31.7 C
ಪುತ್ತೂರು, ಬೆಳ್ತಂಗಡಿ
October 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೆಸಿಐ ವಲಯ 15ರ ತರಬೇತಿ ಸಮ್ಮೇಳನದಲ್ಲಿ ಜೆಸಿಐ ಉಜಿರೆ ಸಿಟಿಗೆ ತರಬೇತಿ ಸಪ್ತಾಹದ ಚಾಂಪಿಯನ್ ಪ್ರಶಸ್ತಿಯೊಂದಿಗೆ ಹಲವು ಮನ್ನಣೆಗಳು

ಬೆಳ್ತಂಗಡಿ: ಇತ್ತೀಚೆಗೆ ಮಂಗಳೂರಿನ ಜೆಪ್ಪು ಪಾಲೇಮಾರ್ ಗಾರ್ಡನ್ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆದ ಜೆಸಿಐ ವಲಯ 15 ರ ಆರೋಹಣ ತರಬೇತಿ ಸಮ್ಮೇಳನದಲ್ಲಿ ಜೆಸಿಐ ಉಜಿರೆ ಘಟಕವು ತರಬೇತಿ ಸಪ್ತಾಹ ಕಾರ್ಯಕ್ರಮದ ಚಾಂಪಿಯನ್ ಪ್ರಶಸ್ತಿಯೊಂದಿಗೆ ಹಲವು ಮನ್ನಣೆಗಳನ್ನು ಮುಡಿಗೆರೆಸಿಕೊಂಡಿದೆ.

ಈ ಪ್ರಶಸ್ತಿಗಳನ್ನು ವಲಯಾಧ್ಯಕ್ಷ ಜೆಎಫ್ಎಸ್ ಸಂತೋಶ್ ಶೆಟ್ಟಿ ಘಟಕಾಧ್ಯಕ್ಷ ಮಹಮ್ಮದ್ ಮಿರ್ಷಾದ್ ಇವರಿಗೆ ನೀಡಿ ಪ್ರೋತ್ಸಾಹಿಸಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ತರಬೇತಿ ವಿಭಾಗದ ನಿರ್ದೇಶಕ ದೀಪಕ್ ರಾಜ್ ವಹಿಸಿದ್ದರು. ಘಟಕವು ನಡೆಸಿದ ಬಹು ಘಟಕ ತರಬೇತಿ ಕಾರ್ಯಕ್ರಮದ ಮನ್ನಣೆ, ಯುವ ಸಬಲೀಕರಣ ತರಬೇತಿ, ಫ್ಯೂಚರ್ ಟ್ರೈನಿಂಗ್, ಟ್ರೈನಿಂಗ್ ಮ್ಯಾರಥಾನ್ – ಏಳು ದಿನಗಳ ತರಬೇತಿ ಕಾರ್ಯಕ್ರಮಗಳಿಗೆ ಮನ್ನಣೆ, ಶಾಲಾ ಕಾಲೇಜುಗಳಿಗೆ ನಡೆಸಿದ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಮನ್ನಣೆ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳೊಂದಿಗೆ ವಲಯದ ತರಬೇತಿ ಭಾಗದ ಪ್ರತಿಷ್ಠಿತ ಟಾಪ್ 5 ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಈ ಸಂದರ್ಭದಲ್ಲಿ ವಲಯದ ತರಬೇತಿ ವಿಭಾಗದ ಸಂಯೋಜಕಿ,ಘಟಕದ ನಿಕಟಪೂರ್ವಾಧ್ಯಕ್ಷೆ ಆಶಾಲತಾ ಪ್ರಶಾಂತ್, ಘಟಕದ ಮಹಿಳಾ ಜೆಸಿ ವಿಭಾಗದ ಸಂಯೋಜಕಿ ಹೇಮಾವತಿ ಕೆ, ಜೆಸಿ ಸದಸ್ಯ ತಲ್ಹತ್ ಎಮ್ ಜಿ ಭಾಗವಹಿಸಿದ್ದರು.

Related posts

ಪುದುವೆಟ್ಟು: ಮಿಯಾರ್ ಎಂಬಲ್ಲಿ ಮರದಿಂದ ಬಿದ್ದು ವ್ಯಕ್ತಿ ಸಾವು

Suddi Udaya

ಕು| ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಶಿಬಾಜೆ ಗ್ರಾಮ ಸಮಿತಿಯಿಂದ ಸಿಎಂ ಸಿದ್ಧರಾಮಯ್ಯರಿಗೆ ಮನವಿ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹಳ್ಳಿ ಸಂತೆ

Suddi Udaya

ಬೆಳ್ತಂಗಡಿ:ಮುಳಿಯ ಜುವೆಲ್ಸ್ ನಲ್ಲಿ ‘ಮುಳಿಯ ಚಿನ್ನೋತ್ಸವ’ ಸಂಭ್ರಮ: ವಿವಿಧ ಬಗೆಯ ವೆರೈಟಿ ಚಿನ್ನಾಭರಣಗಳಿಗೆ ಮುಳಿಯ ಸಂಸ್ಥೆ ಹೆಸರುವಾಸಿಯಾಗಿದೆ

Suddi Udaya

ಕನ್ಯಾಡಿ 1 ಸ.ಉ.ಹಿ.ಪ್ರಾ. ಶಾಲೆಯಲ್ಲಿ ಆಟಿಡೊಂಜಿ ದಿನ : ಶಿಕ್ಷಕ ನಾಭಿರಾಜ ಜೈನ್ ರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆಯಿಂದ ಆತ್ಮ ಯೋಜನೆಯಡಿ ರೈತರ ಅಧ್ಯಯನ ಪ್ರವಾಸ

Suddi Udaya
error: Content is protected !!