24.2 C
ಪುತ್ತೂರು, ಬೆಳ್ತಂಗಡಿ
October 14, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಂತೋಷ್‌ ರಾವ್‌ ತನಿಖೆಗೆ ಒಳಪಡಿಸದೆ ನೂತನ ಎಸ್‌.ಐ.ಟಿ ತನಿಖೆ ಅಪೂರ್ಣ– ಹೈಕೋರ್ಟ್ ವಕೀಲ ಅಮೃತೇಶ್

ಬೆಂಗಳೂರು: ಕಳೆದ 14 ವರ್ಷಗಳಿಂದ ಇಡೀ ಕರ್ನಾಟಕ ರಾಜ್ಯವೇ ಬೆರಗಾಗುವಂತೆ ಮಾಡಿರುವ ಹಾಗೂ ಹಲವಾರು ವಿವಾದಗಳಿಗೆ ಕಾರಣವಾಗಿರುವ ಬೆಳ್ತಂಗಡಿಯ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿರಿಯ ನ್ಯಾಯವಾದಿಗಳು ಹಾಗೂ ‘ವಾಯ್ಸ್ ಆಫ್ ಪಬ್ಲಿಕ್’ ಸಂಘಟನೆಯ ಮುಖ್ಯಸ್ಥರಾದ ಅಮೃತೇಶ್ ರವರು ಮಹತ್ವದ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ನಗರದ ಖಾಸಗಿ ಹೋಟೇಲ್ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಕರಣದ ಆರೋಪಿಯಾಗಿದ್ದ ಸಂತೋಷ್‌ ರಾವ್‌ ನನ್ನು ಹೊಸ ಎಸ್‌.ಐ.ಟಿ ತನಿಖೆಗೆ ಒಳಪಡಿಸದಿದ್ದರೆ ಅಪೂರ್ಣ ಎಂದಿದ್ದಾರೆ. ಅಲ್ಲದೇ ಪ್ರಕರಣದ ದಿಕ್ಕು ತಪ್ಪುತ್ತಿರುವ ಬಗ್ಗೆ ಮತ್ತು ಇದರ ಹಿಂದೆ ನಡೆಯುತ್ತಿರುವ ಹಣದಾಸೆಯ ಷಡ್ಯಂತ್ರಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಅಮೃತೇಶ್ ಅವರು ಸೌಜನ್ಯ ಪ್ರಕರಣದ ಸಂಪೂರ್ಣ ಹಿನ್ನೆಲೆ, ವೈದ್ಯಕೀಯ ವರದಿಗಳಲ್ಲಿ ಮುಚ್ಚಿಡಲಾದ ಸತ್ಯಗಳು ಹಾಗೂ ಧರ್ಮಸ್ಥಳದಂತಹ ಪುಣ್ಯಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ವ್ಯವಸ್ಥಿತ ಸಂಚುಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿರುವ ಸಾಕ್ಷಯಗಳ ಬಗ್ಗೆ ಬೆಳಕು ಚೆಲ್ಲಿದರು. 14 ವರ್ಷಗಳ ಹಿಂದಿನ ಘಟನೆ ಮತ್ತು ದಿಕ್ಕು ತಪ್ಪಿದ ತನಿಖೆ!ಸೌಜನ್ಯ ಪ್ರಕರಣವು ಆರಂಭದಲ್ಲಿ ಕೇವಲ ನಾಪತ್ತೆ ಪ್ರಕರಣವಾಗಿ ದಾಖಲಾಗಿತ್ತು. ಆಕೆಯ ಮೃತದೇಹ ಪತ್ತೆಯಾದ ಮರುದಿನ, ಆಕೆಯ ದೇಹದ ಮೇಲಿದ್ದ ಗಾಯಗಳನ್ನು ಆಧರಿಸಿ ಅದನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣವಾಗಿ ಬದಲಾಯಿಸಲಾಯಿತು. ತದನಂತರ ಈ ಪ್ರಕರಣವು ಸ್ಥಳೀಯ ಪೊಲೀಸರಿಂದ ಸಿಐಡಿ (CID) ತನಿಖೆಗೆ, ಅಲ್ಲಿಂದ CBI ತನಿಖೆಗೆ ಹಸ್ತಾಂತರಗೊಂಡಿತು. ಆದರೆ, ಈ ಘಟನೆ ನಡೆದು 14 ವರ್ಷಗಳೇ ಕಳೆದರೂ, ಈ ಪ್ರಕರಣವನ್ನು ಮುಂದಿಟ್ಟುಕೊಂಡು ಒಂದು ನಿರ್ದಿಷ್ಟ ವರ್ಗದ ಜನರು ಬೃಹತ್ ಮಠಮಾನ್ಯಗಳನ್ನು, ದೇವಸ್ಥಾನಗಳನ್ನು, ಹಿಂದೂ ಗುರುಗಳನ್ನು ಹಾಗೂ ಮಠಾಧೀಶರನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ‘ಮಹಾ ಅಭಿಯಾನ’ ನಡೆಸುತ್ತಿದ್ದಾರೆ ಎಂದು ಅಮೃತೇಶ್ ಆಕ್ರೋಶ ವ್ಯಕ್ತಪಡಿಸಿದರು.

