November 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆಯ ನೂತನ ಉತ್ಪನ್ನಗಳ ಲೋಕಾರ್ಪಣೆ

ಉಜಿರೆ: ಮನೆ ನಿರ್ಮಾಣ ಕ್ಷೇತ್ರದಲ್ಲಿ ಗುಣಮಟ್ಟ ಹಾಗೂ ವಿನೂತನ ವಿನ್ಯಾಸಗಳ ಮೂಲಕ ರಾಜ್ಯದಾದ್ಯಂತ ತನ್ನದೇ ಆದ ಹೆಸರನ್ನು ಗಳಿಸಿರುವ ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸಂಸ್ಥೆಯ ನೂತನ ಉತ್ಪನ್ನಗಳ ಲೋಕಾರ್ಪಣಾ ಸಮಾರಂಭ ನ. 8ರಂದು ಉಜಿರೆಯಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು ಸಂಸ್ಥೆಯ ನೂತನ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಿ, ಲಕ್ಷ್ಮೀ ಇಂಡಸ್ಟ್ರೀಸ್ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆದು ಯಶಸ್ಸು ಸಾಧಿಸಲಿ. ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಉದ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬರೋಡದ ಉದ್ಯಮಿ ಹಾಗೂ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ. ಲಿ. ಸಂಸ್ಥೆಯ ಶಶಿಧರ ಶೆಟ್ಟಿ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಯು. ಶರತ್‌ಕೃಷ್ಣ ಪಡುವೆಟ್ನಾಯ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಎ.ಸಿ.ಸಿ.ಇ. ಬೆಳ್ತಂಗಡಿ ಸೆಂಟರ್ ಅಧ್ಯಕ್ಷ ಸುರೇಶ್ ಬಂಗೇರ ಉಪಸ್ಥಿತರಿದ್ದರು.

ಲಕ್ಷ್ಮೀ ನಿಲಯದ ಶ್ರೀಮತಿ ಲೀಲಾವತಿ ರಾಜು ಮೇಸ್ತ್ರಿ, ಸಂಸ್ಥೆಯ ಮಾಲಕ ಕೆ. ಮೋಹನ್ ಕುಮಾರ್, ಶ್ರೀಮತಿ ರೇಶ್ಮಾ ಮೋಹನ್ ಕುಮಾರ್, ಮೌಲ್ಯಲಕ್ಷ್ಮೀ, ಮಾನ್ವಿ ಲಕ್ಷ್ಮೀ ಹಾಗೂ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ಕೆ. ಮೋಹನ್ ಕುಮಾರ್ ಸ್ವಾಗತಿಸಿದರು. ಪ್ರಶಸ್ತಿ ವಿಜೇತ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

ನಿಮ್ಮ ಕನಸಿನ ಮನೆಗೆ ನಮ್ಮ ಸೌಂದರ್ಯದ ಸ್ಪರ್ಶ

ಮನೆ ನಿರ್ಮಾಣ ಕ್ಷೇತ್ರದಲ್ಲಿ ಗುಣಮಟ್ಟ, ಬಾಳಿಕೆ ಹಾಗೂ ಆಕರ್ಷಕ ವಿನ್ಯಾಸಕ್ಕೆ ಆದ್ಯತೆ ನೀಡುತ್ತಿರುವ ಲಕ್ಷ್ಮೀ ಇಂಡಸ್ಟ್ರೀಸ್‌ನ ನೂತನ ಉತ್ಪನ್ನಗಳು ಹಲವು ವಿಶೇಷತೆಗಳನ್ನು ಹೊಂದಿವೆ. ನೀರಿನಿಂದ ಹಾನಿಯಾಗದ ಜಲನಿರೋಧಕ ಬಾಗಿಲುಗಳು, ಗೆದ್ದಲುಗಳ ಬಾಧೆಯಿಂದ ಮುಕ್ತವಾದ ದೀರ್ಘಕಾಲ ಬಾಳಿಕೆ, ಬಲಿಷ್ಠ ನಿರ್ಮಾಣ, ಮನಮೋಹಕ ವಿನ್ಯಾಸ ಹಾಗೂ ಪರಿಸರ ಸ್ನೇಹಿ ಪರಿಕಲ್ಪನೆಗಳು ಈ ಉತ್ಪನ್ನಗಳ ವಿಶೇಷತೆಯಾಗಿವೆ. ಆಕರ್ಷಕ ವಿನ್ಯಾಸದೊಂದಿಗೆ ಅತ್ಯುತ್ತಮ ಗುಣಮಟ್ಟವನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ನಮ್ಮ ಕನಸಿನ ಹೊಸ ಹೆಜ್ಜೆ – ‘ಲಕ್ಷ್ಮೀ ದ್ವಾರ’: ಕೆ. ಮೋಹನ್ ಕುಮಾರ್

