24.2 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್‌ಐಆರ್ ದುರುಪಯೋಗಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಮನವಿ

ಬೆಳ್ತಂಗಡಿ: ಎಸ್‌ಐಆರ್ ಫಾರಂ ನಂಬ್ರ 7 ನ್ನು ದುರುಪಯೋಗಪಡಿಸಿ ಮತದಾರರ ಪಟ್ಟಿಯಿಂದ ಮುಸ್ಲಿಮರ ಹೆಸರುಗಳನ್ನು ಕೈ ಬಿಡುವಂತೆ ಹುನ್ನಾರ ನಡೆಸಿ ಜನಾಂಗೀಯ ವೈಷಮ್ಯ ಹರಡಲು ಯತ್ನಿಸಿದವರ ಮೇಲೆ ಸುಮೊಟೋ ಪ್ರಕರಣ ದಾಖಲಿಸುವ ಸುನ್ನೀ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಬೆಳ್ತಂಗಡಿ ಆರಕ್ಷಕ ಠಾಣಾಧಿಕಾರಿಗಳಿಗೆ ಮತ್ತು ತಾಲೂಕು ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಸಂಯುಕ್ತ ಜಮಾಅತ್ ನಾಯಕರು, ತಹಶಿಲ್ದಾರರು ಹಾಗೂ ಪೊಲೀಸ್ ಇಲಾಖೆ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಲಂಕಷವಾಗಿ ತನಿಖೆ ನಡೆಸಿ, ತಪ್ಪಿತಸ್ಥರು ಎಷ್ಟೇ ದೊಡ್ಡ ಪ್ರಭಾವಿಗಳಾದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ತಾಲೂಕಿನ 80 ಕ್ಕೂ ಮಿಕ್ಕ ಜಮಾಅತರ ಒಕ್ಕೂಟದ ಈ ಮನವಿಗೆ ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾದ ಪ್ರತಿರೋಧ ನಡೆಸಲು ಈಗಾಗಲೇ ಅಭಿಪ್ರಾಯಪಡಲಾಗಿದೆ ಎಂದರು.


ಇದೇ ವೇಳೆ ಮನವಿ ಸ್ವೀಕರಿಸಿದ ಅಧಿಕಾರಿಗಳು ಮಾತನಾಡಿ, ಮೇಲಾಧಿಕಾರಿಗಳ ಮಾರ್ಗದರ್ಶನ‌ ಪಡೆದು ಶೀಘ್ರವಾಗಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

ಸುನ್ನೀ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್, ವಿವಿಧ ಸಂಘ ಕುಟುಂಬಗಳ ನಾಯಕರಾದ ಸಯ್ಯಿದ್ ಎಸ್ ಎಂ ಕೋಯ ತಂಙಳ್, ಅಬ್ದುರ್ರಹ್ಮಾನ್ ಸಖಾಫಿ, ಎಂಬಿಎಂ ಸ್ವಾದಿಕ್ ಮಾಸ್ಟರ್, ಮುಹಮ್ಮದ್ ರಫೀ ಬೆಳ್ತಂಗಡಿ, ಅಬ್ಬೋನು ಮದ್ದಡ್ಕ, ಅಬ್ಬಾಸ್ ಬಟ್ಲಡ್ಕ, ಕಾಸಿಂ ಪದ್ಮುಂಜ, ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್, ಅಶ್ರಫ್ ಆಲಿಕುಂಞಿ ಮುಂಡಾಜೆ, ಸಲೀಂ ಕನ್ಯಾಡಿ, ಕೆ ಎಸ್ ಅಬ್ದುಲ್ಲಾ, ತ್ವಾಹಿರ್ ಸಖಾಫಿ ಕಾಜೂರು, ಇಬ್ರಾಹಿಂ ಕಕ್ಕಿಂಜೆ, ಅಬ್ದುಲ್ ನಾಸಿರ್, ಹಂಝತ್ ಪದ್ಮುಂಜ, ಸ್ವಾಲಿಹ್ ಪದ್ಮುಂಜ ಮೊದಲಾದವರು ಭಾಗವಹಿಸಿದ್ದರು.

Related posts

ವೇಣೂರು ಸಿಎ ಬ್ಯಾಂಕ್ ಮತ್ತೊಮ್ಮೆ ಬಿಜೆಪಿ ಗದ್ದುಗೆಗೆ: ಆಡಳಿತ ಮಂಡಳಿಯನ್ನು ಅಭಿನಂದಿಸಿದ ಬಿಜೆಪಿ ಕಾರ್ಯಕರ್ತರು

Suddi Udaya

ಧರ್ಮಸ್ಥಳ: ನೇರ್ತನೆ ಪರಿಸರದಲ್ಲಿ ಮತ್ತೆ ತೋಟಕ್ಕೆ ನುಗ್ಗಿದ್ದ ಕಾಡಾನೆ : ಕೃಷಿಗೆ ವ್ಯಾಪಕ ಹಾನಿ

Suddi Udaya

ದ.ಕ. ಜಿಲ್ಲಾ ತುಳು ಪರಿಷತ್ ನ ಉಪಾಧ್ಯಕ್ಷರಾಗಿ ಧರಣೇಂದ್ರ ಕುಮಾರ್, ಸದಸ್ಯರಾಗಿ ಇಸ್ಮಾಯಿಲ್ ಕೆ. ಆಯ್ಕೆ

Suddi Udaya

ಎಸ್.ಡಿ.ಎಂ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷಾ ವಿದ್ಯಾರ್ಥಿ ವೇತನ

Suddi Udaya

ಉಜಿರೆ: ಚಲಿಸುತ್ತಿದ್ದಾಗಲೇ ಕಳಚಿ ಬಿದ್ದ ಕೆ.ಎಸ್ ಆರ್ ಟಿಸಿ ಬಸ್ ಟಯರ್

Suddi Udaya

ನಾವೂರು ತೃಪ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya
error: Content is protected !!