September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಡಿರುದ್ಯಾವರ ಕಸ್ತೂರಿರಂಗನ್ ವರದಿ ವಿಶೇಷ ಗ್ರಾಮಸಭೆ

ಕಡಿರುದ್ಯಾವರ: ಕಸ್ತೂರಿ ರಂಗನ್ ವರದಿ ವಿಶೇಷ ಗ್ರಾಮ ಸಭೆಯು ಸೆ.೨೩ರಂದು ಕಡಿರುದ್ಯಾವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ, ವನ್ಯಜೀವಿ ಇಲಾಖೆಯ ವಲಯ ಅರಣ್ಯಾಧಿಕಾರಿ ಶರ್ಮಿಷ್ಠಾ ವಹಿಸಿದ್ದರು.

ಪಂಚಾಯತು ಪಿಡಿಒ ರವಿಬನಪ್ಪ ಗೌಡ್ರ, ಬೆಳ್ತಂಗಡಿ ವಲಯ ಸಹಾಯಕ ಅರಣ್ಯಾಧಿಕಾರಿ ರಂಜಿತ್, ಗ್ರಾಮಾಡಳಿತಾಧಿಕಾರಿ ಸಂತೋಷ್, ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ಅಶೋಕ್, ವನಿತಾ ಜೆ.ಪೂಜಾರಿ, ನೇಮಿರಾಜ ಕಿಲ್ಲೂರು, ಸಂತೋಷ್ ಕುಮಾರ್ ಗೌಡ ವಳಂಬ್ರ, ಸೂರಜ್ ವಳಂಬ್ರ, ಗ್ರಾ.ಪಂ ಮಾಜಿ ಸದಸ್ಯರು, ಊರಿನ ಗಣ್ಯರು, ಸಂಘ-ಸಂಸ್ಥೆಯ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕಸ್ತೂರಿರಂಗನ್ ವರದಿ ಜಾರಿಯಿಂದ ಗ್ರಾಮಸ್ಥರಿಗೆ ಬಹಳಷ್ಟು ಸಮಸ್ಯೆಯಾಗಲಿದ್ದು, ಈ ವರದಿಯನ್ನು
ಜಾರಿ ಮಾಡುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ವರದಿಯು ಜನರ ಬದುಕಿನ ಹಕ್ಕನ್ನು ಕಸಿಯುತ್ತಿದೆ. ಈ ವರದಿ ಜಾರಿಗೊಂಡಲ್ಲಿ ಜನರ ಬದುಕು ಅತಂತ್ರವಾಗಲಿದೆ, ಈಗಾಗಲೇ ಈ ವರದಿಯ ಸುದ್ದಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜನರ ಭಯ ಹೋಗಬೇಕಾದರೆ ಈ ವರದಿಯನ್ನು ಕೇಂದ್ರ ಸರಕಾರ ಜಾರಿ ಮಾಡಲೇಬಾರದು ಎ೦ದು ಆಗ್ರಹಿಸಿದರು.

ಶತಮಾನಗಳಿಂದ ಬದುಕುತ್ತಿರುವ ಜನರ ಹಿತಾಸಕ್ತಿ ಕಾಪಾಡುವ ಅಗತ್ಯವಿದೆ.ಗ್ರಾಮದ ಭೌಗೋಳಿಕ ಮತ್ತು ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸದೆ ಗ್ರಾಮದ ಯಾವುದೇ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿಸಬಾರದು, ಗ್ರಾಮದ ಯಾವುದೇ ರೀತಿಯ ಅಭಿವೃದ್ಧಿಗೆ ಅಡ್ಡಿ ಪಡಿಸಿದರೆ ನಾವೆಲ್ಲರೂ ಸಂಘಟಿತ ಹೋರಾಟ ಪಡೆಯಬೇಕಾಗುತ್ತದೆ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡದೆ ಜನರನ್ನು ಗೊಂದಲಕ್ಕೀಡು ಮಾಡಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸಭೆಯಲ್ಲಿ ಗ್ರಾಮಸ್ಥರ ಅಹವಾಲು, ಆಕ್ಷೇಪಣೆಗಳನ್ನು ಸ್ವೀಕರಿಸಲಾಯಿತು.
ವರದಿ: ನೇಮಿರಾಜ ಕಿಲ್ಲೂರು

Related posts

ಬೆಳ್ತಂಗಡಿ ತಾಲೂಕು ಆಡಳಿತ ಸೌಧಕ್ಕೆ ದ.ಕ.ಜಿಲ್ಲಾಧಿಕಾರಿ ಮುಲೈ ಮುಹಿಲನ್ ಧಿಡೀರ್ ಭೇಟಿ

Suddi Udaya

ಸರಕಾರಿ ನೌಕರರ ಕ್ರೀಡಾಕೂಟ: ಯೋಗಾಸನ ಸ್ಪರ್ಧೆಯಲ್ಲಿ ರೆಖ್ಯದ ಬಾಲಕೃಷ್ಣರವರಿಗೆ ಚಿನ್ನದ ಪದಕ

Suddi Udaya

ಮೇಲಂತಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದ ಪಿಕಪ್ ಗೂಡ್ಸ್ ಟೆಂಪೋ

Suddi Udaya

ಮಹಿಳೆಯರ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ: ಶಿವಾಜಿ ಫ್ರೆಂಡ್ಸ್ ಶಿವನಗರ-ಬಂದಾರು ತಂಡ ದ್ವಿತೀಯ ಪ್ರಶಸ್ತಿ

Suddi Udaya

ಮಂಗಳೂರಿನ ಎ.ಆರ್.ಎಂ ಕಿಯಾ ಶೋರೂಮ್‌ನಲ್ಲಿ ನೂತನ “ಕಿಯಾ ಸೆಲ್ಟೋಸ್” ಕಾರು ಅನಾವರಣ

Suddi Udaya

ತೀರಾ ಹದಗೆಟ್ಟ ಪಡಂಗಡಿ ರಸ್ತೆ: ದುರಸ್ತಿಗೊಳಿಸುವಂತೆ ಪಡಂಗಡಿ ಗ್ರಾಮಸ್ಥರಿಂದ ಮನವಿ

Suddi Udaya
error: Content is protected !!