29.4 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ಶೇ. 21 ಡಿವಿಡೆಂಡ್ ಘೋಷಣೆ

ಕಲ್ಮಂಜ: ಇಲ್ಲಿಯ ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ.25 ರಂದು ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಠಾರದಲ್ಲಿ ಸಂಘದ ವಿಶೇಷಾಧಿಕಾರಿ ಸಂದೀಪ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮತ್ತು ಸಂಘದ ವಿಶೇಷಾಧಿಕಾರಿ ಸಂದೀಪ್ ಅವರು ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ಹಾಲಿನ ಗುಣಮಟ್ಟ, ಹಸುಗಳಿಗೆ ನೀಡುವ ಪೌಷ್ಟಿಕ ಆಹಾರ, ಗರ್ಭದಾರಣೆ, ಪಶು ಆಹಾರ ಬಳಕೆ ಬಗ್ಗೆ, ಮಾಹಿತಿ ನೀಡಿ, ಸಂಘದ ಬೆಳವಣಿಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಲೆಕ್ಕ ಪರಿಶೋಧನಾ ವರದಿ ಮಂಡಿಸಿ, ಸಂಘವು ರೂ.371902.47 ನಿವ್ವಳ ಲಾಭ ಗಳಿಸಿದ್ದು, ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದರು. ಈ ಸಾಲಿನಲ್ಲಿ ಸದಸ್ಯರಿಗೆ ಶೇ. 21 ಡಿವಿಡೆಂಡ್ ಮತ್ತು ಹಾಲು ಪೂರೈಸುವ ಸದಸ್ಯರಿಗೆ ಪ್ರತಿ ಲೀಟರ್‌ಗೆ 1ರೂ.ವರೆಗೆ ಬೋನಸ್ ಘೋಷಿಸಲಾಯಿತು. ವರ್ಷಿತ್ ಸ್ವಾಗತಿಸಿ, ಶಿವಪ್ರಸಾದ್ ನಿರೂಪಿಸಿ ವಂದಿಸಿದರು.

Related posts

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

2024 ಫೆಬ್ರವರಿ ತಿಂಗಳಲ್ಲಿ ವೇಣೂರು ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Suddi Udaya

ದ.ಕ. ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಮಹಾಸಭೆ

Suddi Udaya

ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಾಣಿ ಕಾಲೇಜಿನ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ: ಮಾತೃ ವೃಂದ ಶಿಶುಪಾಲನ ಕೇಂದ್ರ ಉದ್ಘಾಟನೆ

Suddi Udaya
error: Content is protected !!