31 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳಾಲು ಅನಂತೋಡಿ ಅನಂತಪದ್ಮನಾಭ ದೇವರಿಗೆ ಅನಂತ ಚತುರ್ದಶಿ (ನೋoಪು) ಪೂಜೆ ಮತ್ತು ಲಕ್ಷ ತುಳಸಿ ಅರ್ಚನೆ

ಬೆಳಾಲು : ಬೆಳಾಲು ಅನಂತೋಡಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಸೆ. 25 ರಂದು ಅನಂತ ಚತುರ್ದಶಿ ಕಾರ್ಯಕ್ರಮದ ಅಂಗವಾಗಿ ದೇವರಿಗೆ ಪಂಚಾಮೃತ ಅಭಿಷೇಕ ಪವಮಾನ ಕಳಶಾಭಿಷೇಕ ಕಲ್ಪೋಕ್ತ ಪೂಜೆ ನಡೆದು, ಸುಮಾರು 60 ಋತ್ವಿಜ ರಿಂದ ಲಕ್ಷ ತುಳಸಿ ಅರ್ಚನೆ ಪೂಜಾ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ಜನಾರ್ಧನ ದೇವಸ್ಥಾನದ ಅನುವಂಶಿಕ ಮೊಕ್ತೆಸರರಾದ ಶರತ್ ಕೃಷ್ಣ ಪಡುವೆಟ್ನಾಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯದ ನಿವೃತ್ತ ಮಣೆಗಾರರಾದ ಅನಂತಪದ್ಮನಾಭ, ವಸಂತ ಮಣೆಗಾರರು ಅರ್ಚಕರಾದ ಸಂತೋಷ್ ಕಲ್ಲೂರಾಯ, ಶ್ರೀಪತಿ ಎಳ್ಚಿತ್ತಾಯ, ಗಣೇಶ್ ತಂತ್ರಿದಾರರು ನಡೆಸಿಕೊಟ್ಟರು ನಂತರ ಕ್ಷೇತ್ರದ ವತಿಯಿಂದ ತೆನೆ ತಂದು, ತೆನೆ ಕಟ್ಟಿ ನೊಂಪು ಪೂಜೆ ಆಚರಿಸಿ 14 ಬೈಲುವಾರಿನ ಎಲ್ಲಾ ಮನೆಗಳಿಗೆ ತೆನೆ ಕಟ್ಟು ನೀಡುವ ಮೂಲಕ ವಿಶಿಷ್ಟವಾಗಿ ನೋoಪು ಪೂಜೆಯನ್ನು ಆಚರಿಸಲಾಯಿತು.

ಮಧ್ಯಾಹ್ನ ಶ್ರೀದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಿಸಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದೇವರಿಗೆ ದೀಪಾಲಂಕಾರ ರಂಗ ಪೂಜೆ ನಡೆದು ನಂತರ ಶ್ರೀ ಅನಂತೇಶ್ವರ ಫ್ರೆಂಡ್ಸ್ ಇವರು ಉದಾರವಾಗಿ ನೀಡಿದ ಕುರ್ಚಿ ಹಾಗೂ ಟೇಬಲಗಳನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಹಸ್ತಾಂತರಿಸಲಾಯಿತು. ಹಾಗೂ ಹೊಸದಾಗಿ ನಿರ್ಮಾಣಗೊಂಡ ಅಕ್ಷೋಭ್ಯ ಅನ್ನಛತ್ರಕ್ಕೆ ಉದಾರವಾಗಿ ಟೈಲ್ಸ್ ಕೊಡುಗೆ ನೀಡಿದ ಕ್ಷೇತ್ರದ ಮಹಾಪೋಷಕರು ಹಾಗೂ ಮಾರ್ಗದರ್ಶಕ ಮೋಹನ್ ಕುಮಾರ್ ಲಕ್ಷ್ಮಿ ಗ್ರೂಪ್ಸ್ ಕನಸಿನ ಮನೆ ಉಜಿರೆ, ಇವರನ್ನು ಗೌರವಿಸಲಾಯಿತು . ಅದರಂತೆ ಸಾಂಸ್ಕೃತಿಕ ಕಾರ್ಯಕ್ರಮ ಊರ ಮಕ್ಕಳಿಗೆ ಹಾಗೂ ಊರವರಿಗೆ ನಡೆಯಿತು.

