ಬಳಂಜ: ದೇವಾಡಿಗರ ಸೇವಾ ಸಂಘ ಬಳಂಜ–ತೆಂಕಕಾರಂದೂರು ಇದರ ಗೌರವಾಧ್ಯಕ್ಷರಾಗಿ ಗುಜರಾತ್ ಉದ್ಯಮಿ ಶೇಖರ್ ದೇವಾಡಿಗ ಪಾಲಬೆ ಹಾಗೂ ನೂತನ ಅಧ್ಯಕ್ಷರಾಗಿ ಎಕ್ಸೆಲ್ ಕಾಲೇಜಿನ ಉಪನ್ಯಾಸಕ ಹರೀಶ್ ದೇವಾಡಿಗ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಸಾಮಾಜಿಕ ಮುಂದಾಳು ಪ್ರದೀಪ್ ದೇವಾಡಿಗ, ಉಪಾಧ್ಯಕ್ಷರಾಗಿ ಮೋಹನ ದೇವಾಡಿಗ, ಸಂತೋಷ್ ದೇವಾಡಿಗ, ದಿನೇಶ್ ದೇವಾಡಿಗ ಹಾಗೂ ಚಂದ್ರಶೇಖರ ದೇವಾಡಿಗ; ಜೊತೆ ಕಾರ್ಯದರ್ಶಿಯಾಗಿ ಯೋಗೀಶ್ ದೇವಾಡಿಗ; ಕೋಶಾಧಿಕಾರಿಯಾಗಿ ಶಾರಬೈಲಿನ ಆನಂದ ದೇವಾಡಿಗ; ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಾರಬೈಲಿನ ಸತೀಶ್ ದೇವಾಡಿಗ ಹಾಗೂ ಪ್ರವೀಣ್ ದೇವಾಡಿಗ; ಕ್ರೀಡಾ ಕಾರ್ಯದರ್ಶಿಗಳಾಗಿ ಗುರುಪ್ರಸಾದ್ ದೇವಾಡಿಗ, ಯಶ್. ಬಿ. ದೇವ್, ಪ್ರಸಾದ್ ದೇವಾಡಿಗ ಹಾಗೂ ನಾಗೇಶ್ ದೇವಾಡಿಗ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ದೇವಾಡಿಗರ ಸೇವಾ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.












