ಬೆಳ್ತಂಗಡಿ: ಟೀಮ್ ಚಿರು ಎಡಿಟ್ಸ್ ತಂಡದ ನಾಯಕ ಚಿರಂಜೀವಿ ಶೆಟ್ಟಿಯವರ 25ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬೆಳ್ತಂಗಡಿಯ ಕುತ್ಯಾರು ದೇವಸ್ಥಾನದಲ್ಲಿ ಸಮಾಜಮುಖಿ ಕಾರ್ಯ ನಡೆಸಿದರು.

ಬೆಳ್ತಂಗಡಿ ತಾಲೂಕಿನಲ್ಲಿ ಜೀವ ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ 5 ಅಂಬುಲೆನ್ಸ್ ಚಾಲಕರಾದ ಅಭಿಲಾಷ್ ಎಮ್ ಖುಷಿ ಅಂಬುಲೆನ್ಸ್ ಬೆಳ್ತಂಗಡಿ, ದೀಕ್ಷಿತ್ ವೀರಕೇಸರಿ ಪ್ರೆಂಡ್ಸ್ ಬಳ್ಳಮಂಜ, ಧಣೇಶ್ ಧನ್ವಿ ಅಂಬುಲೆನ್ಸ್ ಉಜಿರೆ, ಪವನ್ ಬಂಗೇರ ಸಾಯಿ ರಾಮ್ ಅಂಬುಲೆನ್ಸ್ ಬೆಳ್ತಂಗಡಿ, ಅಶ್ವತ್ ಗಾನ್ವಿ ಅಂಬುಲೆನ್ಸ್ ಅಳದಂಗಡಿ ಇವರ ಸೇವೆಯನ್ನು ಗುರುತಿಸಿ ಗೌರವಪೂರ್ವಕವಾಗಿ ಸನ್ಮಾನಿಸಿ ಅವರ ಅಂಬುಲೆನ್ಸ್ ವಾಹನಕ್ಕೆ ವಿಶೇಷ ಪೂಜೆಯನ್ನು ನೆರೆವೇರಿಸುವ ಮೂಲಕ ಚಾಲಕರ ಸೇವೆಗೆ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಚಿರಂಜೀವಿ ಶೆಟ್ಟಿ ಅವರ ಕುಟುಂಬಸ್ಥರು, ಮತ್ತು ಟೀಮ್ ಚಿರು ಎಡಿಟ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.












