24.2 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ನವಶಕ್ತಿ ಶ್ರೀಮತಿ ಕಾಶಿ ಬಾಬು ಶೆಟ್ಟಿ ಸಂಸ್ಮರಣೆ: ಪುತ್ಥಳಿ ಅನಾವರಣ, ಕಾಶಿ ಸದನ ವಸತಿ ನಿರ್ಮಾಣಕ್ಕೆ ಸಹಾಯ ಹಸ್ತ : ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

ಬೆಳ್ತಂಗಡಿ: ಗುರುವಾಯನಕೆರೆಯ ನವಶಕ್ತಿಯ ಶ್ರೀಮತಿ ಕಾಶಿ ಬಾಬು ಶೆಟ್ಟಿ ಅವರ ಪ್ರಥಮ ಪುಣ್ಯ ತಿಥಿಯ ಅಂಗವಾಗಿ ಅ.13ರಂದು ಸಂಜೆ ಗುರುವಾಯನಕೆರೆಯ ನವಶಕ್ತಿಯಲ್ಲಿ ಮಾತೃ ಸ್ಮೃತಿ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಶ್ರೀಮತಿ ಕಾಶಿ ಬಾಬು ಶೆಟ್ಟಿಯವರ ಪುತ್ಥಳಿ ಅನಾವರಣ, ಕಾಶಿ ಸದನ ವಸತಿ ನಿರ್ಮಾಣಕ್ಕೆ ಸಹಾಯ ಹಸ್ತ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ನಡೆಯಿತು.

ಸಮಾರಂಭದಲ್ಲಿ ಜ್ಞಾನಕಾಶಿ ಯೋಜನೆಯಲ್ಲಿ ಪಡಂಗಡಿಯಲ್ಲಿ ನಿಮಾ೯ಣವಾಗಲಿರುವ ಪಿಯು ಕಾಲೇಜು ಕಟ್ಟಡದ ನಕಾಶೆ ಅನಾವರಣ ಮಾಡಲಾಯಿತು. ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ವಹಿಸಿದ್ದರು. ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ ವಿದ್ಯಾರ್ಥಿ ವೇತನವನ್ನು ವಿತರಿಸಿದರು.ಕಾರ್ಕಳ ಜ್ಞಾನಸುಧಾ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Related posts

ಕೊರಂಜ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮೆಟ್ರಿಕ್ ಮೇಳ

Suddi Udaya

ಪೂಂಜಾ ಶ್ರೀ ಪಂಚದುರ್ಗಪರಮೇಶ್ವರಿ ದೇವಸ್ಥಾನಕ್ಕೆ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಭೇಟಿ

Suddi Udaya

ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ರವರಿಂದ ದೇವೆಂದ್ರ ಹೆಗ್ಡೆ ಕೊಕ್ರಾಡಿಯವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ವಕೀಲರ ಭವನಕ್ಕೆ ಹಾಗೂ ನ್ಯಾಯಾಲಯಕ್ಕೆ ಅಧೀಕ್ಷಕ ಗೋಕುಲದಾಸ್, ಲೋಕೋಪಯೋಗಿ ಇಲಾಖೆ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ರಾಘವೇಂದ್ರ ನಾಯ್ಕ್ ಭೇಟಿ

Suddi Udaya

ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಗಳ ರಾಜ್ಯಮಟ್ಟದ ಮಾಸ್ಟರ್ ಮತ್ತು ಕ್ಯಾಪ್ಟನ್ ತರಬೇತಿ ಕಾರ್ಯಾಗಾರ ಸಂಪನ್ನ

Suddi Udaya

ಗುರುವಾಯನಕೆರೆಯಲ್ಲಿ ಬೃಹತ್‌ ರಕ್ತದಾನ ಶಿಬಿರ

Suddi Udaya
error: Content is protected !!