34.1 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾವೂರು ಆರೋಗ್ಯ ಕ್ಲಿನಿಕ್ ಗೆ ಬೆಂಕಿ: ದುಷ್ಕೃತ್ಯ ಖಂಡಿಸಿ ವಿಶೇಷ ಪ್ರಾರ್ಥನೆ, ಖಂಡನಾ ಸಭೆ

ನಾವೂರು: ನಾವೂರು ಗ್ರಾಮದ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ ಮೇಲೆ ಅ. 06ರ ರಾತ್ರಿ ದುಷ್ಕರ್ಮಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ ಹೇಯ ಕೃತ್ಯವು ಅತ್ಯಂತ ಖಂಡನೀಯ ಮತ್ತು ಆಘಾತಕಾರಿ ಎಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ (ರಿ) ನಾವೂರು ಖಂಡಿಸಿ ಈ ಬಗ್ಗೆ ತಪ್ಪಿತಸ್ಥರ ಶೀಘ್ರು ಬಂಧನಕ್ಕಾಗಿ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನದಲ್ಲಿ ಅ.08 ರಂದು ಬೆಳಿಗ್ಗೆ 8:00 ರಿಂದ 8:25ರ ವರೆಗೆ ವಿಷ್ಣು ಸಹಸ್ರನಾಮ ಪಠಣ ಮತ್ತು ವಿಶೇಷ ಪ್ರಾರ್ಥನೆ ನಡೆಸಲಾಯಿತು.

ಬಳಿಕ ಆರೋಗ್ಯ ಕ್ಲಿನಿಕ್ ನಾವೂರು ಇಲ್ಲಿ ಸಾರ್ವಜನಿಕ ಸಮಾಲೋಚನಾ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ನೂರಾರು ಗ್ರಾಮಸ್ಥರು ಭಾಗವಹಿಸಿ ಘಟನೆಯನ್ನು ಖಂಡಿಸಿದರು.

ಸಭೆಯಲ್ಲಿ ಮಾತನಾಡಿದ ಡಾ. ಪ್ರದೀಪ್ ಎ. ಆಟಿಕುಕ್ಕೆಯವರು, “ಆಗದ ಘಟನೆ ಆಗಿ ಹೋಗಿದೆ. ಮೊದಲು ವಿದ್ಯುತ್ ಅವಘಡ ಆಗಿರಬೇಕು, ಕೃಷ್ಣ ಮುನಿಸಿಕೊಂಡಿದ್ದಾನೆ ಎಂದು ತಿಳಿದುಕೊಂಡಿದ್ದೆ. ಆದರೆ ಬೆಂಕಿ ಕೊಟ್ಟಿರುವುದು ಸ್ಪಷ್ಟವಾಯಿತು. ಧರ್ಮವನ್ನು ಮೀರಿ ಊರಿನವರು ನನ್ನ ಜೊತೆಗೆ ನಿಂತಾಗ ತುಂಬಾ ಸಂತೋಷವಾಯಿತು. ಮುಂದೆ ಇಂತಹ ಕೃತ್ಯ ನಡೆಯಬಾರದು. ಔಷಧಿಗಳು ಭಸ್ಮವಾಗಿವೆ, ಇಚ್ಛಾಶಕ್ತಿ ಭಸ್ಮವಾಗಿಲ್ಲ. ನಿಮ್ಮೆಲ್ಲರ ಪ್ರೀತಿ, ಸಹಕಾರ ಹೀಗೆ ಇರಲಿ. ಈ ಬೆಂಕಿಯನ್ನು ಎಲ್ಲರೂ ಸೇರಿ ನಂದಿಸುತ್ತೀರಿ ಎಂಬ ನಂಬಿಕೆ ಇದೆ” ಎಂದು ಭಾವುಕರಾಗಿ ಹೇಳಿದರು.

ಆರೋಗ್ಯ ಕಾಪಾಡುವ ಮದ್ದಿಗೆ ಬೆಂಕಿ ಕೊಟ್ಟವರಿಗೆ ಶಿಕ್ಷೆಯಾಗಲೇಬೇಕು, ಡಾ. ಪ್ರದೀಪ್ ಅವರ ಜೊತೆ ನಾವೆಲ್ಲರೂ ಇದ್ದೇವೆ ಎಂದು ಸಾರ್ವಜನಿಕರು ಸಾರಿದರು. ಸಭೆ ನಡೆದ ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆ ಸಾರ್ವಜನಿಕರು ಸೇರಿ ಮನವಿ ಸಲ್ಲಿಸಿದರು, ಖಂಡನಾ ಸಭೆಯಲ್ಲಿ ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ, ಮಾಜಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಸಂಪತ್ ಸುವರ್ಣ, ಜಗದೀಶ್ ಪ್ರಸಾದ್, ಕಟ್ಟಡ ಮಾಲಕರಾದ ಶೇಖರ್ ಪೂಜಾರಿ, ತನುಜಾ ಶೇಖರ್, ಹರೀಶ್ ಸಾಲ್ಯಾನ್, ಗಣೇಶ್ ಗೌಡ, ಡಾ. ಹರಿಕಿರಣ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ನಿವೃತ್ತ ಪ್ರಾಂಶುಪಾಲ ಟಿ.ಪಿ. ಆ್ಯಂಟನಿ, ರಾಜಶೇಖರ್ ಅಜಿ, ಜ್ಯೋತಿ ಆಸ್ಪತ್ರೆ ಲಾಯಿಲದ ಡಾ. ಅನುಜಾ, ವಿ.ಜಿ. ಪ್ರವೀಣ್ ನಡ, ವಿಶ್ವ ಹಿಂದೂ ಪರಿಷತ್ ನ ವಿಜಯ ಹೊಡಿಕಾರ್ ಸೇರಿದಂತೆ ನೂರಾರು ಗ್ರಾಮಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Related posts

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ಬೆಳ್ತಂಗಡಿ ತಾ| ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Suddi Udaya

ಕಣಿಯೂರು: ದೀಪಾ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ರಂಗಮಂದಿರ ನಿರ್ಮಾಣಕ್ಕೆ ಕಾಶಿ ಶೆಟ್ಟಿ ಅವರ ಸ್ಮರಣಾರ್ಥವಾಗಿ, ಉದ್ಯಮಿ ಶಶಿಧರ ಶೆಟ್ಟಿಯವರಿಂದ ರೂ 5 ಲಕ್ಷ ಸಹಾಯಧನ

Suddi Udaya

ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನ: ನಡ ಸರಕಾರಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ

Suddi Udaya

ಮುಂಡೂರು : ಕೋಟಿಕಟ್ಟೆಯಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ: ಶಿಲಾಮಯ ಕಟ್ಟೆ ಹಾಗೂ ಗುಡಿ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಿದ ಗುರುವಪ್ಪ ಸಾಲಿಯಾನ್ ಕೇರಿಯಾರ್ ರವರಿಗೆ ಸನ್ಮಾನ

Suddi Udaya

ಕೂಟ ಮಹಾ ಜಗತ್ತು ಸಾಲಿಗ್ರಾಮ 70ನೇ ಕೇಂದ್ರೀಯ ಮಹಾಧಿವೇಶನ: ಬೆಳ್ತಂಗಡಿ ಮಹಿಳಾ ವೇದಿಕೆಯ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ

Suddi Udaya
error: Content is protected !!