November 9, 2026
Uncategorizedಗ್ರಾಮಾಂತರ ಸುದ್ದಿನಿಧನವರದಿ

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಾಚಾರಿ ಮುಂಡಾಜೆ ನಿಧನ

ಬೆಳ್ತಂಗಡಿ; ಜೆಡಿಎಸ್ ಪಕ್ಷದ ಬೆಳ್ತಂಗಡಿ ತಾಲೂಕಿನ ಹಿರಿಯ ಕಟ್ಟಾಳು, ಅನೇಕ‌ ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಮುಂಡಾಜೆ ಗ್ರಾಮದ ಒಂಜರೆಬೈಲು ನಿವಾಸಿ ರಾಮಾಚಾರಿ (68) ಅವರು ಹೃದಯಾಘಾತದಿಂದ ನ.9 ರಂದು ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಕೇರಳದ ಕೊಟ್ಟಾಯಂ ನಿವಾಸಿಯಾಗಿದ್ದ ಅವರು ಧರ್ಮಸ್ಥಳದ ಅಜಿಕುರಿಗೆ ಬಂದಿದ್ದರು. ಅಲ್ಲಿಂದ ಬಳಿಕ ಮುಂಡಾಜೆಗೆ ಬಂದು ನೆಲೆಸಿದ್ದರು. ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಾಗಿ ಕುಡಿಯುವ ನೀರು, ಗ್ರಾಮೀಣ ರಸ್ತೆ ಹಾಗೂ ಮೋರಿಗಳ ರಚನೆ ಇತ್ಯಾಧಿಯಾಗಿ ಸರಕಾರದ ಅನೇಕ ಕಾಮಗಾರಿಗಳನ್ನು ನಿರ್ವಹಿಸಿದ್ದರು‌‌.

ಇತ್ತೀಚಿಗಿನ ಕೆಲ ವರ್ಷಗಳಿಂದ ಮುಂಡಾಜೆ ಗ್ರಾಮ ಪಂಚಾಯತ್ ನ ಉದ್ಯೋಗ ಮಿತ್ರರಾಗಿ(ಉದ್ಯೋಗ ಖಾತರಿ) ಸೇವೆ ಸಲ್ಲಿಸುತ್ತಿದ್ದರು. ಕೆಲದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡು ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದರು. ಮೂರು ದಿನಗಳ ಹಿಂದೆ ಮತ್ತೆ ಅನಾರೋಗ್ಯ ಕಾಣಸಿಕೊಂಡು ಆಸ್ಪತ್ರೆಗೆ ತೆರಳಿದ್ದವರಿಗೆ ಸೋಮವಾರ ಬೆ ಳಗ್ಗಿನ ಜಾವಾ ಹೃದಯಾಘಾತವಾಗಿ ಸಾವನ್ನಪ್ಪಿದರು.ಮೃತರು ಪತ್ನಿಚಂದ್ರಾವತಿ, ಮಕ್ಕಳಾದ ಮಧುಸೂಧನ್, ಸುಭಾಷ್ ಮತ್ತು ಗುರುರಾಜ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಅವರ ಮೃತದೇಹ 8.00 ಗಂಟೆಗೆ ಮಂಗಳೂರಿನಿಂದ ಹೊರಟು ಮುಂಡಾಜೆ ಗ್ರಾಮದ ಒಂಜರೆಬೈಲು ಮನೆಗೆ ತರಲಾಗುವುದು. ಸಾರ್ವಜನಿಕ ದರ್ಶನದ ಬಳಿಕ ಒಂಜರೆಬೈಲಿನ ಸ್ವಂತ ಜಾಗದಲ್ಲೇ ಅಂತ್ಯಸಂಸ್ಕಾರ ನಡಸಲಾಗುವುದು ಎಂದು ಮನೆಯವರು ತಿಳಿಸಿದ್ದಾರೆ.

Related posts

ವಾಣಿ ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಕಲ್ಮಂಜ: ಅಕ್ಷಯ ನಗರದಲ್ಲಿ ಕಾಡಾನೆ ಓಡಾಟ

Suddi Udaya

– ಐದು ವರ್ಷಗಳ ಸಾಧನೆಯ ಸಂಭ್ರಮದಲ್ಲಿರುವ ಪ್ರತಿಷ್ಠಿತ ಎಕ್ಸೆಲ್ ವಿದ್ಯಾಸಂಸ್ಥೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ. -ವಿದ್ಯಾ ಗಣಪತಿ ದೇವರ ವಿಗ್ರಹ ಅನಾವರಣ,ಎಕ್ಸೆಲ್ ಪಂಚ ಪರ್ವ. -ಕಡಿಮೆ ಅವಧಿಯಲ್ಲಿ ಯಶಸ್ವಿನ ಶಿಖರವೇರಿದೆ ಎಕ್ಸೆಲ್ ವಿದ್ಯಾ ಸಂಸ್ಥೆ:ಡಿ.ಕೆ ಶಿವಕುಮಾರ್

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯಲ್ಲಿ ‘ಫೈರ್ ಸೇಫ್ಟಿ ಅಭಿಯಾನ್’ ಕಾರ್ಯಾಗಾರ

Suddi Udaya

ನವರಾತ್ರಿಯ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ಮುನ್ನೆಚ್ಚರಿಕೆಯಾಗಿ ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿಗಳಿಂದ ಬೆಳ್ತಂಗಡಿಯಲ್ಲಿ ಪಥಸಂಚಲನ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಪ್ರಮಾಣವಚನ ಸ್ವೀಕಾರ

Suddi Udaya
error: Content is protected !!