November 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

“ಸಿಂಗಲ್ ಪ್ಲಾಟ್” ಲೇ ಔಟ್ ಯೋಜನೆಯಲ್ಲಿ, 1 ಸಾವಿರ ಚದರ ಮೀಟರ್‌ವರೆಗಿನ ಅಳತೆಯ ಪ್ಲಾಟ್‌ಗಳಿಗೆ ಮಂಜೂರಾತಿ

ಬೆಳ್ತಂಗಡಿ:‌ ಸಾರ್ವಜನಿಕ ಅನುಕೂಲತೆ ಮತ್ತು ಆಡಳಿತಾತ್ಮಕ ದಕ್ಷತೆಯ ಹಿತದೃಷ್ಟಿಯಿಂದ, ಸರ್ಕಾರವು “ಸಿಂಗಲ್ ಪ್ಲಾಟ್” ಲೇ ಔಟ್ ಯೋಜನೆಯಲ್ಲಿ, 1,000 ಚದರ ಮೀಟರ್‌ವರೆಗಿನ ಅಳತೆಯ ಪ್ಲಾಟ್‌ಗಳಿಗೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ
ಮುಖ್ಯ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳಿಗೆ ಅಧಿಕಾರ ನೀಡಿ ಆದೇಶ ಹೊರಡಿಸಿದೆ.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಸೆಕ್ಷನ್ 81 ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸುವಲ್ಲಿ ಮತ್ತು ಸಾರ್ವಜನಿಕ ಅನುಕೂಲತೆ ಮತ್ತು ಆಡಳಿತಾತ್ಮಕ ದಕ್ಷತೆಯ ಹಿತದೃಷ್ಟಿಯಿಂದ, ಸರ್ಕಾರವು ಈ ಮೂಲಕ “ಸಿಂಗಲ್ ಪ್ಲಾಟ್” ಲೇಔಟ್ ಯೋಜನೆಗೆ, ಕಾಯ್ದೆಯ ಸೆಕ್ಷನ್ 17 ರ ಅಡಿಯಲ್ಲಿ ಅಥವಾ ಕಾಯ್ದೆಯ ಸೆಕ್ಷನ್ 4-ಕೆ ಅಡಿಯಲ್ಲಿ, 1,000 ಚದರ ಮೀಟರ್‌ವರೆಗಿನ ಅಳತೆಯ ಪ್ಲಾಟ್‌ಗಳಿಗೆ, ಆಯಾ ಅಧಿಕಾರ ವ್ಯಾಪ್ತಿಯಲ್ಲಿರುವ ಆಯಾ ಅಧಿಕಾರಿಗಳಿಗೆ ಅಧಿಕಾರವನ್ನು ನೀಡಿದೆ.


ಪುರಸಭೆ ವ್ಯಾಪ್ತಿಯಲ್ಲಿ ವಲಯ ಆಯುಕ್ತರು; ನಗರ, ಪುರಸಭೆಗಳ ಆಯುಕ್ತರು; ಪಟ್ಟಣ ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳ ಮುಖ್ಯ ಅಧಿಕಾರಿಗಳು; ಮತ್ತು ಗ್ರಾಮ ಪಂಚಾಯಿತಿಗಳ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು/ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಥವಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.


“ಸಿಂಗಲ್ ಪ್ಲಾಟ್” ಲೇ ಔಟ್ ಯೋಜನೆಯಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಇದುವರೆಗೆ ಮುಡಾಕ್ಕೆ ಜನರು ಅಲೆದಾಟ ನಡೆಸಬೇಕಾಗಿತ್ತು. ಈ ಸಮಸ್ಯೆ ಬಗ್ಗೆ ಈ ಹಿಂದೆ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಚರ್ಚೆ ನಡೆದು ನಿಣ೯ಯ ಕೈಗೊಳ್ಳಲಾಗಿತ್ತು.
ವಿಧಾನಸಭೆಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ‌ಪರಿಷತ್ ನಲ್ಲಿ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್ ಪ್ರಸ್ತಾಪ ಮಾಡಿದ್ದು, ವ್ಯಾಪಕ ಚರ್ಚೆ ನಡೆದಿತ್ತು. ಬೆಳ್ತಂಗಡಿಗೆ ಉಸ್ತುವಾರಿ ಸಚಿವರು ಬಂದಾಗ ಹಾಗೂ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಂಗಳೂರಿಗೆ ಬಂದಾಗ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಪಟ್ಟಣ ಪಂಚಾಯಿತ್ ಹಿರಿಯ ಸದಸ್ಯ ಜಗದೀಶ್ ಮನವಿ ಸಲ್ಲಿಸಿದ್ದರು.

Related posts

ನಾವೂರು ದುರ್ಗಾ ಮೇಲೋಡಿಸ್ 100ನೇ ಸಂಚಿಕೆಯ ಆಮಂತ್ರಣ ಪತ್ರಿಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಕಣಿಯೂರು: ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ

Suddi Udaya

ಬೆಳ್ತಂಗಡಿ: “ಸಮಾಜಮುಖಿ ಸೇವೆಯಲ್ಲಿ ವಿ. ಹರೀಶ್ ನೆರಿಯ ರವರಿಗೆ ವಿಶೇಷ ಸಾಧಕ” ಪ್ರಶಸ್ತಿಯ ಗರಿಮೆ

Suddi Udaya

ದಿಡುಪೆಯಲ್ಲಿ ಪ್ರವಾಸಿಗರಿಗೆ ದಂಡ ಪ್ರಕರಣ, ಹೈಕೋರ್ಟ್ ತೀವ್ರ ಅಸಮಾಧಾನ; ಅರಣ್ಯಾಧಿಕಾರಿಗಳಿಂದ ವಿವರಣೆ ಕೇಳಿದ ಹೈಕೋರ್ಟ್

Suddi Udaya

ನ.26- ನ.30: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya
error: Content is protected !!