November 7, 2026
ಕ್ರೀಡಾ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ತ್ರೋಬಾಲ್ ಪಂದ್ಯಾಟ: ಎಲ್. ಸಿ. ಆರ್. ಇಂಡಿಯನ್ ಸ್ಕೂಲ್ ವಿದ್ಯಾರ್ಥಿಗಳ ಅಮೋಘ ಸಾಧನೆ

ಕಕ್ಯಪದವು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಂಟ್ವಾಳ ಹಾಗೂ ದ. ಕ. ಜಿ. ಪಂ. ಉ.ಹಿ. ಪ್ರಾ. ಶಾಲೆ ಅನಂತಾಡಿ ಇದರ ಸಂಯುಕ್ತ ಆಶ್ರಯದಲ್ಲಿ ನ.6ರಂದು ನಡೆದ 14ರ ವಯೋಮಾನದ ಬಂಟ್ವಾಳ ತಾಲೂಕು ಮಟ್ಟದ ಬಾಲಕ-ಬಾಲಕಿಯರ ಥ್ರೋಬಾಲ್ ಪಂದ್ಯಾಟದಲ್ಲಿ ಕಕ್ಯಪದವಿನ ಎಲ್. ಸಿ. ಆರ್. ಇಂಡಿಯನ್ ಸ್ಕೂಲ್ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.

ಪ್ರಾಥಮಿಕ ವಿಭಾಗದ ಬಾಲಕರ ಮತ್ತು ಬಾಲಕಿಯರ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿ, ಎರಡೂ ವಿಭಾಗಗಳಲ್ಲೂ ದ್ವಿತೀಯ ಸ್ಥಾನವನ್ನು (Runners up) ಮುಡಿಗೇರಿಸಿಕೊಳ್ಳುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪ್ರತಿಭೆಗಳು:
ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶಾಲೆಯ 6 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಹೆಮ್ಮೆಯಿಂದ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗ: ರೋಶ್ನಿ (8ನೇ ತರಗತಿ), ವಿಭಾ (8ನೇ ತರಗತಿ) ಮತ್ತು ನಿರೀಕ್ಷಾ (8ನೇ ತರಗತಿ).
ಬಾಲಕರ ವಿಭಾಗ: ಸ್ವರಾಜ್ (7ನೇ ತರಗತಿ), ನೀತನ್ (7ನೇ ತರಗತಿ) ಮತ್ತು ರವೀಶ್ (8ನೇ ತರಗತಿ).

ವೈಯಕ್ತಿಕ ಪ್ರಶಸ್ತಿಗಳ ಗರಿ:
ತಂಡದ ಸಾಧನೆಯ ಜೊತೆಗೆ ವೈಯಕ್ತಿಕ ಪ್ರಶಸ್ತಿಗಳಲ್ಲೂ ಶಾಲೆಯ ವಿದ್ಯಾರ್ಥಿಗಳು ಮಿಂಚಿದ್ದಾರೆ. ಅತ್ಯುತ್ತಮ ರಿಸೀವರ್ (Best Receiver): ಸ್ವರಾಜ್ (7ನೇ ತರಗತಿ), ಅತ್ಯುತ್ತಮ ಸರ್ವರ್ (Best Server): ರೋಶ್ನಿ (8ನೇ ತರಗತಿ) ವಿದ್ಯಾರ್ಥಿಗಳ ಈ ಅದ್ಭುತ ಕ್ರೀಡಾ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಹರಿಣಾಕ್ಷಿ ಜಿ.ಕೆ ಮತ್ತು ಪ್ರಥ್ವಿರಾಜ್ ಅವರ ಅತ್ಯುತ್ತಮ ತರಬೇತಿಯೇ ಕಾರಣವಾಗಿದೆ.

ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರು, ಮುಖ್ಯ ಶಿಕ್ಷಕಿ ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿ, ಮುಂದಿನ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಶುಭ ಹಾರೈಸಿದ್ದಾರೆ.

Related posts

ನಾವೂರು: 28ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿಯಿಂದ ಕರ್ನಾಟಕ ರಾಜ್ಯೋತ್ಸವ

Suddi Udaya

ಬಳಂಜದಲ್ಲಿ ಎಸ್ ಎನ್ ಮೂಡಬಿದ್ರೆ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

Suddi Udaya

ಉಜಿರೆ ಸಿದ್ಧವನ ಗುರುಕುಲದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರಿಗೆ ಪ್ರಶಿಕ್ಷಣ ಕಾರ್ಯಕ್ರಮ

Suddi Udaya

ಇಂದು (ಡಿ.2) ಗುರುವಾಯನಕೆರೆ ಎಕ್ಸೆಲ್ ಸಂಸ್ಥೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ: ಚೌಕಿ ಪೂಜೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ “ಸುವರ್ಣ ಸಮ್ಮಿಲನ”: ಮೋಹನ್ ಕುಮಾರ್ ಹಾಗೂ ರವಿ ಕಟಪಾಡಿ ಯವರಿಗೆ ಸುವರ್ಣ ಸೇವಾ ರತ್ನ ಪ್ರಶಸ್ತಿ ಪ್ರದಾನ: ಸೇವಾ ಪಥ ಸ್ಮರಣ ಸಂಚಿಕೆ ಬಿಡುಗಡೆ

Suddi Udaya
error: Content is protected !!