಿರ್ವಹಿಸುತ್ತಿದ್ದು, ನೂತನ ಕಚೇರಿಯು ಸದಸ್ಯರಿಗೆ ಇನ್ನಷ್ಟು ಅನುಕೂಲಕರವಾಗಲಿದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಬೋಧಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಕೆ.ಎಸ್., ಉಪಾಧ್ಯಕ್ಷ ಗೋಪಾಲಕೃಷ್ಣ ತುಳುಪುಳೆ, ಬೆಳ್ತಂಗಡಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಶ್ ನೆಲ್ಯಾಡಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಕಾಂತ ಬೇಕಲ್, ಕಾರ್ಯನಿರ್ವಹಣಾಧಿಕಾರಿ ಕುಮಾರಿ ಜ್ಯೋತಿ ಹಾಗೂ ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

ನೂತನ ಕಚೇರಿಯ ಮೂಲಕ ಸಂಘದ ಸದಸ್ಯರಿಗೆ ಉಳಿತಾಯ, ಸಾಲ, ಠೇವಣಿ ಸೇರಿದಂತೆ ವಿವಿಧ ಸಹಕಾರಿ ಸೇವೆಗಳು ಇನ್ನಷ್ಟು ಸುಗಮವಾಗಿ ದೊರೆಯುವಂತಾಗಲಿ ಎಂಬ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.

Related posts

ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ, ಆಟೋಟ ಸ್ಪರ್ದೆಗಳು, ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ,

Suddi Udaya

ಚಿಬಿದ್ರೆ – ಧರ್ಮಸ್ಥಳ ರಸ್ತೆಯಲ್ಲಿ ಬಿದ್ದ ಮರ : ಶೌರ್ಯ ವಿಪತ್ತು ಘಟಕದಿಂದ ತೆರವು

Suddi Udaya

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಶುಭಮಸ್ತು” ಕಾರ್ಯಕ್ರಮ

Suddi Udaya

ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪ್ರಕರಣ: ಚಿಕಿತ್ಸೆ ಫಲಿಸದೆ ಕಾಲೇಜು ವಿದ್ಯಾರ್ಥಿ ಸಾವು

Suddi Udaya

ಮಹಾಶಿವರಾತ್ರಿ: ಧಮ೯ಸ್ಥಳಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಪಾದಯಾತ್ರಿಗಳು

Suddi Udaya

ಬಂಗೇರ ಬ್ರಿಗೇಡ್ ಬೆಳ್ತಂಗಡಿ ವತಿಯಿಂದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ

Suddi Udaya
error: Content is protected !!