24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಸಿಐ ವಲಯ 15ರ ತರಬೇತಿ ಸಮ್ಮೇಳನದಲ್ಲಿ ಜೆಸಿಐ ಉಜಿರೆ ಸಿಟಿಗೆ ಹಲವು ಪ್ರಶಸ್ತಿ ಮನ್ನಣೆಗಳ ಗರಿ

ಬೆಳ್ತಂಗಡಿ: ಇತ್ತೀಚೆಗೆ ಮಂಗಳೂರಿನ ಜೆಪ್ಪು ಪಾಲೇಮಾರ್ ಗಾರ್ಡನ್ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆದ ಜೆಸಿಐ ವಲಯ 15 ರ ಆರೋಹಣ ತರಬೇತಿ ಸಮ್ಮೇಳನದಲ್ಲಿ ಜೆಸಿಐ ಉಜಿರೆ ಘಟಕವು ತರಬೇತಿ ಸಪ್ತಾಹ ಕಾರ್ಯಕ್ರಮದ ಚಾಂಪಿಯನ್ ಪ್ರಶಸ್ತಿಯೊಂದಿಗೆ ಹಲವು ಮನ್ನಣೆಗಳನ್ನು ಮುಡಿಗೆರೆಸಿಕೊಂಡಿದೆ.

ಈ ಪ್ರಶಸ್ತಿಗಳನ್ನು ವಲಯಾಧ್ಯಕ್ಷ ಜೆಎಫ್ಎಸ್ ಸಂತೋಷ್ ಶೆಟ್ಟಿ ಘಟಕಾಧ್ಯಕ್ಷ ಮಹಮ್ಮದ್ ಮಿರ್ಷಾದ್ ಇವರಿಗೆ ನೀಡಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ತರಬೇತಿ ವಿಭಾಗದ ನಿರ್ದೇಶಕ ದೀಪಕ್ ರಾಜ್ ಉಪಸ್ಥಿತರಿದ್ದರು.
ಘಟಕವು ನಡೆಸಿದ ಬಹು ಘಟಕ ತರಬೇತಿ ಕಾರ್ಯಕ್ರಮದ ಮನ್ನಣೆ, ಯುವ ಸಬಲೀಕರಣ ತರಬೇತಿ, ಫ್ಯೂಚರ್ ಟ್ರೈನಿಂಗ್, ಟ್ರೈನಿಂಗ್ ಮ್ಯಾರಥಾನ್ – ಏಳು ದಿನಗಳ ತರಬೇತಿ ಕಾರ್ಯಕ್ರಮಗಳಿಗೆ ಮನ್ನಣೆ, ಶಾಲಾ ಕಾಲೇಜುಗಳಿಗೆ ನಡೆಸಿದ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಮನ್ನಣೆ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳೊಂದಿಗೆ ವಲಯದ ತರಬೇತಿ ಭಾಗದ ಪ್ರತಿಷ್ಠಿತ ಟಾಪ್ 5 ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಸಂದರ್ಭದಲ್ಲಿ ವಲಯದ ತರಬೇತಿ ವಿಭಾಗದ ಸಂಯೋಜಕಿ, ಘಟಕದ ನಿಕಟಪೂರ್ವಾಧ್ಯಕ್ಷೆ ಆಶಾಲತಾ ಪ್ರಶಾಂತ್, ಘಟಕದ ಮಹಿಳಾ ಜೆಸಿ ವಿಭಾಗದ ಸಂಯೋಜಕಿ ಹೇಮಾವತಿ ಕೆ, ಜೆಸಿ ಸದಸ್ಯ ತಲ್ಹತ್ ಎಮ್ ಜಿ ಭಾಗವಹಿಸಿದ್ದರು.

Related posts

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಮಿತ್ತಬಾಗಿಲು ಪ್ರೌಢ ಶಾಲೆಯಲ್ಲಿಎಸ್ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯ ಸಮಾರೋಪ ಸಮಾರಂಭ

Suddi Udaya

ಶಿಶಿಲ ಪೇಟೆಯಲ್ಲಿ ಒಂಟಿ ಸಲಗ ಸಂಚಾರ

Suddi Udaya

ದೆಹಲಿಯ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಸದಸ್ಯ ಧನ್ಯ ಕುಮಾರ್ ಜಿನ್ನಪ್ಪ ಗುಂಡೆ ಭೇಟಿ: ಅಲ್ಪಸಂಖ್ಯಾತ ಜೈನ ಧರ್ಮಿಯರ ಅಭಿವೃದ್ಧಿಯ ಬಗ್ಗೆ ಹಾಗೂ ಜೈನ ಅಭಿವೃದ್ಧಿ ನಿಗಮ ರಚಿಸುವ ಬಗ್ಗೆ ಚರ್ಚೆ

Suddi Udaya

ಲಾಯಿಲ ಗ್ರಾಮ ಪಂಚಾಯತ್ ವಾರ್ಡ್ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ

Suddi Udaya

ಬೈಲಂಗಡಿ :ಶ್ರೀ ಸೋಮನಾಥೇಶ್ವರ ದೇವಸ್ಥಾನ ತೋಟತ್ತಾಡಿ ಬ್ರಹ್ಮ ಕಲಶೋತ್ಸವ ಕಾರ್ಯಾಲಯ ಉದ್ಘಾಟನೆ

Suddi Udaya
error: Content is protected !!