29.4 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದಲ್ಲಿ ತೀವ್ರ ನಿಗಾ ಆರೈಕೆಯಲ್ಲಿ ಪೌಷ್ಟಿಕ ಬೆಂಬಲದ ಮಹತ್ವ

ಉಜಿರೆ: ರಾಷ್ಟ್ರೀಯ ಪೋಷಣ್ ಮಾಹ್–2026ರ ಅಂಗವಾಗಿ “ಪೋಷಣೆಯ ಶಕ್ತಿಯನ್ನು ಅರಿಯೋಣ – ಉತ್ತಮ ಜೀವನಕ್ಕಾಗಿ ಸರಿಯಾದ ಆಹಾರ ಸೇವಿಸೋಣ” ಎಂಬ ಆಶಯದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ, ಉಜಿರೆಯ ಆಹಾರ ಮತ್ತು ಪೋಷಣಾ ವಿಭಾಗದ ವತಿಯಿಂದ “ತೀವ್ರ ನಿಗಾ ಆರೈಕೆಯಲ್ಲಿ ಪೌಷ್ಟಿಕ ಬೆಂಬಲದ ಅರಿವು” ಎಂಬ ವಿಷಯದ ಕುರಿತು ಒಂದು ದಿನದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ (CME)*ವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡು, ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಶಾಂತಿವನದ ನಿವಾಸಿ ವೈದ್ಯಾಧಿಕಾರಿ (RMO) ಡಾ. ಬಿಂದು ಶ್ರೀಧರ್ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ವಹಿಸಿದ್ದರು. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವೈದ್ಯಕೀಯ ಆರೈಕೆಯಲ್ಲಿ ಆಹಾರ ಮತ್ತು ಪೋಷಣೆಯ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪೋಷಣ್ ಮಾಹ್–2026ರ ಅಂಗವಾಗಿ ಆಹಾರ ಮತ್ತು ಪೋಷಣಾ ವಿಭಾಗದ ವತಿಯಿಂದ ಹಮ್ಮಿಕೊಂಡ ವಿವಿಧ ಚಟುವಟಿಕೆಗಳ ವರದಿಯನ್ನು ಮಂಡಿಸಿದರು ಹಾಗೂ ವೈಜ್ಞಾನಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಆರ್.ಟಿ.ಡಿ. ವಿಜಯಕುಮಾರ್ ಮರಿಯಪ್ಪ ಭಟಾಡ್ ಅವರು ಭಾಗವಹಿಸಿ ಮಾತನಾಡಿದರು. ಅವರು ಸಾಮಾನ್ಯ ಆರೋಗ್ಯ ಹಾಗೂ ಪೋಷಣೆಯ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯೊಂದಿಗಿನ ತಮ್ಮ ಅನುಭವಗಳನ್ನು ಮೆಲುಕು ಹಾಕಿದ ಅವರು, ಆರೋಗ್ಯಕರ ಜೀವನಶೈಲಿಯಲ್ಲಿ ಆಹಾರ ಮತ್ತು ಪೋಷಣೆಯ ಮಹತ್ವವನ್ನು ವಿವರಿಸಿದರು.

ನಂತರ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಪ್ರೇರಣಾ, ಹಿರಿಯ ವೈದ್ಯಕೀಯ ಪೌಷ್ಟಿಕತಜ್ಞೆ, ಕೆ.ಎಸ್. ಹೆಗ್ಡೆ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯ, ಮಂಗಳೂರು, ಅವರು ಭಾಗವಹಿಸಿ “ತೀವ್ರ ನಿಗಾ ಆರೈಕೆಯಲ್ಲಿ ಪೌಷ್ಟಿಕ ಬೆಂಬಲ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ತೀವ್ರ ಅನಾರೋಗ್ಯದಲ್ಲಿರುವ ರೋಗಿಗಳಲ್ಲಿ ಪೌಷ್ಟಿಕ ಸ್ಥಿತಿಯ ಮೌಲ್ಯಮಾಪನ, ಸೂಕ್ತ ಪೌಷ್ಟಿಕ ಬೆಂಬಲ ಹಾಗೂ ಚಿಕಿತ್ಸಾ ತಂಡದಲ್ಲಿ ಪೌಷ್ಟಿಕ ತಜ್ಞರ ಪಾತ್ರದ ಕುರಿತು ಅವರು ಪ್ರಾಯೋಗಿಕ ಮಾಹಿತಿಯನ್ನು ಹಂಚಿಕೊಂಡರು.

ರಾಷ್ಟ್ರೀಯ ಪೋಷಣ್ ಮಾಹ್–2026ರ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಚಟುವಟಿಕೆಗಳ ಪರಿಚಯ ಹಾಗೂ ವಿಡಿಯೊ ಪ್ರದರ್ಶನವೂ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗಾಗಿ ಮೌಖಿಕ ಪ್ರಸ್ತುತಿ, ಭಿತ್ತಿಪತ್ರ ಪ್ರಸ್ತುತಿ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಾಗೂ ಸಂಶೋಧನಾ ವಿಚಾರಗಳನ್ನು ಮಂಡಿಸುವ ಮೂಲಕ ತಮ್ಮ ಜ್ಞಾನ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದರು.

