ಪುಂಜಾಲಕಟ್ಟೆ: ಕೆ.ಪಿ.ಎಸ್. ಪ್ರೌಢಶಾಲೆ ಪುಂಜಾಲಕಟ್ಟೆಯಲ್ಲಿ ಮಡಂತ್ಯಾರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ 2026-27ನೇ ಸಾಲಿನ ಸ್ಕೌಟರ‍್ಸ್-ಗೈಡರ‍್ಸ್ , ಕಬ್‌ಮಾಸ್ಟರ‍್ಸ್ -ಫ್ಲೋಕ್‌ಲೀಡರ‍್ಸ್ ಗಳ ಪುನಃಶ್ಚೇತನ ತರಬೇತಿ ಶಿಬಿರವನ್ನು ಸಂಸ್ಥೆಯ ಅಧ್ಯಕ್ಷ ಹಾಜಿ|| ಅಬ್ದುಲ್ ಲತೀಫ್ ಸಾಹೇಬ್‌ರವರು ಉದ್ಘಾಟಿಸಿ, ಯುವ ಜನತೆಯಲ್ಲಿ ದೈಹಿಕ ಸದೃಢತೆ, ಮಾನಸಿಕವಾಗಿ ಜಾಗೃತಿ ಮತ್ತು ನೈತಿಕವಾಗಿ ಪ್ರಾಮಾಣಿಕತೆಯನ್ನು ಬೆಳೆಸಬಲ್ಲ ಸ್ಕೌಟ್-ಗೈಡ್ ಶಿಕ್ಷಣ ಪ್ರತಿಯೊಂದು ಮಗುವಿಗೂ ಅತ್ಯಗತ್ಯ ಎಂದು ಹೇಳುತ್ತಾ ನಿಸ್ವಾರ್ಥವಾಗಿ ಇಂತಹ ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವ ಶಿಕ್ಷಕರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಎ.ಡಿ.ಸಿ.ಯವರಾದ ಜೆರಾಲ್ಡ್ ಫೆರ್ನಾಂಡಿಸ್, ಸಿ.ಆರ್.ಪಿ ಶ್ರೀಮತಿ ಚೇತನಾ, ಕೊಕ್ರಾಡಿ ಪ್ರೌಢಶಾಲೆಯ ಗೈಡ್ ಕ್ಯಾಪ್ಟನ್ ಅಕ್ಕಮ್ಮ, ಕೆ.ಪಿ.ಎಸ್.ಪ್ರೌಢಶಾಲೆ ಪುಂಜಾಲಕಟ್ಟೆಯ ನಿವೃತ್ತ ಶಿಕ್ಷಕಿ ಗೈಡ್ ಕ್ಯಾಪ್ಟನ್ ಸುಧಾ ಎಸ್ ಭಟ್, ಕುವೆಟ್ಟು ಸ.ಉ.ಪ್ರಾ.ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಪೂರ್ಣಿಮ ಎಚ್.ಡಬ್ಲುö್ಯ.ಬಿ.(ಗೈಡ್) ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ದತ್ತಾತ್ರೇಯಗೊಲ್ಲ ಎ.ಡಿ.ಸಿ (ಸ್ಕೌಟ್)ರವರು ಸ್ವಾಗತಿಸಿದರು. ಸಹಕಾರ್ಯದರ್ಶಿ ಧರಣೇಂದ್ರ ಕೆ ಧನ್ಯವಾದ ಸಮರ್ಪಣೆಗೈದರು. ಕಾರ್ಯದರ್ಶಿ ಎಂ.ಶಾಂತಾರಾಮ ಪ್ರಭು ಕಾರ್ಯಕ್ರಮ ಸಂಯೋಜಿಸಿದರು.








