29.4 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್.ಡಿ.ಎಂ ಮಹಿಳಾ ಐ.ಟಿ.ಐ ಯಲ್ಲಿ ಬೆಳ್ತಂಗಡಿಯ ಆರೋಗ್ಯ ಇಲಾಖೆಯಿಂದ ಮಾಹಿತಿ ಕಾರ್ಯಾಗಾರ

ಉಜಿರೆ: ಎಸ್.ಡಿ.ಎಂ ಬಿ.ಎಡ್, ಡಿ.ಎಡ್ ಮತ್ತು ಮಹಿಳಾ ಐ.ಟಿ.ಐ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬೆಳ್ತಂಗಡಿಯ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕಣ್ಣಿನ ಮಹತ್ವ, ಅಂಗಾಂಗ ದಾನ, POSH ಮತ್ತು POCSO ಕಾಯಿದೆ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕುರಿತಾದ ಮಾಹಿತಿ ಕಾರ್ಯಕ್ರಮವನ್ನು ಎಸ್.ಡಿ.ಎಂ ಮಹಿಳಾ ಐ.ಟಿ.ಐ ಯಲ್ಲಿ ಹಮ್ಮಿಕೊಳ್ಳಲಾಯಿತು.

ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಜ್ಯೋತಿ ಉಲಿಪ್ಪಾಡಿ ಇವರು ಮೊದಲಿಗೆ POSH ಮತ್ತು POCSO ಕಾಯ್ದೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ನಂತರ ಬೆಳ್ತಂಗಡಿ ಸರಕಾರಿ ಆರೋಗ್ಯ ಇಲಾಖೆಯ ಮುಖ್ಯ ಆಡಳಿತ ಅಧಿಕಾರಿ, ಕಣ್ಣಿನ ವೈದ್ಯರೂ ಆದ ಡಾ. ರಮೇಶ್ ಕಣ್ಣಿನ ಮಹತ್ವ ಹಾಗೂ ಆರೈಕೆಯ ಕುರಿತು ಸವಿವರವಾಗಿ ವೀಡಿಯೋ ಮೂಲಕ ಪ್ರಸ್ತುತ ಪಡಿಸಿದರು.


ಆದೇ ರೀತಿ ಅಂಗ ಸಮನ್ವಯ ಅಧಿಕಾರಿ ಪದ್ಮಾವತಿ ಇವರು ಅಂಗಾಂಗ ದಾನದ ಮಹತ್ವ, ಪ್ರಯೋಜನ ಹಾಗೂ ಮಾಡುವ ವಿಧಾನದ ಕುರಿತು ಅತ್ಯುತ್ತಮವಾಗಿ ಉದಾಹರಣೆಯ ಸಹಿತ ಮಾರ್ಗದರ್ಶನ ನೀಡಿದರು.
ಹಿರಿಯ ಆರೋಗ್ಯ ಪರಿಶೀಲನಾ ಅಧಿಕಾರಿ ನವೀನ್ ಇವರು ಮಲೇರಿಯ ರೋಗದ ಲಕ್ಷಣ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮುಂತಾದ ವಿಷಯದ ಕುರಿತ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಸೂಚಿಸಿದರು.

ಬೆಳ್ತಂಗಡಿ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಅಮ್ಮಿ ಎ. ಇವರು ಮಹಿಳೆಯರ ಆರೋಗ್ಯದ ಕುರಿತು ಮಾತನಾಡಿದರು.
ವೇಣೂರು ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಪುಷ್ಪ, ಆಪ್ತ ಸಮಾಲೋಚಕಿ ಶಿಲ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಬಿ.ಎಡ್ ಹಾಗೂ ಡಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸಲ್ದಾನ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್.ಡಿ.ಎಂ ಮಹಿಳಾ ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರಾದ ವಿ. ಪ್ರಕಾಶ್ ಕಾಮತ್ ಸ್ವಾಗತಿಸಿ, ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಧನ್ಯವಾದವಿತ್ತರು. ವಿದ್ಯಾರ್ಥಿನಿ ವೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಪಡೆಯುವ ಉದ್ದೇಶದಿಂದ ಎರಡೂ ಸಂಸ್ಥೆಯ ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Related posts

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಬೆಳ್ತಂಗಡಿ ತಾಲೂಕು ವಕ್ತಾರರಾಗಿ ಸಂದೀಪ್ ಎಸ್ ನೀರಲ್ಕೆ ನೇಮಕ

Suddi Udaya

ಮುಂಡಾಜೆ: ಕೀರ್ತನಾ ಕಲಾತಂಡದ ಮಹಾಸಭೆ: ಅಧ್ಯಕ್ಷರಾಗಿ ಸದಾನಂದ ಬಿ., ಕಾರ್ಯದರ್ಶಿಯಾಗಿ ಉಮೇಶ್ ಆಚಾರ್ಯ ಆಯ್ಕೆ

Suddi Udaya

ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ” ಆಲ್ಬಮ್ ಸಾಂಗ್ ಬಿಡುಗಡೆ

Suddi Udaya

ಚಾರ್ಮಾಡಿ ಗ್ರಾಮ ಪಂಚಾಯತ್‌ನಲ್ಲಿ ಮಕ್ಕಳ ಗ್ರಾಮ ಸಭೆ

Suddi Udaya

ಜಿ.ಎಸ್.ಟಿ ನೋಟಿಸ್ ಹಿಂಪಡೆದ ರಾಜ್ಯ ಸರ್ಕಾರ: ಕಾಂಗ್ರೆಸ್ ಸರ್ಕಾರದ ತುಘಲಕ್ ನೀತಿ ಬಟಾ ಬಯಲು – ಹರೀಶ್ ಪೂಂಜ

Suddi Udaya

ಮರೋಡಿ: ಉಚ್ಚೂರು ಮನೆತನದ ಹಿರಿಯರಾದ ಗೋಪು ಪೂಜಾರಿ ನಿಧನ

Suddi Udaya
error: Content is protected !!