September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ನೇತ್ರಾವತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಾಸಭೆ

ಮುಂಡಾಜೆ : ನೇತ್ರಾವತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮುಂಡಾಜೆ ಇದರ ಮಹಾಸಭೆಯನ್ನು ಸೆ.23 ರಂದು ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಭವಾನಿ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಪ್ರಾಸ್ತಾವಿಕವಾಗಿ ಸಂಜೀವಿನಿ ಯೋಜನೆಯಿಂದ ಸದಸ್ಯರಿಗೆ ಸಿಗುವ ಸಾಲ ಸೌಲಭ್ಯಗಳು ಸಂಜೀವಿನಿ ಯೋಜನೆಯ ಪ್ರಮುಖ ಉದ್ದೇಶದ ಬಗ್ಗೆ ಹಾಗೂ ಮಹಿಳೆಯರ ಸಬಲೀಕರಣದ ಬಗ್ಗೆ ತರಬೇತಿಗಳ ಬಗ್ಗೆ ಹಲವಾರು ವಿಷಯಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಒಕ್ಕೂಟದ ಕಾರ್ಯದರ್ಶಿ ಶಶಿಕಲ ಇವರು 2025 -26 ನೇ ಸಾಲಿನ ವರದಿಯನ್ನು ಮಂಡಿಸಿದರು ಹಾಗೂ ಜಮ ಖರ್ಚಿನ ವರದಿಯನ್ನು ಎಂಬಿಕೆಯವರಾದ ಮೀನಾ ಓದಿದ್ದರು.

ಮುಂಡಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಸಂಜೀವಿನಿ ಮಹಿಳೆಯರ ಬಗ್ಗೆ ಶುಭನುಡಿಗಳನಾಡಿದರು. ವಲಯ ಮೇಲ್ವಿಚಾರಕರಾದ ಜಯಾನಂದ NRLM ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದರು. ನಾಟಿ ವೈದ್ಯಯಾದ ಕುಸುಮಾವತಿ ಹಾಗೂ CIF ಸಾಲ ಪಡೆದು ಹೈನುಗಾರಿಕೆ ನಡೆಸುತ್ತಿರುವ ಕಮಲ ರವರನ್ನು ಸ್ವಚ್ಛ ಘಟಕದ ಸಿಬ್ಬಂದಿಯಾದ ವಿನೋದ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಸದಸ್ಯರಲ್ಲಿ ಒಬ್ಬರನ್ನು ಲಕ್ಕಿ ಮಹಿಳೆಯಾಗಿ ಗುರುತಿಸಿ ಅವರಿಗೆ ಬಹುಮಾನವನ್ನು ನೀಡಲಾಯಿತು. ಸಂಜೀವಿನಿ ಸದಸ್ಯರಿಗೆ ರಸಪ್ರಶ್ನೆಯನ್ನು ಕೇಳಲಾಯಿತು ಹಾಗೂ ಹೂಗುಚ್ಛ ಸ್ಪರ್ಧೆಯನ್ನು ಕೂಡ ಏರ್ಪಡಿಸಲಾಗಿತ್ತು ಅದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು ಒಕ್ಕೂಟದ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದವು ಸಂಜೀವಿನಿ ಸಂಘದ ಸದಸ್ಯರಾದ ಜೇಸಿ ಅವರು ಮಾಡಿದ ಅಣಬೆ ಉಪಿನಕಾಯಿ ಹಾಗೂ ಅಣಬೆಯ ಚಟ್ನಿ ಪುದಿಯನ್ನು ಬಿಡುಗಡೆ ಮಾಡಲಾಯಿತು.

ಒಕ್ಕೂಟದ ಅಧ್ಯಕ್ಷರಾದ ಭವಾನಿ ಶೆಟ್ಟಿ ಅವರು ಸಂಜೀವಿನಿ ಒಕ್ಕೂಟದ ಬಗ್ಗೆ ಸದಸ್ಯರಿಗೆ ಮಾಹಿತಿಯನ್ನು ನೀಡಿದರು. ಒಕ್ಕೂಟದ ಪದಾಧಿಕಾರಿ ಭವ್ಯ ಕಾರ್ಯಕ್ರಮವನ್ನು ನಿರೂಪಿಸಿ, ಎಲ್ ಸಿ ಆರ್ ಪಿ ಪುಷ್ಪಾವತಿ ಸ್ವಾಗತಿಸಿದರು. ಎಲ್ ಸಿ ಆರ್ ಪಿ ಅವರದ ಶಾಲಿನಿ ಯವರು ಧನ್ಯವಾದವಿತ್ತರು.

Related posts

ಬೆಳ್ತಂಗಡಿ: ‘ಹದಿಹರೆಯ ಕೌತುಕದ ಸಮಯ’ ಕೃತಿ ಲೋಕಾರ್ಪಣೆ ಹಾಗೂ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

Suddi Udaya

ಇಂದಬೆಟ್ಟು-ನಾವೂರು 27 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ಶ್ರೀ ಕ್ಷೇತ್ರ ಧ. ಗ್ರಾ. ಯೋ. ಸಮುದಾಯ ಅಭಿವೃದ್ಧಿ ವತಿಯಿಂದ ರೂ.25 ಸಾವಿರ ಆರ್ಥಿಕ ನೆರವು

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಅದ್ವೈತ ರಥ ಯಾತ್ರೆಗೆ ಭವ್ಯ ಸ್ವಾಗತ

Suddi Udaya

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ತಾಲೂಕು ಆಡಳಿತ ಕಚೇರಿಗೆ ಭೇಟಿ

Suddi Udaya

ಮಾಲಾಡಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!