ಬೆಳ್ತಂಗಡಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳ್ತಂಗಡಿ ಮತ್ತು ಪಟ್ಟಣ ಪಂಚಾಯತ್ ಬೆಳ್ತಂಗಡಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತೆ ಕಾರ್ಯಕ್ರಮ ಬೆಳ್ತಂಗಡಿ ವಸತಿ ನಿಲಯದಲ್ಲಿ ಅ. 2ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಪಟ್ಟಣ ಪಂಚಾಯತ್ ಮುಖ್ಯಅಧಿಕಾರಿ ರಾಜೇಶ್ ಕೋಟ್ಯಾನ್ ನೆರವೇರಿಸಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಮ, ಸಂಪನ್ಮೂಲ ವ್ಯಕ್ತಿ ಯಕ್ಷಗಾನ ಕಲಾವಿದ ಜಿನೇಂದ್ರ ಜೈನ್, ವಸತಿ ನಿಲಯದ ಮೇಲ್ವಿಚಾರಾಕಿ ಶಶಿಕಲಾ, ಸ್ಥಳೀಯರಾದ ಸನತ್ ಕುಮಾರ್ ಜೈನ್, ಶಾಂತಿರಾಜ ಜೈನ, ಸೌಮ್ಯ ಕರ್ಣಕರ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.