ವಿದ್ಯಾರ್ಥಿಗಳು ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆ ಮತ್ತು ಕಲಿಕೆಯ ಅನುಭವವನ್ನು ಹಂಚಿಕೊಂಡರು. ತೀವ್ರ ನಿಗಾ ಆರೈಕೆಯಲ್ಲಿ ಪೌಷ್ಟಿಕ ಬೆಂಬಲದ ಮಹತ್ವದ ಕುರಿತು ನಡೆದ ಉಪನ್ಯಾಸ ಹಾಗೂ ವಿವಿಧ ಶೈಕ್ಷಣಿಕ ಚಟುವಟಿಕೆಗಳು ತಮ್ಮ ಜ್ಞಾನವನ್ನು ವಿಸ್ತರಿಸಲು ಸಹಕಾರಿಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಾರೋಪ ಸಮಾರಂಭ

ಸಂಜೆ ನಡೆದ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭದಲ್ಲಿ ಎಸ್-ವ್ಯಾಸ ವಿಶ್ವವಿದ್ಯಾಲಯ, ಬೆಂಗಳೂರಿನ ಮಾಜಿ ಉಪಕುಲಪತಿ ಹಾಗೂ ವೇದ ವಿಜ್ಞಾನ ಗುರುಕುಲಂ, ಬೆಂಗಳೂರಿನ ಸಂಸ್ಥಾಪಕ ಪ್ರೊ. ರಾಮಚಂದ್ರ ಜಿ. ಭಟ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರೊ. ರಾಮಚಂದ್ರ ಜಿ. ಭಟ್ ಅವರು ಜ್ಞಾನಾರ್ಜನೆ, ಆರೋಗ್ಯಕರ ಜೀವನಶೈಲಿ ಹಾಗೂ ಸಮಗ್ರ ಆರೋಗ್ಯದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಶಿಕ್ಷಣದೊಂದಿಗೆ ಜ್ಞಾನವನ್ನು ನಿರಂತರವಾಗಿ ವಿಸ್ತರಿಸಿಕೊಂಡು ಸಮಾಜಮುಖಿ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು.

ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಸಮಾರೋಪ ಸಮಾರಂಭದ ಅಂತಿಮ ಹಂತದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ಡಾ. ಶಿವಪ್ರಸಾದ್ ಶೆಟ್ಟಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದ ಅವರು, ವಿದ್ಯಾರ್ಥಿಗಳು ಇಂತಹ ಶೈಕ್ಷಣಿಕ ವೇದಿಕೆಗಳ ಸದುಪಯೋಗ ಪಡೆದುಕೊಂಡು ತಮ್ಮ ಜ್ಞಾನ ಹಾಗೂ ವೃತ್ತಿಪರ ಕೌಶಲ್ಯವನ್ನು ವೃದ್ಧಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಆಹಾರ ಮತ್ತು ಪೋಷಣಾ ವಿಭಾಗದ ಮುಖ್ಯಸ್ಥೆ ಡಾ. ಶಾಲ್ಮಲಿ ಸುನಿಲ್ ಅವರು ಉಪಸ್ಥಿತರಿದ್ದರು.
ಅಂತಿಮವಾಗಿ ಆಹಾರ ಮತ್ತು ಪೋಷಣಾ ವಿಭಾಗದ ಬೋಧಕ ಸಿಬ್ಬಂದಿ ಡಾ. ರೆನಿಟಾ ಅವರು ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಆಹಾರ ಮತ್ತು ಪೋಷಣಾ ವಿಭಾಗದ ಡಾ. ಭಾಷಿಣಿ ನಿರ್ವಹಿಸಿದರು.

Related posts

ಮರೋಡಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ: ತೋರಣ ಮುಹೂರ್ತ

Suddi Udaya

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತೋಟತ್ತಾಡಿಯ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ: ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮಾಗಮ

Suddi Udaya

ಶಿಶಿಲ :ಹರೀಶ್ ಪೂಂಜಾ ಅಭಿಮಾನಿ ಬಳಗದಿಂದ ಶಾಲಾ ಮಕ್ಕಳಿಗೆ ಪೆನ್ ವಿತರಣೆ

Suddi Udaya

ಉಜಿರೆ: ಎಸ್‌ಡಿಎಂ ಐಟಿ ಕಾಲೇಜಿನ ಗಣಿತ ವಿಭಾಗದ ಉಪನ್ಯಾಸಕಿ ಶೋಭಾ ಪಿ. ಜೀವಂದರ್ ರವರಿಗೆ ಪಿ.ಹೆಚ್.ಡಿ ಪದವಿ

Suddi Udaya
error: Content is protected !!