ಈ ಸಂದರ್ಭದಲ್ಲಿ ವಿಶೇಷವಾಗಿ ಕಲಾ ನಿಧಿ ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಬಹುಮುಖ ಪ್ರತಿಭೆ ಸಿಂಚನ ಸಿ ರಾವ್ ಉಜಿರೆ ಇವರನ್ನು ಗೌರವಿಸಲಾಯಿತು. ಅದರಂತೆ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಗಿರೀಶ್ ಸಿರಿ ಶೃಂಗ ಮಂಜೊತ್ತು ಇವರು ನಿರೂಪಿಸಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀನಿವಾಸಗೌಡ ವಕೀಲರು ವಂದಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಅಸ್ರಣ್ಣ ಗಿರೀಶ್ ಬಾರಿತ್ತಾಯ ಪಾರಳ, ಪ್ರಧಾನ ಕಾರ್ಯದರ್ಶಿಯಾದ ದುರ್ಗಾ ಪ್ರಸಾದ ಕೆರ್ಮುಣ್ಣಾಯ ಉಪಾಧ್ಯಕ್ಷ ಮಮತಾ ದಿನೇಶ್ ಪೂಜಾರಿ ಉಪ್ಪಾರ್, ಕಾರ್ಯದರ್ಶಿಯಾದ ಸತೀಶ್ ಗೌಡ ಎಳ್ಳುಗದ್ದೆ, ಲೆಕ್ಕ ಪರಿಶೋಧಕರಾದ ನಾರಾಯಣಗೌಡ ಎಳ್ಳುಗದ್ದೆ, ಸಮಿತಿಯ ಹಿರಿಯ ಸದಸ್ಯರಾದ ದೇಜಪ್ಪ ಗೌಡ ಅರಣೆಮಾರು, ಲಿಂಗಪ್ಪ ಪೂಜಾರಿ ಬನಂದೂರು, ಸುಂದರ ಎಂ ಕೆ, ಮುತ್ತಪ್ಪ ಗೌಡ ಕಾಡಂಡ, ಶ್ರೀನಿವಾಸಗೌಡ ಗಣಪನಗು ತ್ತು, ಕಚೇರಿ ಮೆನೇಜರ್ ಶಿವಪ್ರಸಾದ್ ಕೆ ಮತ್ತು 14 ಬೈಲುವಾರಿನ ಸಂಚಾಲಕರು ಹಾಗೂ ಸಹ ಸಂಚಾಲಕರು ಮತ್ತು ಸಮಿತಿ ಸದಸ್ಯರು ಹಾಗೂ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಪೋಸೊಟ್ಟು ಮತ್ತು ಸದಸ್ಯರು ಹಾಗೂ ಮಹಿಳಾ ಸಮಿತಿ ಗೌರವಾಧ್ಯಕ್ಷ ಪಂಚಾಯಿತಿ ಮಾಜಿ ಅಧ್ಯಕ್ಷ ವಿದ್ಯಾ ಎಸ್ ಗೌಡ ಹಾಗೂ ಮಹಿಳಾ ಪದಾಧಿಕಾರಿಗಳು ಮತ್ತು ಅನಂತೇಶ್ವರ ಫ್ರೆಂಡ್ಸ್ ಇದರ ಸದಸ್ಯರುಗಳು ಉಪಸ್ಥಿತರಿದ್ದು ಕ್ಷೇತ್ರದ ಪ್ರಧಾನ ಅರ್ಚಕರಾದ ಸಂಪತ್ ಕುಮಾರ್ ಪೂಜೆ ನೆರವೇರಿಸಿದರು.

Related posts

ಚಾರ್ಮಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ: ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಬೆಳ್ತಂಗಡಿ ಸ್ಥಳೀಯ ಸಂಸ್ಥೆಯಿಂದ ಕಬ್- ಬುಲ್ ಬುಲ್ಸ್ ಉತ್ಸವ, ಸ್ಕೌಟ್ಸ್- ಗೈಡ್ಸ್ ಮೇಳ, ರೋವರ್ಸ್‌ – ರೇಂಜರ್ಸ್‌ ಸಮಾಗಮ

Suddi Udaya

ಸೆ 28 : ಧರ್ಮಸ್ಥಳದಲ್ಲಿ ತಾ| ಮಟ್ಟದ ಸತ್ಯದರ್ಶನ ಸಮಾವೇಶ, ಮಹಾ ಚಂಡಿಕಾ ಯಾಗ; ಸಮಾಲೋಚನಾ ಸಭೆ

Suddi Udaya

ಬೆಳ್ತಂಗಡಿ ಗ್ರಾಹಕರಿಗೆ ಸುವರ್ಣಾವಕಾಶ, ಯಾವುದೇ ಬಟ್ಟೆ ಖರೀದಿಸಿದರೂ ರೂ. 200 ಮಾತ್ರ

Suddi Udaya

ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ಇನ್ನು 24 x 7 ವಿಶೇಷ ಪರಿಣತಿ ಹೊಂದಿದ  ಮೂಳೆ ತಜ್ಞರು ಲಭ್ಯ

Suddi Udaya

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಆಶಾಕೇಂದ್ರವಾಗಲಿದೆ ಬೈಂದೂರಿನ ಹೇನಬೇರು ಶಾಲೆ

Suddi Udaya
error: Content is protected !!