November 5, 2026
ಪ್ರಮುಖ ಸುದ್ದಿಬೆಳ್ತಂಗಡಿವರದಿ

ಬಂಗೇರ ಬ್ರಿಗೇಡ್ ಬೆಳ್ತಂಗಡಿ ವತಿಯಿಂದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ

ಬೆಳ್ತಂಗಡಿ: ಮಾಜಿ ಶಾಸಕ ದಿವಂಗತ ಕೆ. ವಸಂತ ಬಂಗೇರರ ಜೀವನ ಚರಿತ್ರೆ, ವ್ಯಕ್ತಿತ್ವ, ಸಮಾಜಮುಖಿ ಚಿಂತನೆಗಳು ಹಾಗೂ ಜನಪರ ಕೊಡುಗೆಗಳನ್ನು ಯುವಜನತೆ ಮತ್ತು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಬಂಗೇರ ಬ್ರಿಗೇಡ್ ಬೆಳ್ತಂಗಡಿ ವತಿಯಿಂದ ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

‘ಜನನಾಯಕ, ಜನಸೇವಕ ಕೆ. ವಸಂತ ಬಂಗೇರರ ಜೀವನ ಚರಿತ್ರೆ, ವ್ಯಕ್ತಿತ್ವ ಮತ್ತು ಕೊಡುಗೆ – ತಮ್ಮ ಗ್ರಾಮಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ’ ಎಂಬುದು ಪ್ರಬಂಧದ ವಿಷಯವಾಗಿದ್ದು ಈ ಹಿನ್ನೆಲೆಯಲ್ಲಿ ಸ್ಪರ್ಧಿಗಳು ತಮ್ಮ ತಮ್ಮ ಊರು, ಗ್ರಾಮ ಹಾಗೂ ಪರಿಸರಕ್ಕೆ ಕೆ. ವಸಂತ ಬಂಗೇರರು ನೀಡಿದ ಕೊಡುಗೆಗಳನ್ನು ಪ್ರಬಂಧದಲ್ಲಿ ಉಲ್ಲೇಖಿಸಬಹುದು. ಸ್ಥಳೀಯ ಅಭಿವೃದ್ಧಿ ಕಾರ್ಯಗಳು, ಜನರೊಂದಿಗಿನ ಒಡನಾಟ, ವೈಯಕ್ತಿಕ ಅನುಭವಗಳು, ಜನರ ಬದುಕಿನ ಮೇಲೆ ಬೀರಿದ ಪ್ರಭಾವ ಮತ್ತು ಅವರ ನಾಯಕತ್ವದ ಗುಣಗಳನ್ನು ಆಧಾರ ಸಹಿತವಾಗಿ ದಾಖಲಿಸಲು ಆದ್ಯತೆ ನೀಡಬೇಕು.

ಪ್ರಬಂಧವು ಕಡ್ಡಾಯವಾಗಿ 2,000 ಕ್ಕಿಂತ ಹೆಚ್ಚು ಪದಗಳನ್ನು ಹೊಂದಿರಬೇಕು, ಬೆಳ್ತಂಗಡಿ ತಾಲೂಕಿನವರಿಗೆ ಮಾತ್ರ ಸೀಮಿತವಾಗಿದ್ದು 18 ವರ್ಷ ಮೇಲ್ಪಟ್ಟ ಎಲ್ಲಾ ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಬಹುದು,. ಎ4 ಹಾಳೆಯ ಒಂದು ಬದಿಯಲ್ಲಿ ಸ್ಪಷ್ಟವಾಗಿ ಬರೆಯಬೇಕು, ಪ್ರಬಂಧದ ಜೊತೆ ಪ್ರಬಂಧ ಬರೆದವರ ಆಧಾರ್ ಕಾರ್ಡ್ ಪ್ರತಿ ಮತ್ತು ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಕಡ್ಡಾಯವಾಗಿ ಲಗತ್ತಿಸಬೇಕು, ತಮ್ಮ ಊರು ಅಥವಾ ಗ್ರಾಮಕ್ಕೆ ಕೆ. ವಸಂತ ಬಂಗೇರರು ನೀಡಿದ ಕೊಡುಗೆಗಳನ್ನು ಉಲ್ಲೇಖಿಸತಕ್ಕದ್ದು, ಪ್ರಬಂಧವು ಕೈಬರಹದಲ್ಲಿರಬೇಕು, ಸಂಬಂಧಿಸಿದ ವಿಚಾರಗಳಿಗೆ ಸೂಕ್ತ ಫೋಟೋಗಳಿದ್ದಲ್ಲಿ ಲಗತ್ತಿಸಬಹುದು, ಪ್ರಬಂಧದ ಭಾಷಾ ಸೌಂದರ್ಯಕ್ಕಿಂತಲೂ ವಿಷಯದ ಆಳ, ವಿಚಾರಗಳ ಸ್ಪಷ್ಟತೆ, ವಾಸ್ತವಾಂಶಗಳು, ಸಂಶೋಧನಾತ್ಮಕ ದೃಷ್ಟಿಕೋನ ಹಾಗೂ ಸ್ಥಳೀಯ ಕೊಡುಗೆಗಳ ದಾಖಲಾತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂಬ ನಿಯಮಗಳನ್ನು ಹೊಂದಿದೆ.

