September 24, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವ‌ರ್ ವಿರುದ್ಧ ದಾಖಲಾಗಿದ್ದ FIR ರದ್ದುಗೊಳಿಸಿ ಹೈ ಕೋರ್ಟ್ ಆದೇಶ

ಬೆಳ್ತಂಗಡಿ: ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ FIR ದೂರನ್ನು ಮಾನ್ಯ ಹೈ ಕೋರ್ಟ್ ರದ್ದುಗೊಳಿಸಿ ಪ್ರಕರಣ ಮುಕ್ತಾಯಗೊಳಿಸಿ ಜೂ.23 ರಂದು ಆದೇಶ ಹೊರಡಿಸಿದೆ.

ವ್ಯಕ್ತಿ ವಿರುದ್ಧ Mud ಸ್ಲಾಗಿಂಗ್, ವ್ಯಂಗ್ಯ ಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವ ರೀತಿಯಲ್ಲಿ ಆರೋಗ್ಯಕರ ಟೀಕೆ ಮಾಡುವುದು ಒಳ್ಳೆಯದು. ವ್ಯಕ್ತಿಗಳ ವಿರುದ್ಧ ಆರೋಗ್ಯ ಟೀಕೆಗಳಿಗೆ ಅಭ್ಯಂತರ ಇಲ್ಲ ಎಂದು ಬುದ್ಧಿವಾದ ಹೇಳಿದೆ. ಮಾನ್ಯ ನ್ಯಾಯಾಲಯದ ಸೂಚನೆಗೆ ಗೌರವ ನೀಡಿ ಅರ್ಜಿದಾರ ಮತ್ತು ಹೋರಾಟಗಾರ ಗಿರೀಶ್ ಮಟ್ಟಣ್ಣವ‌ರ್ ಒಪ್ಪಿಕೊಂಡಿದ್ದಾರೆ. ತಮ್ಮ ಸ್ವಯಂ ಪ್ರೇರಿತ ಪ್ರಮಾಣ ಪತ್ರದಲ್ಲಿ ತಾವು ಸ್ವತಃ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತರಾಗಿದ್ದು ಕ್ಷೇತ್ರದ ಕುರಿತು ಅಪಾರ ನಂಬಿಕೆ ಶ್ರದ್ದೆ ಹೊಂದಿದ್ದು ಈ ಹಿಂದೆ ಯಾವತ್ತೂ ಕ್ಷೇತ್ರದ ಕುರಿತು ಅಪಚಾರ ಮಾಡಿಲ್ಲ. ತಮ್ಮ ಧ್ವನಿ ಸೌಜನ್ಯ ಮತ್ತು ಇತರ ಭೀಕರ ಪ್ರಕರಣಗಳ ಕುರಿತು ನ್ಯಾಯದ ಅನ್ವೇಷಣೆ ಆಗಿರುತ್ತದೆ ಹೊರತು ದೇವಸ್ಥಾನದ ಅಥವಾ ದೇವರ ವಿರುದ್ಧ ಅಲ್ಲ. ಇನ್ನು ಮುಂದೆಯೂ ಅತ್ಯಾಚಾರ ಕೊಲೆ ಕಾಣೆಯಾದ ಪ್ರಕರಣ ಹಾಗೂ ಶೋಷಣೆ ವಿರುದ್ಧ ಕಾನೂನು ರೀತಿಯಲ್ಲಿ ಅಪವಾದ ವಿವಾದಗಳಿಗೆ ಅವಕಾಶ ಕೊಡದೆ ಸಂತ್ರಸ್ತರು ಶೋಷಿತರ ಪರ ಧ್ವನಿ ಎತ್ತುವುದಾಗಿ ತಿಳಿಸಿದ್ದಾರೆ.

