November 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬಸ್ ಪ್ರಯಾಣ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ SDPI ಪ್ರತಿಭಟನೆ

ಬೆಳ್ತಂಗಡಿ: KSRTC ಬಸ್ ಪ್ರಯಾಣ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ಗುರುವಾಯನಕೆರೆ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.

ಕುವೆಟ್ಟು ಬ್ಲಾಕ್ ಅಧ್ಯಕ್ಷ ಹಂಝರಾಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ, ನಿರಂತರವಾಗಿ ಏರಿಕೆಯಾಗುತ್ತಿರುವ ಬಸ್ ಪ್ರಯಾಣ ದರ ಹಾಗೂ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯಿಂದ ಜನಸಾಮಾನ್ಯರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಜೀವನ ನಿರ್ವಹಣೆಗೆ ಪರದಾಡುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆ ಮತ್ತಷ್ಟು ಹೊರೆಯಾಗಿದ್ದು, ಸರ್ಕಾರ ಕೂಡಲೇ ಜನಪರ ಕ್ರಮಗಳನ್ನು ಕೈಗೊಂಡು ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ SDPI ಬೆಳ್ತಂಗಡಿ ಕ್ಷೇತ್ರ ಕೋಶಾಧಿಕಾರಿ ಸಾಲಿಹ್ ಮದ್ದಡ್ಕ ಹಾಗೂ ಕ್ಷೇತ್ರ ಸಮಿತಿ ಸದಸ್ಯ ಮುಸ್ತಫಾ ಜಿ.ಕೆ., ಜನಸಾಮಾನ್ಯರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿರುವ ಬೆಲೆ ಏರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜನರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬಸ್ ಪ್ರಯಾಣ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿಝಮ್ ಕಟ್ಟೆ, “ಪ್ರಸ್ತುತ ನಡೆಯುತ್ತಿರುವುದು ಕೇವಲ ಸಾಂಕೇತಿಕ ಪ್ರತಿಭಟನೆ ಮಾತ್ರ. ಸರ್ಕಾರಗಳು ಜನವಿರೋಧಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ವಿಫಲವಾದರೆ, ರಾಜ್ಯಾದ್ಯಂತ ಇನ್ನಷ್ಟು ತೀವ್ರ ಸ್ವರೂಪದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕುವೆಟ್ಟು ಬ್ಲಾಕ್ ಕಾರ್ಯದರ್ಶಿ ಅಸ್ಲಾಂ ಮದ್ದಡ್ಕ ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Related posts

ಪೆರಿಂಜೆ ಇಂದಿರಾಗಾಂಧಿ ವಸತಿ ಶಾಲಾ ವಿದ್ಯಾರ್ಥಿ ಕುಶಿತ್ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ

Suddi Udaya

ಬಿಜೆಪಿ ಧರ್ಮಸ್ಥಳದ ಶಕ್ತಿಕೇಂದ್ರದ ಪ್ರಮುಖ್ ಹರ್ಷಿತ್ ಜೈನ್ ಹಾಗೂ ವಿಕ್ರಮ್ ಆಯ್ಕೆ

Suddi Udaya

ಡಿ.17: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ, ಬಿರುಸಿನ ಪೈಪೋಟಿ: ಬಿಜೆಪಿ-ಕಾಂಗ್ರೆಸ್ ಬಿಗ್ ಫೈಟ್, 12 ಸ್ಥಾನಕ್ಕೆ 24 ನಾಮಪತ್ರ ಸಲ್ಲಿಕೆ

Suddi Udaya

ಶ್ರೀ ರಾಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಬೆಳಾಲು: ಕೊಲ್ಪಾಡಿ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಸದಸ್ಯೆ ಶ್ರೀಮತಿ ಟಾಕಮ್ಮ ನಿಧನ

Suddi Udaya

ಫೆ.1: ಭೂಸೇನೆಯಲ್ಲಿ 22 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಗೌಡರಿಗೆ ಹುಟ್ಟೂರಿನಲ್ಲಿ ಸ್ವಾಗತ ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!