ಪ್ರಬಂಧವನ್ನು ಡಿ.5 ರ ಮುಂಚಿತವಾಗಿ ಬಿನುತ ಬಂಗೇರ, ಮಾಜಿ ಶಾಸಕ ಕೆ. ವಸಂತ ಬಂಗೇರರ ಕಚೇರಿ, ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣ, ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ – 574214 ಈ ವಿಳಾಸಕ್ಕೆ ಮುಖತಃ ಅಥವಾ ಅಂಚೆ ಮೂಲಕ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ 9449165890 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಆಯ್ಕೆಯಾಗುವ ಪ್ರಬಂಧಗಳಿಗೆ ಪ್ರಥಮ ರೂ.15,000, ದ್ವಿತೀಯ ರೂ.10,000, ತೃತೀಯ ರೂ.7,500 ನಗದು ಪುರಸ್ಕಾರದೊಂದಿಗೆ ಕೆ ವಸಂತ ಬಂಗೇರರ ಜನ್ಮ ದಿನವಾದ ಜನವರಿ 15, 2027 ರಂದು ಮದ್ದಡ್ಕದ ಬಂಡೀಮಠ ಮೈದಾನದಲ್ಲಿ ನಡೆಯುವ 3 ನೇ ವರ್ಷದ ಕಬಡ್ಡಿ ಪಂದ್ಯಾಟದಲ್ಲಿ ಬಹುಮಾನ ವಿತರಿಸಿ ಗೌರವಿಸಲಾಗುವುದು ಮತ್ತು ಆ ಪ್ರಬಂಧಗಳನ್ನು ಕೆ. ವಸಂತ ಬಂಗೇರರ ಜೀವನ ಮತ್ತು ಸಾಧನೆಗಳನ್ನು ಆಧರಿಸಿ ಮುಂದೆ ಪ್ರಕಟಿಸಲಿರುವ ಪುಸ್ತಕದಲ್ಲಿ ಪ್ರಕಟಿಸಲಾಗುವುದು ಎಂದು ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ಬಿನುತ ಬಂಗೇರ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಭಾರೀ ಮಳೆ ಹಿನ್ನೆಲೆ: ನಾಳೆ(ಆ. 3)ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ತುರ್ತು ಸಭೆ

Suddi Udaya

ನಾಳೆ (ಮಾ.1): ಕಕ್ಕಿಂಜೆ ವಿದ್ಯುತ್‌ ನಿಲುಗಡೆ

Suddi Udaya

ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವ‌ರ್ ವಿರುದ್ಧ ದಾಖಲಾಗಿದ್ದ FIR ರದ್ದುಗೊಳಿಸಿ ಹೈ ಕೋರ್ಟ್ ಆದೇಶ

Suddi Udaya

ವೇಣೂರು: ಮೂಡಕೋಡಿಯಲ್ಲಿ ಬಿಜೆಪಿ ಬೂತ್ ಮಟ್ಟದ ಸಭೆ

Suddi Udaya

ಬಾರ್ಯ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸತೀಶ್ ರವರಿಗೆ ಮಾತೃವಿಯೋಗ

Suddi Udaya
error: Content is protected !!