2012ರ ಪತ್ರಿಕಾಗೋಷ್ಠಿಯ ವಿಡಿಯೋ ಸಾಕ್ಷ್ಯ: ಕುಟುಂಬಸ್ಥರು ಅಂದು ಹೇಳಿದ್ದೇನು?:- ಮಾಧ್ಯಮಗಳ ಮುಂದೆ ಸಾಮಾಜಿಕ ಮಾಧ್ಯಮಗಳಲ್ಲಿರುವ ವೀಡಿಯೋ ಪ್ರದರ್ಶಿಸಿದ ಅಮೃತೇಶ್, ಘಟನೆ ನಡೆದ 20-25 ದಿನಗಳ ನಂತರ ಬೆಳ್ತಂಗಡಿಯಲ್ಲಿ ಸೌಜನ್ಯಳ ತಾಯಿ ಕುಸುಮಾವತಿ, ತಂದೆ ಚಂದಪ್ಪ ಗೌಡ ಹಾಗೂ ಸೋದರ ಮಾವ ವಿಠಲ್ ಗೌಡ ಅವರು ನಡೆಸಿದ್ದ ಪತ್ರಿಕಾಗೋಷ್ಠಿಯ ವಿಡಿಯೋವನ್ನು ಪ್ರದರ್ಶನ ಮಾಡಿದರು. 17-11-2012 ರಂದು ನಡೆದಿದ್ದ ಆ ಪತ್ರಿಕಾಗೋಷ್ಠಿಯಲ್ಲಿ ಸೌಜನ್ಯ ಕುಟುಂಬಸ್ಥರು ಸ್ವತಃ ಧರ್ಮಸ್ಥಳದ ಪರವಾಗಿ ಮಾತನಾಡಿದ್ದರು. “ಧರ್ಮಸ್ಥಳದ ಆಡಳಿತ ಮಂಡಳಿಯವರಾಗಲಿ, ಆ ಕ್ಷೇತ್ರದವರಾಗಲಿ ನಮ್ಮ ಮೇಲೆ ಯಾವುದೇ ಪ್ರಭಾವ ಬೀರಲು ಬಂದಿಲ್ಲ” ಎಂದು ಕುಟುಂಬಸ್ಥರು ಅಂದು ಸ್ಪಷ್ಟಪಡಿಸಿದ್ದರು.

“ಅವರು ನಮ್ಮ ಯಾವುದೇ ಆಸ್ತಿಯನ್ನು ಕಬಳಿಸಲು ಬಂದಿಲ್ಲ ಮತ್ತು ನಮಗೆ ಅವರಿಂದ ಯಾವುದೇ ಬೆದರಿಕೆ ಇಲ್ಲ” ಎಂಬ ಸತ್ಯವನ್ನು ಅಂದು ಸೌಜನ್ಯಳ ತಾಯಿ ಹಾಗೂ ಮಾವ ವಿಠಲ್ ಗೌಡ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದರು. ಆದರೆ, ಇಂದು ಅದೇ ಕುಟುಂಬಸ್ಥರನ್ನು ಮುಂದಿಟ್ಟುಕೊಂಡು ಕೆಲವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಮೃತೇಶ್ ದೂರಿದರು.