ನಮ್ಮ ಕನಸಿನ ಕೂಸಾದ ‘ಲಕ್ಷ್ಮೀ ಇಂಡಸ್ಟ್ರೀಸ್’ ಇಂದು ಹೊಸತನದ ಕನಸು, ಪರಿಸರ ಕಾಳಜಿ ಹಾಗೂ ಭವಿಷ್ಯದ ದೂರದೃಷ್ಟಿಯೊಂದಿಗೆ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡುತ್ತಿದೆ. ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಕೊಡುಗೆಯಾಗಿ ನೀಡಬೇಕು, ಮರ-ಗಿಡಗಳನ್ನು ಸಂರಕ್ಷಿಸಿ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸಬೇಕು ಎಂಬ ಉದಾತ್ತ ಆಶಯದೊಂದಿಗೆ ನೂತನ ಉತ್ಪನ್ನವೊಂದನ್ನು ಪರಿಚಯಿಸುತ್ತಿದ್ದೇವೆ.‘ಲಕ್ಷ್ಮೀ ದ್ವಾರ’ ಎಂಬ ಹೆಸರಿನೊಂದಿಗೆ ಪರಿಸರ ಸ್ನೇಹಿ ಪರಿಕಲ್ಪನೆಯನ್ನು ಮೈಗೂಡಿಸಿಕೊಂಡಿರುವ ಈ ವಿನೂತನ ಉತ್ಪನ್ನವು ನಮ್ಮ ಸಂಸ್ಥೆಯ ಹೊಸ ಕನಸು ಹಾಗೂ ಹೊಸ ಪ್ರಯತ್ನದ ಪ್ರತೀಕವಾಗಿದೆ. ಗ್ರಾಹಕರ ಅಭಿರುಚಿ, ಗುಣಮಟ್ಟ ಮತ್ತು ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಈ ಉತ್ಪನ್ನವನ್ನು ರೂಪಿಸಲಾಗಿದೆ. ನಮ್ಮ ಈ ಹೊಸ ಪ್ರಯತ್ನಕ್ಕೆ ಎಲ್ಲರೂ ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದ ನೀಡಬೇಕೆಂದು ವಿನಂತಿಸುತ್ತೇನೆ ಎಂದು ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್ ತಿಳಿಸಿದರು.

Related posts

ಸವಣಾಲು ಬೊಲ್ಲೊಟ್ಟುಗುತ್ತು ನಿವಾಸಿ, ಲಯನ್ಸ್ ಕ್ಲಬ್‌ ಮಾಜಿ ಅಧ್ಯಕ್ಷ ಲ| ಬಿ. ರಘುರಾಮ ಗಾಂಭೀರ ನಿಧನ

Suddi Udaya

ಉಜಿರೆ ಬ್ರಹ್ಮಕಲಶೋತ್ಸವ ಯಶಸ್ವಿಗೆ ಶ್ರಮಿಸಿದವರಿಗೆ ಧನ್ನೋಸ್ಮಿ ಕಾರ್ಯಕ್ರಮ: ಶ್ರಮಿಸಿದ ಎಲ್ಲಾ ಸ್ವಯಂ ಸೇವಕರಿಗೆ ಗೌರವಾಪ೯ಣೆ

Suddi Udaya

ಅಪರಿಚಿತ ವ್ಯಕ್ತಿ ಮೃತ್ಯು: ವಿಳಾಸ ಪತ್ತೆಗಾಗಿ ಬೆಳ್ತಂಗಡಿ ಪೊಲೀಸರ ಮನವಿ

Suddi Udaya

ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ  ಪದ್ಮುಂಜ ಸಹಕಾರಿ ಸಂಘ: ಮಹಾಸಭೆಯಲ್ಲಿ ಶೇ. 12 ಡಿವಿಡೆಂಡ್ ಘೋಷಿಸಿದ ಸಂಘದ ಅಧ್ಯಕ್ಷ  ರಕ್ಷಿತ್ ಪಣೆಕ್ಕರ

Suddi Udaya

ಮುಂಡಾಜೆ ಕ್ರೈಸ್ಟ್ ಅಕಾಡೆಮಿಯಲ್ಲಿ ಆರೋಗ್ಯ ತಪಾಸಣೆ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ

Suddi Udaya

ಗುರುವಾಯನಕೆರೆ: ಕೆರೆಯನ್ನು ಅಭಿವೃದ್ಧಿ ಪಡಿಸಲು ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

Suddi Udaya
error: Content is protected !!