25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಬಾಲಕನ ಶವ ಕಾಪು ಹೆಜಮಾಡಿಯಲ್ಲಿ ಪತ್ತೆ

ಬೆಳ್ತಂಗಡಿ ನಗರದ ರೆಂಕೆದಗುತ್ತು, ಕಸಬಾ ಗ್ರಾಮ ನಿವಾಸಿ ಶ್ರೇಯಸ್ ಎಸ್. ಕುಂಬಾರ (14 ವ) ಬಾಲಕ ಪಣಂಬೂರು ಬೀಚ್ ನಲ್ಲಿ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಇದೀಗ ಬಾಲಕನ ಮೃತದೇಹ ಉಡುಪಿ ಜಿಲ್ಲೆಯ ಕಾಪು ಹೆಜಮಾಡಿಯಲ್ಲಿ ಅ.6 ರಂದು ಪತ್ತೆಯಾಗಿದೆ.

ಘಟನೆ ವಿವರ: ಬಾಲಕ‌ ಶ್ರೇಯಸ್ ಎಸ್. ತನ್ನ 4 ಜನ ಅಪ್ರಾಪ್ತ ಸ್ನೇಹಿತರ ಜೊತೆ ಅ.4 ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ದಸರಾ ಹಬ್ಬದ ಪ್ರಯುಕ್ತ ಮಂಗಳೂರಿನಲ್ಲಿ ಹುಲಿ ವೇಷ ಹಾಕುವ ತರಬೇತಿಗಾಗಿ ಮಂಗಳೂರಿಗೆ ಬಂದವರು, ತರಬೇತಿ ಮುಗಿದ ನಂತರ ಶ್ರೇಯಸ್ ಹಾಗೂ ಆತನ ಸ್ನೇಹಿತರು ಸ್ಟೇಟ್ ಬ್ಯಾಂಕ್ ನಿಂದ ಪಣಂಬೂರು ಬೀಚ್ ಗೆ ಬಂದು, ಸಂಜೆ ಸುಮಾರು 4:30 ರಿಂದ 5 ಗಂಟೆಗೆ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿದ್ದು. ಸಂಜೆ ಸುಮಾರು 6 ಗಂಟೆಗೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಶ್ರೇಯಸ್ ನೀರಿನಲ್ಲಿ ಮುಳುಗಿ, ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದರು.

ಇದೀಗ ತೀವ್ರ ಕಾರ್ಯಾಚರಣೆಯ ಬಳಿಕ ಮೃತ ದೇಹ ಉಡುಪಿ ಜಿಲ್ಲೆಯ ಕಾಪು ಹೆಜಮಾಡಿಯಲ್ಲಿ ಪತ್ತೆಯಾಗಿದೆ.

Related posts

ಮೊಗ್ರು: ಪುಣ್ಕೆತಡಿ ನಿವಾಸಿ ಉಮ್ಮಕ್ಕ ನಿಧನ

Suddi Udaya

ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ಸಭೆ

Suddi Udaya

ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿ, ಮತ್ತು ಎಸ್.ಡಿ.ಎಂ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಜಂಟಿ ಆಶ್ರಯ:ಬೆಳ್ತಂಗಡಿ ಸಂತಕಟ್ಟೆ ಮತ್ತು ಬಸ್ ನಿಲ್ದಾಣದ ಬಳಿ ಮತದಾನ ಜಾಗೃತಿ ಬೀದಿ ನಾಟಕ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಹಾಗೂ ಶಿಕ್ಷಣ ಸಂಯೋಜಕಿ ಶ್ರೀಮತಿ ಚೇತನಾಕ್ಷಿ ಭೇಟಿ

Suddi Udaya

ಬಳಂಜ:ಆಮ್ಮಿ ಪೂಜಾರಿ ನಿಧನ

Suddi Udaya

ಕುವೆಟ್ಟು: ಶ್ರೀ ರಾಮನವಮಿ ಉತ್ಸವ-ಧಾರ್ಮಿಕ ಸಭೆ

Suddi Udaya
error: Content is protected !!