30.5 C
ಪುತ್ತೂರು, ಬೆಳ್ತಂಗಡಿ
October 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುದ್ದಿ ಉದಯ ಪತ್ರಿಕೆ ಆಯೋಜಿಸಿರುವ ‘ಶ್ರೀ ಕೃಷ್ಣ’ ಫೋಟೋ ಸ್ಪರ್ಧೆಯ ಫಲಿತಾಂಶ

ಬೆಳ್ತಂಗಡಿ: ಸುದ್ದಿ ಉದಯ ವಾರಪತ್ರಿಕೆ ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗೆ ‘ಮುದ್ದುಕೃಷ್ಣ’ ವೇಷ ಸ್ಪರ್ಧೆಯನ್ನು ಹಮ್ಮಿಕೊಂಡು ಬರುತ್ತಿದ್ದು ಇದರ ಫಲಿತಾಂಶ ಪ್ರಕಟಗೊಂಡಿದೆ.

ಸುದ್ದಿ ಉದಯ ಪತ್ರಿಕೆ ಆರಂಭದಿಂದಲೂ ಇಂತಹ ಮಕ್ಕಳ ಪ್ರತಿಭಾ ವಿಕಸನಕ್ಕೆ ವೇದಿಕೆ ಒದಗಿಸುತ್ತಾ ಬರುತ್ತಿದೆ. ನಾಲ್ಕನೇ ವರ್ಷದಲ್ಲೂ ‘ಮುದ್ದುಕೃಷ್ಣ’ ಪೋಟೋ ಸ್ಪರ್ಧೆಯನ್ನು ಏರ್ಪಡಿಸಿದ್ದೇವು. ಬೆಳ್ತಂಗಡಿ ತಾಲೂಕಿನಾದ್ಯಂತ ಮಕ್ಕಳ ಪೋಷಕರಿಂದ ಇದಕ್ಕೆ ಉತ್ತಮ ಸ್ಪಂದನೆ ದೊರಕಿದೆ. ತಾಲೂಕಿನ ವಿವಿಧ ಕಡೆಗಳಿಂದ ನೂರಾರು ಮಕ್ಕಳ ಪೋಟೋಗಳು ಬಂದಿದೆ. ನಾವು ಸ್ಟುಡಿಯೋ ಪೋಟೋಗಳಿಗೆ ಮಾತ್ರ ಅವಕಾಶ ನೀಡಿದ್ದರೂ, ಹಲವು ಮಂದಿ ಮೊಬೈಲ್ ಪೋಟೋಗಳನ್ನು ಸಹ ಕಳುಹಿಸಿದ್ದಾರೆ.

ಫಲಿತಾಂಶ : ಪ್ರಥಮ ಸ್ಥಾನವನ್ನು ಸುಪ್ರಪ್ತಿ ಎಸ್. ಸೂರಜ್ ಮಾಲಾಡಿ ಮಡಂತ್ಯಾರು, ದ್ವಿತೀಯ ಸ್ಥಾನವನ್ನು ದಿಯಾನ್ಶ್ ಜೆ. ಪೂಜಾರಿ ಮಠದಬೈಲು ಬೆಳ್ತಂಗಡಿ, ತೃತೀಯ ಸ್ಥಾನವನ್ನು ಗಾನ್ವಿ ಪಕಳ ಪುತ್ತಿಲ ಬೆಳ್ತಂಗಡಿ ಪಡೆದುಕೊಂಡಿದ್ದಾರೆ.

ಪ್ರೋತ್ಸಾಹಕ ಬಹುಮಾನ ; ಅಥರ್ವ ಎನ್. ನಿಟ್ಟಡೆ ವೇಣೂರು, ಸಮನ್ವಿ ಪಿ.ಎ ಆರ್ತಿತಿಲ್ ಚಾರ್ಮಾಡಿ, ಸಮೃದ್ಧಿ ಜಿ. ಶೆಟ್ಟಿ ಕುತ್ಯಾರು ಬೆಳ್ತಂಗಡಿ, ಪ್ರನಿಧಿ ಪೂಜಾರಿ ಮುಂಡೂರು, ಶ್ರಿಯಾ ಚಾರ್ಮಾಡಿ ಪಡೆದುಕೊಂಡಿದ್ದಾರೆ.

ನಾರಾವಿ ಅಪೂರ್ವ ಸ್ಟುಡಿಯೋ ಮಾಲಕ ಹಾಗೂ ಸೌತ್‌ಕೆನರಾ ಪೋಟೋಗ್ರಾಫರ‍್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ಅಧ್ಯಕ್ಷ ರವಿ ಪೂಜಾರಿ ಹಾಗೂ ಅಸೋಸಿಯೇಶನ್‌ನ ಸಾಂಸ್ಕೃತಿಕ ಕಾರ್ಯದರ್ಶಿ ಹಾಗೂ ಗುರುವಾಯನಕೆರೆ ನೇಸರ ಸ್ಟುಡಿಯೋ ಮಾಲಕ ಬಾಲಕೃಷ್ಣ ಶೆಟ್ಟಿ ಸ್ಪರ್ಧಾ ಪೋಟೋಗಳ ಆಯ್ಕೆಯನ್ನು ನಡೆಸಿದ್ದಾರೆ.

