September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಬಸದಿಯಲ್ಲಿ ತೆನೆ ತುಂಬುವ ವಿಶೇಷ ಕಾರ್ಯಕ್ರಮ

ಬೆಳ್ತಂಗಡಿ: ಕೃಷಿ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳನ್ನು ಬೆಸೆಯುವ ಒಂದು ಅತ್ಯಂತ ಪವಿತ್ರವಾದ ಆಚರಣೆ ತೆನೆ ತುಂಬುವ ಕಾರ್ಯಕ್ರಮ. ಹೊಸದಾಗಿ ಬೆಳೆದ ಭತ್ತದ ಕದಿರುಗಳನ್ನು (ತೆನೆ) ಗದ್ದೆಯಿಂದ ತಂದು, ದೇವರಿಗೆ ಮತ್ತು ಪ್ರಕೃತಿಗೆ ಅರ್ಪಿಸುವ ಮೂಲಕ ಬೆಳೆ ನೀಡಿದ ಭೂತಾಯಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ.

ಅದೇ ರೀತಿಯಲ್ಲಿ ಇಂದು(ಸೆ.25) ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದಲ್ಲಿ ತೆನೆ ತುಂಬುವ ವಿಶೇಷ ಕಾರ್ಯಕ್ರಮ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯ ಪ್ರಧಾನ ಅರ್ಚಕ ಜಯರಾಜ್ ಇಂದ್ರ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆದವು.

ಈ ವೇಳೆ ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಜಯವರ್ಮರಾಜ ಬಳ್ಳಾಲ್ ರವರು ಮಾರ್ಗದರ್ಶನ ನೀಡಿದರು.

Related posts

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ- ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದಲ್ಲಿ ‘ತ್ರಿಪದಿ ಬ್ರಹ್ಮ, ಸಂತ ಕವಿ ಸವ೯ಜ್ಞ’ ಜಯಂತಿ ಆಚರಣೆ

Suddi Udaya

ಮರಳಿನ ತಾಯಿನಾಡು ದ.ಕ. ಜಿಲ್ಲೆಯಲ್ಲಿ ಮರಳು ಇಲ್ಲದೆ ಕಾರ್ಮಿಕರು ಬೀದಿಗೆ : ವಸಂತ ನಡ

Suddi Udaya

ವೇಣೂರು: ರವಿಚಂದ್ರ ಭಂಡಾರಿ ನಿಧನ

Suddi Udaya

ಎ.16-21: ಬೆಳ್ತಂಗಡಿ ಮಹಿಳಾ ವೃಂದದ ಆಶ್ರಯದಲ್ಲಿ ಝೇಂಕಾರ ಬೇಸಿಗೆ ಶಿಬಿರ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಯೂನಿರ್ವಸಿಟಿ ರಿಜಿಸ್ಟ್ರಾರ್ ಭೇಟಿ

Suddi Udaya

ಬೆಳ್ತಂಗಡಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

Suddi Udaya
error: Content is protected !!