ಬೆಳ್ತಂಗಡಿ: ಸಂತೆಕಟ್ಟೆಯಲ್ಲಿರುವ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಬೆಳ್ತಂಗಡಿ ಹೋಲಿ ರೀಡಿಮರ್ ಚರ್ಚ್ ಮಿನಿಹಾಲ್‌ನಲ್ಲಿ ಸಂಘದ ಅಧ್ಯಕ್ಷ ಲ್ಯಾನ್ಸಿ ಎ.ಪಿರೇರಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಳ್ತಂಗಡಿ ಹೊಲಿ ರಿಡಿಮರ್ ಚರ್ಚ್ ಪ್ರಧಾನ ಧರ್ಮಗುರು ವಂ. ವಾಲ್ಟರ್ ಡಿಮೆಲ್ಲೊ ಆಶೀರ್ವಚನಗೈದರು. ಸಂಘದಲ್ಲಿ ಒಟ್ಟು 752 ಸದಸ್ಯರಿದ್ದು ರೂ. 18,63,960 ಬಂಡವಾಳ ಹೊಂದಿದೆ. ರೂ. 6.22ಕೋಟಿ ಠೇವಣಿಯೊಂದಿಗೆ ರೂ 7.40 ಕೋಟಿ ಸಾಲ ವಿತರಿಸಿ ರೂ. 32,07,50,000 ಕೋಟಿ ವ್ಯವಹಾರ ನಡೆಸಿ ರೂ. 8,64,166 40 ಲಕ್ಷ ಲಾಭಗಳಿಸಿ ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾ ಘೋಷಿಸಿದರು.
ಉಪಾಧ್ಯಕ್ಷ ವಿಲ್ಸನ್ ಜೋರ್ಜ್ ಗೊನ್ಸಾಲ್ವಿಸ್, ನಿರ್ದೇಶಕರಾದ ಜಾನ್ ಅರ್ವಿನ್ ಡಿಸೋಜಾ, ಎಲೋಸಿಯಸ್ ಎಸ್.ಲೋಬೊ, ವಿನ್ಸೆಂಟ್ ಟಿ. ಡಿ ಸೋಜ, ಜಾನ್ ಅಶ್ವಿನ್ ಪಿಂಟೊ, ಮ್ಯಾಕ್ಸಿಮ್ ಡಿಕೋಸ್ತಾ, ತಿಯೋಫಿಲಾ ಡಿಸೋಜ, ಸ್ಟೆಲ್ಲಾ ಪ್ರಾಂಕ್, ಸೆಲಿನ್ ನೊರೊನ್ಹಾ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಐರಿನ್ ಡಿಸೋಜ ವಾರ್ಷಿಕ ವರದಿ ಮಂಡಿಸಿದರು. ಉಪಾ ಉಪಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ನಿರ್ದೇಶಕ ಜಾನ್ ಅರ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಲಕ್ಕಿ ಕೂಪನ್ ಡ್ರಾ ನಡೆಸಲಾಯಿತು. ಎಸ್ಎಸ್ ಎಲ್‌ಸಿ ಮತ್ತು ಮೇಲ್ಪಟ್ಟ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಐದು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.












