September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಎ 28-ಮೇ 1:ಮರೋಡಿ ಪೊಸರಡ್ಕ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ ಸಂಭ್ರಮ

ಬೆಳ್ತಂಗಡಿ: ಒಂದು ಕಾಲದಲ್ಲಿ ಅತ್ಯಂತ ವೈಭವದಿಂದ ಪೊಸರಡ್ಕ ಕ್ಷೇತ್ರದಲ್ಲಿ ನಡೆಯುತ್ತಿದ್ದ ನೇಮ,ಜಾತ್ರೋತ್ಸವಗಳು ಕಾಲ ಚಕ್ರಕ್ಕೆ ಸಿಲುಕಿ ನಿಂತು ಹೋಗಿತ್ತು.ದೈವಗಳ ಸೇವೆ ನಿಂತಾಗ ಊರಿಗೆ ಕಷ್ಟ ನಷ್ಟಗಳು ಸಂಭವಿಸಿದ್ದು 2017ರಲ್ಲಿ ಅಷ್ಟ ಮಂಗಲ ಪ್ರಶ್ನಾ ಚಿಂತನೆ ನಡೆಸಿ ಪೊಸರಡ್ಕ ಕ್ಷೇತ್ರದ ಗತವೈಭವದ ನೆನಪು ಮತ್ತೆ ಮರುಕಳಿಸಬೇಕೆಂಬ ಸದುದ್ದೇಶದಿಂದ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿದಲಾಗಿದೆ.ಶ್ರೀ ದೈವ,ಶ್ರೀ ಕೊಡಮಣಿತ್ತಾಯ, ಶ್ರೀ ವ್ಯಾಘ್ರ ಚಾಮುಂಡಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿ ಪೊಸರಡ್ಕದಲ್ಲಿ ಬ್ರಹ್ಮಕುಂಭಾಭಿಷೇಕ ಎ 28ರಿಂದ ಮೇ 1ರವರೆಗೆ ಅತ್ಯಂತ ವೈಭವದಿಂದ ನಡೆಯಲಿದೆ ಎಂದು ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಹೇಳಿದರು.

ಅವರು ಎ 21ರಂದು ಪೊಸರಡ್ಕ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹಸಿರು ಹೊರಕಾಣಿಕೆ ಸಂದರ್ಭದಲ್ಲಿ ಒಂದು ಸಾವಿರ ಭಜಕರು ಪಾಲ್ಗೊಳ್ಳುತ್ತಾರೆ.40ಕ್ಕೂ ಹೆಚ್ಚು ಹೊರೆಕಾಣಿಕೆ ವಾಹನ, ಕಲಾ ತಂಡಗಳು ಬರುತ್ತವೆ. ಭಜನಾ ಕಮ್ಮಟ ನಡೆಯಲಿದೆ.ರಾತ್ರಿ ಆಂಟಿ-ಅಂಕಲ್ ಸಾಮಾಜಿಕ ಸಂದೇಶವುಳ್ಳ ನಾಟಕ ,ಜೋಡು ಜೀಟಿಗೆ ನಾಟಕ ಪ್ರದರ್ಶನಗೊಳ್ಳಲಿದೆ. ಧಾರ್ಮಿಕ ಕಾರ್ಯಕ್ರಮಗಳು,ನೇಮೋತ್ಸವ ನಡೆಯಲಿದೆ.ಒಟ್ಟು ಕಾರ್ಯಕ್ರಮದಲ್ಲಿ
25 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರಿಕ್ಷೆಯಿದೆ ಎಂದರು.

ಪೊಸರಡ್ಕ ಕ್ಷೇತ್ರದ ಆಡಳಿತ ಸಮಿತಿ ಗೌರವ ಅಧ್ಯಕ್ಷ ಹೇಮರಾಜ್ ಕೆ,ಪೊಸರಡ್ಕ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಜಯವರ್ಮ ಬುಣ್ಣು ,
ಬ್ರಹ್ಮಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್ ಪೂಜಾರಿ,ಆಡಳಿತ ಸಮಿತಿ ಗೌರವಾಧ್ಯಕ್ಷ ರಾಜೇಂದ್ರ ಬಳ್ಳಾಳ್,
ಬ್ರಹ್ಮಕುಂಭಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಶೀತಲ್ ಜೈನ್ ಪೊಸರಡ್ಕ ಕ್ಷೇತ್ರದ ಬಗ್ಗೆ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ,ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಆದಿತ್ಯ ಪಿ,ಆಡಳಿತ ಸಮಿತಿ ಸದಸ್ಯರಾದ ಸುದರ್ಶನ್ ಜೈನ್ ಪಾಂಡಿಬೆಟ್ಟುಗುತ್ತು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ತಾಲೂಕು ಮಟ್ಟದ ಕೆಸರ್ ಕಂಡೊಡು ಗೌಡೆರೆಗೌಜಿ-ಗಮ್ಮತ್ ಉದ್ಘಾಟನೆ: ಮಾಜಿ ಸೈನಿಕರಿಗೆ ಸಂಘದ ವತಿಯಿಂದ ಗೌರವಾಪ೯ಣೆ – ಆದ್ದೂರಿಯಾಗಿ ನಡೆದ ತುಳು ಜಾನಪದ ಶೈಲಿಯ ಪಥ ಸಂಚಲನ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷರಾಗಿ ಲ| ದೇವದಾಸ್ ಶೆಟ್ಟಿ ಆಯ್ಕೆ

Suddi Udaya

ನೆರಿಯ: ಕಡವೆ ಬೇಟೆ, ಬಂದೂಕು ಸಹಿತ ಆರೋಪಿ ವಶಕ್ಕೆ

Suddi Udaya

ಗೇರುಕಟ್ಟೆ: ಗಣೇಶ್ ಕ್ಲಿನಿಕಲ್ ಲ್ಯಾಬೋರೇಟರಿ ಮತ್ತು ಪಾಲಿ ಕ್ಲಿನಿಕ್ ಉದ್ಘಾಟನೆ

Suddi Udaya

ಯೂನಿಯನ್ ಬ್ಯಾಂಕ್ ಮದ್ದಡ್ಕ ಶಾಖೆಯಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಸುಧೀರ್ ನಾಯ್ಕ್ ರವರಿಗೆ ಗೌರವಾರ್ಪಣೆ

Suddi Udaya

ಫೆ.12: ಉಜಿರೆ ಶ್ರೀ ದುರ್ಗಾ ನಿಲಯದಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆ, ಹಾಗೂ ಶ್ರೀ ಶನೀಶ್ವರ ಪೂಜೆ

Suddi Udaya
error: Content is protected !!