ತೀರ್ಪುಗಾರರ ಅಭಿಪ್ರಾಯ

ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿತ್ತು:ರವಿ ಪೂಜಾರಿ

ಸ್ಪರ್ಧೆಗೆ ಬಂದ ಛಾಯಾ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿತ್ತು. ಕೇವಲ ಸ್ಟುಡಿಯೋದಲ್ಲಿ ತೆಗೆದ ಫೋಟೋಗಳಿಗೆ ಮಾತ್ರ ಮೊದಲ ಆಯ್ಕೆ ನೀಡಿದ ಸುದ್ದಿ ಉದಯ ಪತ್ರಿಕೆಗೆ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ಅದ್ಯಕ್ಷನ ನೆಲೆಯಲ್ಲಿ ಧನ್ಯವಾದ ನೀಡುತಿದ್ದೇನೆ.ಪತ್ರಿಕೆಯ ನಿಯಮದಂತೆ ನನಗೆ ಕಂಡಂತೆ ಛಾಯಾ ಚಿತ್ರದ ಎಕ್ಸ್ಪ್ರೆಷನ್ ಹಾಗೂ ನೈಜ ಚಿತ್ರಣ ನೋಡಿ ಆಯ್ಕೆ ಮಾಡಿದ್ದೇನೆ
-ರವಿ ಪೂಜಾರಿ ನಾರಾವಿ, ಅಧ್ಯಕ್ಷರು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯ

ಮಗುವಿಗಿಂತ ಅದಕ್ಕೆ ಬಳಸಿದ ಪ್ರಾಪರ್ಟಿ ದೊಡ್ಡದಿತ್ತು:ಬಾಲಕೃಷ್ಣ ಶೆಟ್ಟಿ

ಸ್ಪರ್ಧೆಗೆ ನೂರಾಕ್ಕೂ ಅಧಿಕ ಪೋಟೋಗಳು ಬಂದಿದ್ದು, ಬಂದ ಛಾಯಾಚಿತ್ರಗಳಲ್ಲಿ ನಮಗೆ ಅಂದಾಜು 20 ಫೋಟೋಗಳು ಆಯ್ಕೆಯಾಗಿತ್ತು. ಎಲ್ಲವೂ ಪ್ರಥಮ ಎನ್ನುವಂತಿತ್ತು.ಅದರಲ್ಲಿ ಕೆಲವು ಮಗುವಿಗಿಂತ ಅದಕ್ಕೆ ಬಳಸಿದ ಪ್ರಾಪರ್ಟಿ ದೊಡ್ಡದಿತ್ತು, ಕೆಲವು ಫೋಟೋಗಳಲ್ಲಿ ಕಾಸ್ಟುಮ್ ಗಳು ಹೊಂದಾಣಿಕೆ ಕಂಡು ಬರುತ್ತಿರಲಿಲ್ಲ

-ಬಾಲಕೃಷ್ಣ ಶೆಟ್ಟಿ ನೇಸರ ಸ್ಟುಡಿಯೋ ಗುರುವಾಯನಕೆರೆ -ಸಾಂಸ್ಕೃತಿಕ ಕಾರ್ಯದರ್ಶಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯ

Related posts

ಶಿಶಿಲ: ಒಟ್ಲ ನಿವಾಸಿ ನಾರಾಯಣ ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ

Suddi Udaya

ಕಾನರ್ಪ ಕೋಡಿಯಾಲ್ ಬೈಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಾನರ್ಪ ಪ್ರೀಮಿಯರ್ ಲೀಗ್ – 2024 ಕ್ರಿಕೇಟ್ ಪಂದ್ಯಾಟ

Suddi Udaya

ಕುತ್ಲೂರು ಮನೆ ಕಳ್ಳತನ ಪ್ರಕರಣ: ಕುಖ್ಯಾತ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ ಬಂಧನ

Suddi Udaya

ವಿದ್ಯುತ್ ಅವಘಡದಿಂದ ಗೇರು ತೋಪುವಿಗೆ ಬೆಂಕಿ,ಯುವಕರಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿ

Suddi Udaya

ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ “ಪೆರ್ಲ ಬೈಪಾಡಿ ಊರುದ ಭಕ್ತಿದ ಎಸಲ್” ತುಳು ಆಡಿಯೋ & ವಿಡಿಯೋ ಆಲ್ಬಮ್ ಬಿಡುಗಡೆ

Suddi Udaya
error: Content is protected !!