ಸಂತೋಷ್ ರಾವ್ ಬಂಧನ ಮತ್ತು ಮುಚ್ಚಿಡಲಾದ ವೈದ್ಯಕೀಯ ವರದಿಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದ ಸಂತೋಷ್ ರಾವ್‌ನನ್ನು ಪೊಲೀಸರು ಬಲವಂತವಾಗಿ ಹಿಡಿದು ತಂದಿರಲಿಲ್ಲ. ಬದಲಾಗಿ, ಸೌಜನ್ಯಳ ಮಾವ ವಿಠಲ್ ಗೌಡ ಹಾಗೂ ಅವರ ಗುಂಪೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಅಮೃತೇಶ್ ಹೊರಹಾಕಿದರು. ಸಿಬಿಐ (CBI) ವಿಚಾರಣೆ ಎದುರಿಸಿದ ಬಳಿಕ ಸಂತೋಷ್ ರಾವ್ ದೋಷಮುಕ್ತನಾಗಿ ಹೊರಬಂದಿದ್ದಾನೆ. ಆದರೆ, ಇಲ್ಲಿ ಅತ್ಯಂತ ಗಂಭೀರವಾದ ವೈದ್ಯಕೀಯ ಸಾಕ್ಷ್ಯವೊಂದನ್ನು ತನಿಖಾ ಹಂತದಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಅವರು ಆರೋಪಿಸಿದರು.

ಸಂತೋಷ್ ರಾವ್‌ನ ದೇಹದ ಮೇಲೆ ಒಟ್ಟು 17 ಗಾಯಗಳಿದ್ದವು. * ಇದರಲ್ಲಿ ಗಾಯ 11 ಆತನ ಜನನಾಂಗದ ಮೇಲೆಯೂ ಗಾಯವಾಗಿತ್ತು. ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದ ಡಾಕ್ಟರ್. ಮಹಾಬಲೇಶ್ ಶೆಟ್ಟಿ ಅವರು, “ಈತನಿಗೆ ಫಿಮೋಸಿಸ್‌ ಇದ್ದರೂ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಾಗಿದ್ದಾನೆ ಎಂದು ಸ್ಪಷ್ಟವಾದ ಅಭಿಪ್ರಾಯ ನೀಡಿದ್ದರು. ಇಷ್ಟೊಂದು ಸ್ಪಷ್ಟವಾದ ವೈದ್ಯಕೀಯ ವರದಿ ಇದ್ದರೂ, ಈ ಸತ್ಯವನ್ನು ಯಾರಿಗೂ ತಿಳಿಯದಂತೆ ಮುಚ್ಚಿಡಲಾಯಿತು ಎಂದು ಅಮೃತೇಶ್ ಆರೋಪಿಸಿದ್ದಾರೆ.

ಹೋರಾಟದ ಹೆಸರಿನಲ್ಲಿ ಬೃಹತ್ ಹಣದ ವಹಿವಾಟು?ಸೌಜನ್ಯ ಪ್ರಕರಣದ ಹೋರಾಟದ ನೇತೃತ್ವ ವಹಿಸಿರುವ ವ್ಯಕ್ತಿಗಳ ಮೇಲೆ ಅಮೃತೇಶ್ ತೀವ್ರ ವಾಗ್ದಾಳಿ ನಡೆಸಿದರು. ಈ ಹೋರಾಟಗಾರರು ನ್ಯಾಯಕ್ಕಾಗಿ ಹೋರಾಡುತ್ತಿಲ್ಲ, ಬದಲಾಗಿ ಹಣ ಮಾಡುವ ಉದ್ದೇಶದಿಂದ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು. * “ಈ ಪ್ರಕರಣದ ಹೋರಾಟಕ್ಕೆ ಸುಮಾರು ಒಂದು ಕೋಟಿ ರೂಪಾಯಿ ಖರ್ಚಾಗಬಹುದು, ಆದರೆ ಇವರು ಅದಕ್ಕೂ ಮೀರಿದ ಬೃಹತ್ ಮೊತ್ತವನ್ನು ಸಾರ್ವಜನಿಕರಿಂದ ಹಾಗೂ ವಿವಿಧ ಮೂಲಗಳಿಂದ ಸಂಗ್ರಹಿಸಿದ್ದಾರೆ” ಎಂದು ಅವರು ಆರೋಪಿಸಿದರು.