ಈ ಪ್ರಮಾಣ ಪತ್ರದಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ತಮ್ಮ ಸಂವಿಧಾನಿಕ ವಾಕ್ ಸ್ವಾತಂತ್ರಕ್ಕೆ ಧಕ್ಕೆ ಬರಬಾರದು ಎಂದು ವಿನಮ್ರ ಪೂರಕ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಮಾನ್ಯ ಉಚ್ಚ ನ್ಯಾಯಾಲಯ ಅರ್ಜಿದಾರರ ( ಗಿರೀಶ್ ಮಟ್ಟಣ್ಣನವರ್) ವಾಕ್ ಸ್ವತಂತ್ರ Freedom of Speech ತಡೆಯುವ ಹಾಗಿಲ್ಲ ಎಂದು ಅಭಯ ನೀಡಿ ಆರೋಗ್ಯಕರ ಟೀಕೆ ಪ್ರಶ್ನೆಗಳಿಗೆ ಅವಕಾಶ ಇದೆ ಎಂದು ಮಾನ್ಯ ಹೈಕೋರ್ಟ್‌ ಸೂಚನೆ ನೀಡಿದೆ.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಸಾಮಾಜಿಕ ಕಾಳಜಿ ಹೊಂದಿದ ಯುವ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯವಾದಿ ಶ್ರೀ ರಂಗನಾಥ ರೆಡ್ಡಿ ಅವರು ನಮ್ಮ ಅರ್ಜಿದಾರರು ಸೌಜನ್ಯ ನ್ಯಾಯಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರಿಂದ ಈ ರೀತಿ ಆಪಾದನೆಗಳು ಬರುತ್ತಿವೆ. ಅವರು ಯಾವತ್ತೂ ದೇವಸ್ಥಾನ ಅಥವಾ ದೇವರ ವಿರುದ್ಧ ಅಪಚಾರ ಮಾಡಿಲ್ಲ. ಅವರು ಸ್ವತಃ ದೇವಸ್ಥಾನದ ಭಕ್ತರಾಗಿದ್ದು ದೇವಸ್ಥಾನದ ಕುರಿತು ಅಪಾರ ನಂಬಿಕೆ ಭಕ್ತಿ ಶ್ರದ್ಧೆ ಹೊಂದಿರುತ್ತಾರೆ. ಅವರು ಮಾನ್ಯ ನ್ಯಾಯಾಲಯದ ಆದೇಶಗಳನ್ನು ಗೌರವಯುತವಾಗಿ ಪಾಲಿಸುತ್ತಾರೆ ಎಂದು ವಾದ ಮಂಡಿಸಿದರು. ನ್ಯಾಯವಾದಿ ಶ್ರೀ ರಾಜವರ್ಧನ್ ರೆಡ್ಡಿ ಹಾಗೂ ಶ್ರೀ ಗೌರವ್ ಜೊತೆಗಿದ್ದರು.

Related posts

ಸಿಯೋನ್ ಆಶ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಕೆ.ವಿ. ಶ್ರೀನಿವಾಸ್ ನಿಯೋಜನೆ

Suddi Udaya

ಕುಂಭಶ್ರೀ ಆಂ.ಮಾ. ಶಾಲೆಯ ಸಂಸ್ಥಾಪಕ ಗಿರೀಶ್ ಕೆ ಎಚ್ ರವರಿಂದ ಉಚಿತ ಪುಸ್ತಕ ವಿತರಣೆ

Suddi Udaya

ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘದ ದಕ್ಷಿಣ ಮಧ್ಯವಲಯ ಉಪಾಧ್ಯಕ್ಷರಾಗಿ ಧರ್ಮಸ್ಥಳದ ಎ. ಎಸ್. ಲೋಕೇಶ್ ಶೆಟ್ಟಿ ಆಯ್ಕೆ

Suddi Udaya

ನಡ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ರಾಜೀವಿರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ನಾಳೆ(ಮಾ.22): ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಹಕಾರಿ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ದುಡಿದ ಕಾರ್ಯಕರ್ತರಿಗೆ, ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!