31.7 C
ಪುತ್ತೂರು, ಬೆಳ್ತಂಗಡಿ
October 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಗುರು ಚಿಂತನ ಮುಕ್ತ ಭಾಷಣ ಮತ್ತು ಕವನ ಸ್ಪರ್ಧೆ

ಬೆಳ್ತಂಗಡಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಗುರುಚಿಂತನ ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದ ಮುಕ್ತ ಭಾಷಣ ಮತ್ತು ಕವನ ಸ್ಪರ್ಧೆಯ ಉದ್ಘಾಟನೆಯು ಬೆಳ್ತಂಗಡಿ ಮುಳಿಯ ಜ್ಯುವೆಲ್ಲರ್ಸ್ ಸಭಾಭವನದಲ್ಲಿ ಅ 2ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಡಾಜೆ ಕೀರ್ತನ ಕಲಾ ತಂಡದ ಅಧ್ಯಕ್ಷ ಸದಾನಂದ ಮುಂಡಾಜೆ ನೆರವೇರಿಸಿ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಲೀಲಾವತಿ ವಸಂತಿ ಪೂಜಾರಿ ವಹಿಸಿ, ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಮುಳಿಯ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಲೋಹಿತ್ ಕುಮಾರ್, ಯುವವಾಹಿನಿ ಘಟಕದ ಗೌರವ ಸಲಹೆಗಾರ ರಮಾನಂದ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಅಶ್ವಿನ್ ಬಿಕೆ, ನಿರ್ದೇಶಕ ಯಶೋಧರ ಮುಂಡಾಜೆ, ಕೋಶಾಧಿಕಾರಿ ಸುಧೀಪ್ ಸವಣಾಲು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಪೂರ್ವಾಧ್ಯಕ್ಷರಾದ ರಾಕೇಶ್ ಪೂಜಾರಿ ಮೂಡುಕೋಡಿ, ಅಶ್ವತ್ ಕುಮಾರ್, ಎಂಕೆ ಪ್ರಸಾದ್, ಪ್ರಮಯಖರಾದ ಶಿಕ್ಷಿಕಿ ಸೇವಂತಿ,ಮುಳಿಯ ಉಪಶಾಖಾ ವ್ಯವಸ್ಥಾಪಕ ಸುಧೀರ್ ಕುಮಾರ್, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಜಿತೇಶ್ ಉಪಸ್ಥಿತರಿದ್ದರು.

ಸುಧಾಮಣಿ ಮತ್ತು ಧನು ಕಾರ್ಯಕ್ರಮ ನಿರೂಪಿಸಿದರು. ಶೈಲೇಶ್ ವಂದಿಸಿದರು. ತಾಲೂಕಿನ ವಿವಿಧ ಕಡೆಗಳಿಂದ ನೂರಾರು ಸ್ಪರ್ಧಿಗಳು ಉಪಸ್ಥಿತರಿದ್ದರು.

Related posts

ರೋಟರಿ ಕ್ಲಬ್ ಯಲಹಂಕ ವತಿಯಿಂದ ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ

Suddi Udaya

ಬುರುಡೆ ಚಿನ್ನಯ್ಯ ಬೆಳ್ತಂಗಡಿ ಕೋರ್ಟ್ ಗೆ ಹಾಜರು

Suddi Udaya

ಭಾರತೀಯ ಜನತಾ ಪಾಟಿ೯ದ.ಕ. ಹಾಗೂ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹ – ಬೆಳ್ತಂಗಡಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ಆರಂಭ

Suddi Udaya

ಬೈಂದೂರು ಬ್ರಹ್ಮಾನಂದಶ್ರೀಗಳ ಚಾತುರ್ಮಾಸ್ಯ ವೃತಾಚರಣೆ: ಕಾರ್ಕಳ ಬಿಲ್ಲವ ಸಂಘದಿಂದ 300 ಮಂದಿ ಭಕ್ತಾದಿಗಳು ಭೇಟಿ

Suddi Udaya

ಮಿದುಳಿನ ರಕ್ತಸ್ರಾವ: ಮಹಿಳೆ ಮೃತ್ಯು

Suddi Udaya

ನಾವೂರು–ಕುತ್ಲೂರು ದುರ್ಗಮ ಪ್ರದೇಶಗಳ ವಿದ್ಯುದೀಕರಣಕ್ಕೆ ವನ್ಯಜೀವಿ ಅನುಮತಿ

Suddi Udaya
error: Content is protected !!