September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ 36 ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಪೂರ್ಣಾಂಕ

ಉಜಿರೆ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಒಟ್ಟು ಮೂವತ್ತಾರು ವಿದ್ಯಾರ್ಥಿಗಳು ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ.

ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ ಒಟ್ಟು 98 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಇವರಲ್ಲಿ ಕಲಾ ವಿಭಾಗದ ನಿಜ ಕುಲಾಲ್ ರಾಜ್ಯಮಟ್ಟದಲ್ಲಿ 4 ನೆಯ ಸ್ಥಾನ ಹಾಗೂ ಶ್ರೀಪೂರ್ಣಾ 9 ನೆಯ ಸ್ಥಾನ , ವಾಣಿಜ್ಯಶಾಸ್ತ್ರ ವಿಭಾಗದ ಹಂಸಿನಿ ಭಿಡೆ 6 ನೆಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ಸಂಸ್ಕೃತ ಭಾಷಾ ವಿಭಾಗ ಒಟ್ಟಾರೆ 100 ಶೇಕಡಾ ಫಲಿತಾಂಶ ದಾಖಲಿಸಿದೆ.

ವಿಜ್ಞಾನ ವಿಭಾಗದ ಅಮೂಲ್ಯ ಪ್ರಭು, ಅನ್ವಿತಾ ಹೆಬ್ಬಾರ್ , ಆಶೀತ್ ಕುಮಾರ್ , ದಿವ್ಯಾ , ಪಲ್ಲವಿ ಪುರಾಣಿಕ್ , ಪ್ರಯಾಗ ಪುರಾಣಿಕ್ , ಪ್ರಜ್ವಲ್ , ಶ್ರೀವೈಷ್ಣವಿ , ಶ್ರೀಧರ ಎಂ ಹೆಗಡೆ , ಕಾರ್ತಿಕ್ ಡಿ.ಎಂ , ಯಶಸ್ವಿನಿ , ಸಾಹಿತ್ಯ ಎನ್. ಎಸ್ , ಸಮೃದ್ಧಿ , ಭವಿಷ್ , ಪೂರ್ವಿಕಾ ಆರ್ , ಪ್ರಜ್ಞಾ , ಪ್ರೀತಿ ಕೆ. ಜೆ , ಸಂಕೀರ್ತನಾ , ಎಸ್. ಪಿ ಸಾನ್ವಿ , ಮೇಧಾ ಕುಂದಾಡಿ , ನಿಶಾಂತ್ ಹೆಚ್.ಜಿ , ಪ್ರಣೀತಾ ಕೆ.ಪಿ , ವೀಕ್ಷಿತ್ , ಸಿದ್ಧಾಂತ್ ಜೈನ್

ವಾಣಿಜ್ಯಶಾಸ್ತ್ರ ವಿಭಾಗದ ಸಿಂಚನಾ ಶೆಣೈ , ಅನಿಕಾ , ಆದಿತ್ಯ ಹೆಚ್. ಎಸ್ , ಪ್ರಥಮ್ , ಸ್ಪಂದನಾ , ಸಂಜನಾ , ಸುದರ್ಶನ್ , ಸೌಪರ್ಣಿಕಾ ರಾವ್ , ಹಂಸಿನಿ ಭಿಡೆ

ಕಲಾ ವಿಭಾಗದ ನಿಜ ಕುಲಾಲ್ , ಶ್ರೀ ಪೂರ್ಣಾ ಹಾಗೂ ಪ್ರಣವಕೃಷ್ಣ ಇವರು ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕ ಪಡೆದು ಕಾಲೇಜಿಗೆ ಹಾಗೂ ಸಂಸ್ಕೃತ ಭಾಷಾ ವಿಭಾಗಕ್ಕೆ ಹೆಮ್ಮೆ ತಂದಿದ್ದಾರೆ.
ಇವರನ್ನು ಆಡಳಿತ ಮಂಡಳಿ , ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಹಾಗೂ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಇವರು ಅಭಿನಂದಿಸಿದ್ದಾರೆ.

Related posts

ವಿಜಯರತ್ನ ಪ್ರಶಸ್ತಿ ಪುರಸ್ಕೃತ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರನ್ನು ಅಭಿನಂದಿಸಿದ ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಪದಾಧಿಕಾರಿಗಳು

Suddi Udaya

ಪಿಲಿಗೂಡು ಬಳಿ ಕಂದಕಕ್ಕೆ ಜಾರಿದ ಲಾರಿ

Suddi Udaya

ಗ್ರಾಮೀಣ ಪ್ರತಿಭೆ ಉತ್ತಮ‌ ಸಾಧನೆ, ಅಂಡಿಂಜೆಯ ದ್ವಿಶಾನ್ ಜೈನ್ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Suddi Udaya

ರಾತ್ರಿ 3 ಗಂಟೆಗೆ ಚಾರ್ಮಾಡಿ ಮೂಲಕ ಬೆಳ್ತಂಗಡಿ ತಲುಪುವ ಬಂಗೇರರ ಪ್ರಾರ್ಥಿವ ಶರೀರ: ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಬೆಳ್ತಂಗಡಿ ನಗರದಲ್ಲಿ ಅಂತಿಮ ಯಾತ್ರೆ

Suddi Udaya

ಗೇರುಕಟ್ಟೆ : ಪರಪ್ಪು ಜಮಾಅತ್ ನಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಎಂ.ಕೆ. ಅಹ್ಮದ್ ಯೂಸುಫ್ ರವರಿಗೆ ಗೌರವಾರ್ಪಣೆ

Suddi Udaya

ಬಳಂಜ: ನಾಲ್ಕೂರು ಬೊಳ್ಳಾಜೆ, ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆ ಹೆಜ್ಜೆಗುರುತು: ಅರಣ್ಯ ಇಲಾಖೆಗೆ ಮಾಹಿತಿ, ಚಿರತೆಯ ಸೆರೆಗೆ ಬೋನ್ ಅಳವಡಿಕೆ

Suddi Udaya
error: Content is protected !!