ಕನಕಪುರ ರಸ್ತೆಯಲ್ಲಿರುವ ಸ್ವಾಮೀಜಿಗಳ ಆಸ್ತಿ ಕಬಳಿಕೆಯಂತಹ ಪ್ರಕರಣಗಳ ಸುತ್ತ ನಡೆಯುವ ತಂತ್ರಗಳೇ ಇಲ್ಲೂ ನಡೆಯುತ್ತಿವೆ ಎಂದು ಅವರು ಶಂಕಿಸಿದ್ದಾರೆ. ಸಿಬಿಐ ವಕೀಲರ ಕಳ್ಳಾಟಈ ಪ್ರಕರಣವನ್ನು ಸಿಬಿಐಗೆ ವಹಿಸಿದಾಗ, ಅದೇ ಭಾಗದ ನ್ಯಾಯವಾದಿ ಶಿವಾನಂದ ಪೆರ್ಲ ಎಂಬುವವರನ್ನು ಸಿಬಿಐ ಪ್ರಾಸಿಕ್ಯೂಟರ್ ಆಗಿ ನೇಮಿಸಲಾಗಿತ್ತು. ಇವರು ಸೌಜನ್ಯ ಕುಟುಂಬದ ಜೊತೆ ಸೇರಿಕೊಂಡು, ಸರಿಸುಮಾರು ಒಂದು ವರ್ಷದ ಕಾಲ ಸುಮ್ಮನಿದ್ದು, ಆನಂತರ ಈ ಪ್ರಕರಣವನ್ನು ಮುಂದಿಟ್ಟುಕೊಂಡು ತಾವು ಕೂಡ ಹಣ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಪ್ಲಾನ್ ಮಾಡಿದ್ದರು ಎಂಬ ಗಂಭೀರ ಆರೋಪವನ್ನು ಅಮೃತೇಶ್ ಮಾಡಿದರು.

ಡಿ-ನೋವಾ (De Novo) ತನಿಖೆಯಿಂದ ಕೇವಲ ಹಣ ಪೋಲು! ಪ್ರಸ್ತುತ ಸುಪ್ರೀಂ ಕೋರ್ಟ್ ಸೂಚನೆಯಂತೆ ಪ್ರಕರಣದ ಮರು ತನಿಖೆಗೆ ಹೊಸ ಎಸ್‌ಐಟಿಯನ್ನು (SIT) ರಚಿಸಲಾಗಿದೆ. ಆದರೆ ಈ ಹೊಸ ತನಿಖೆಯಿಂದಲೂ ಯಾವುದೇ ಪ್ರಯೋಜನವಿಲ್ಲ ಎಂದು ಅಮೃತೇಶ್ ಸ್ಪಷ್ಟವಾಗಿ ಹೇಳಿದ್ದಾರೆ. * ಹಳೆಯ ಸಾಕ್ಷ್ಯಗಳು ನಾಶವಾಗಿವೆ ಮತ್ತು ವಿಜ್ಞಾನ-ತಂತ್ರಜ್ಞಾನದ ಆಧಾರದ ಮೇಲೆ ಈ ಹಿಂದೆ ನಡೆದ ತನಿಖೆಗಳೇ ವಿಫಲವಾಗಿವೆ. *

