32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಬೆಳ್ತಂಗಡಿ ವಲಯ ಹಾಗೂ ವಲಯ ಪಾಲನಾ ಪರಿಷತ್ ಇದರ ಸಹಯೋಗದಲ್ಲಿ ಅ. 04 ರಂದು ಮಧ್ಯಾಹ್ನ ಬೆಳ್ತಂಗಡಿ ಚರ್ಚ್ ಆಡಿಟೋರಿಯಂನಲ್ಲಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರವು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರು ಫಾ. ವಾಲ್ಟರ್ ಓಸ್ವಾಲ್ಡ್ ಡಿಮೆಲ್ಲೊ ವಹಿಸಿದ್ದರು. ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕ್ರಿಶ್ಚಿಯನ್ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಒದಗಿಸಿಕೊಡುವ ಭರವಸೆ ನೀಡಿದರು.
ಇದೇ ವೇಳೆ, ಶಾಸಕರಿಗೆ ಬೆಸ್ಟ್ ಅವಾರ್ಡ್ 2025′ ಹಾಗೂ ‘ಉತ್ತಮ ಶಾಸಕ’ ಪ್ರಶಸ್ತಿ ಲಭಿಸಿರುವುದಕ್ಕೆ ಕಥೋಲಿಕ್ ಕ್ರಿಶ್ಚಿಯನ್ ಸಮುದಾಯದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೆರಾಲ್ಡ್ ಡಿಸೋಜ, ಬೆಳ್ತಂಗಡಿ ವಲಯ ಕಥೋಲಿಕ್ ಸಭೆಯ ಅಧ್ಯಕ್ಷ ಆಲ್ಬರ್ಟ್ ಸುನಿಲ್ ಮೋನಿಸ್, ಕಾರ್ಯದರ್ಶಿ ಆಶಾ ಸಲ್ಮಾನ್, ವಲಯ ಪಾಲನ ಪರಿಷತ್ ಕಾರ್ಯದರ್ಶಿ ವಾಲ್ಮರ್ ಮೋನಿಸ್ ಹಾಗೂ ಬೆಳ್ತಂಗಡಿ ಘಟಕ ಕ.ಸಭಾ ಅಧ್ಯಕ್ಷ ಗಿಲ್ಬರ್ಟ್ ಪಿಂಟೊ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ಜೆರಾಲ್ಡ್ ಡಿಸೋಜ ಅವರು ಸರ್ಕಾರದಿಂದ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ ಸಿಗುವ ವಿವಿಧ ಸೌಲಭ್ಯಗಳು ಮತ್ತು ಯೋಜನೆಗಳ ಕುರಿತು ಸಮಗ್ರವಾದ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಫಾ. ವಾಲ್ಟರ್ ಓಸ್ವಾಲ್ಡ್ ಡಿಮೆಲ್ಲೊ ಅವರು ಶಾಸಕರ ಜನಪರ ಕಾರ್ಯವೈಖರಿಯನ್ನು ಅಭಿನಂದಿಸಿ ಮಾತನಾಡಿದರು.
ಕಥೋಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷ ಆಲ್ಬರ್ಟ್ ಸುನಿಲ್ ಮೋನಿಸ್ ಸ್ವಾಗತಿಸಿದರು. ಪಾಲನ ಪರಿಷತ್ ಸದಸ್ಯೆ ಐರಿನ್ ಸಿಕ್ಕೇರಾ ಶಾಸಕರ ಸನ್ಮಾನ ಪತ್ರವನ್ನು ವಾಚಿಸಿದರು. ಕ.ಸ. ವಲಯ ಕಾರ್ಯದರ್ಶಿ ಆಶಾ ಸಲ್ಮಾನ್ಯ ವಂದನಾರ್ಪಣೆಗೈದರು. ಕ.ಸಭಾ ರಾಜಕೀಯ ಸಂಚಾಲಕ ಸ್ಕ್ಯಾನಿ ಪಿಂಟೊ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Related posts

ಗೇರುಕಟ್ಟೆ: ಕಾರು-ಬೈಕ್ ಡಿಕ್ಕಿ, ಬೈಕ್ ಸವಾರನಿಗೆ ಗಾಯ

Suddi Udaya

ಉಜಿರೆಯಲ್ಲಿ ಸಂಕಷ್ಟಿ ಪ್ರಯುಕ್ತ ತಾಳಮದ್ದಳೆ

Suddi Udaya

ಬೆಳ್ತಂಗಡಿ: ಪಟ್ಟಣ ಪಂಚಾಯತ್ ನೀರಿನ ನೌಕರನ ಮೇಲೆ ಹೆಜ್ಜೇನು ದಾಳಿ: ರಕ್ಷಣೆಗೆ ಬಂದ ಆಪತ್ಬಾಂಧವ ಇಸ್ಮಾಯಿಲ್ ಸಂಜಯನಗರ

Suddi Udaya

ಓಡಿಲ್ನಾಳ ಸ. ಉ. ಪ್ರಾ. ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ

Suddi Udaya

ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಜುಶ್ರೀ ನಿವೃತ್ತ ಮ್ಯಾನೇಜರ್ ಶೇಖರ್ ಅವರಿಗೆ ಸನ್ಮಾನ

Suddi Udaya

ಬೆಳಾಲು ಗೌಡರ ಯಾನೆ ಒಕ್ಕಲಿಗರ ವಾರ್ಷಿಕೋತ್ಸವ

Suddi Udaya
error: Content is protected !!