34.2 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ಟೀಮ್ ಕಲಾಟಿಯನ್ ಟೈಗರ್ಸ್ ವತಿಯಿಂದ ಊದು ಪೂಜೆ: ಹುಲಿವೇಷ ಪ್ರದರ್ಶನ

ಉಜಿರೆ: ದಸರಾ ಹಬ್ಬದ ಪ್ರಯುಕ್ತ ಟೀಮ್ ಕಲಾಟಿಯನ್ ಟೈಗರ್ಸ್ ವತಿಯಿಂದ ಉಜಿರೆ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ಊದು ಪೂಜಾ ಕಾರ್ಯಕ್ರಮ ಅ.11ರಂದು ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್‌ ಕುಮಾರ್ ಅವರು ದೀಪ ಪ್ರಜ್ವಲನೆಗೊಳಿಸಿ ಮಾತನಾಡಿ, ಇದು ಉಜಿರೆಯ ಇತಿಹಾಸದಲ್ಲಿ ಪ್ರಪ್ರಥಮ ಕಾರ್ಯಕ್ರಮವಾಗಿದೆ. ಊರಿನ ಪ್ರತಿಯೊಬ್ಬರು ಕಲಾಟಿಯನ್ ಟೈಗರ್ಸ್ ಯುವಕರ ತಂಡಕ್ಕೆ ಬೆಂಬಲವಾಗಿ ನಿಂತರೆ ಮಾತ್ರ ಈ ಪರಂಪರೆ ಮುನ್ನಡೆಯಲು ಸಾಧ್ಯ ಎಂದರು.

ವೇದಿಕೆಯಲ್ಲಿ ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ ಕೃಷ್ಣ ಪಡುವೆಟ್ನಾಯ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಪುತ್ತೂರು ಸಹಜ್ ರೈ , ಮಂಜು ಬೆಂಗಳೂರು, ರಾಜೇಶ್ ಕಾರಂತ್, ಭಾಸ್ಕರ ಧರ್ಮಸ್ಥಳ, ಸಜಿ ರೈ, ಜಯಪ್ರಕಾಶ್, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ರವಿ ಚಕ್ಕಿತ್ತಾಯ, ವಕೀಲ ಮುರಳಿ ಬಲಿಪ, ಪ್ರವೀಣ್ ಹಳ್ಳಿಮನೆ ಉಜಿರೆ, ವರದಿಗಾರ ನಿಶಾನ್ ಬಂಗೇರ, ಅಹನ ನಾಯರ್, ವಿನ್ಯಾಶ್ ಭಂಡಾರಿ ಹಾಗೂ ಕಲಾಟಿಯನ್ ಟೈಗರ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಉಜಿರೆ ನಿನಾದ ಕ್ಲಾಸಿಕಲ್ಸ್ ನಲ್ಲಿ ನೋಂದಾವಣಿ ಆರಂಭ: ಒಂದೇ ಸೂರಿನಡಿಯಲ್ಲಿ ವಿವಿಧ ವಿದ್ಯೆಗಳನ್ನು ಕಲಿಯುವ ಸುವರ್ಣಾವಕಾಶ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ : ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಡಂತ್ಯಾರು ವಲಯದ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Suddi Udaya

ಮದ್ದಡ್ಕ ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಜ.4: ಗುರುವಾಯನಕೆರೆ ವಿದ್ವತ್ ಪಿ ಯು. ಕಾಲೇಜಿನಲ್ಲಿ ತಾಲೂಕು ಮಟ್ಟದ ಪುರುಷರ ಹಾಗೂ ಆಹ್ವಾನಿತ ಮಹಿಳೆಯರ ವಾಲಿಬಾಲ್ ಪಂದ್ಯಾಟ

Suddi Udaya

ಸುಲ್ಕೇರಿ ಶ್ರೀ ರಾಮ ಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ ಉದ್ಘಾಟನೆ

Suddi Udaya
error: Content is protected !!