ರಾಜ್ಯ ಸರ್ಕಾರವು ಈಗಾಗಲೇ ಸಿಬಿಐ ತನಿಖೆಗಾಗಿ ಬರೋಬ್ಬರಿ 200 ಕೋಟಿಗೂ ಅಧಿಕ ಸಾರ್ವಜನಿಕರ ತೆರಿಗೆ ಹಣವನ್ನು ಖರ್ಚು ಮಾಡಿದೆ. ಇದು ಕೇವಲ ಸಾರ್ವಜನಿಕರ ಹಣದ ಮತ್ತೊಂದು ಪೋಲು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಇನ್ನು ಸಮಾಜದಲ್ಲಿ ಸತ್ಯವನ್ನು ಬಿಚ್ಚಿಡಬೇಕು. ಸೌಜನ್ಯ ಕುಟುಂಬದವರು 2012ರಲ್ಲಿ ನೀಡಿದ್ದ ಮೂಲ ಹೇಳಿಕೆಗಳನ್ನು ಜನತೆಗೆ ತೋರಿಸಬೇಕು. ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ, ಬಲವಂತವಾಗಿ ಅಮಾಯಕರ ಮೇಲೆ ಗೂಬೆ ಕೂರಿಸುವ ಹಾಗೂ ಹಣಕ್ಕಾಗಿ ಪುಣ್ಯಕ್ಷೇತ್ರಗಳನ್ನು ಬ್ಲಾಕ್ ಮೇಲ್ ಮಾಡುವ ಇಂತಹ ಷಡ್ಯಂತ್ರಗಳಿಗೆ ಕೊನೆಯಾಡಬೇಕು” ಎಂದು ಆಗ್ರಹಿಸಿದರು. ಪ್ರಕರಣದ ಸತ್ಯಾಸತ್ಯತೆಗಳನ್ನು ಜನತೆ ಅರಿತುಕೊಳ್ಳಬೇಕು ಹಾಗೂ ಸೂಕ್ತ ನ್ಯಾಯಾಂಗ ಪ್ರಕ್ರಿಯೆಯ ಮೇಲೆ ನಂಬಿಕೆ ಇಡಬೇಕು ಎಂದು ಅವರು ಈ ಸುದೀರ್ಘ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

Related posts

ಜೆಸಿಐ ಬೆಳ್ತಂಗಡಿ ವತಿಯಿಂದ ಸೇವಾಶ್ರಮಕ್ಕೆ ತಿಂಗಳ ದಿನಸಿ ಸಾಮಾಗ್ರಿ ಹಸ್ತಾಂತರ

Suddi Udaya

ಕಣಿಯೂರು ಅಶೋಕ್ ಕುಲಾಲ್ ರಿಂದ ಖಂಡಿಗ ವಾಸಪ್ಪ ಗೌಡರ ಚಿಕಿತ್ಸೆಗೆ ಸಹಾಯಧನ ಹಸ್ತಾಂತರ

Suddi Udaya

ಪದ್ಮಂಜ ಸಹಕಾರಿ ಸಂಘದ ರೈತ ಭವನ ಮತ್ತು ರೈತ ಗೋದಾಮು ಕಟ್ಟಡ ಉದ್ಘಾಟನೆ

Suddi Udaya

ಸೂಳಬೆಟ್ಟು ಸ.ಕಿ.ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳ ಹಾಗೂ ಶೈಕ್ಷಣಿಕ ಪರಿಕರಗಳ ವಿತರಣೆ

Suddi Udaya

ಬಳಂಜ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಚುನಾವಣೆ: ಅಧ್ಯಕ್ಷರಾಗಿ 2 ನೇ ಬಾರಿಗೆ ಪುಷ್ಪಾವತಿ ಪೂಜಾರಿ ಹೇವ, ಉಪಾಧ್ಯಕ್ಷರಾಗಿ ಪ್ರಮೀಳಾ ಜಯಾನಂದ ಆಯ್ಕೆ

Suddi Udaya

ಪಿಲ್ಯ: ಕೋಳಿ ಅಂಕಕ್ಕೆ ವೇಣೂರು ಪೊಲೀಸರ ದಾಳಿ : ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳ ವಶ

Suddi Udaya
error: Content is protected !!