November 9, 2026
ಧಾರ್ಮಿಕ

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಪಡುಬಿದ್ರೆಯ ಪ್ರಖ್ಯಾತ ಆಯುರ್ವೇದಿಕ್ ವೈದ್ಯರಾದ ಡಾ. ನಾರಾಯಣ ಟಿ ಅಂಚನ್ ಭೇಟಿ

ಬೆಳ್ತಂಗಡಿ : ಶ್ರೀ ಕ್ಷೇತ್ರ ಗೆಜ್ಜೇಗಿರಿಗೆ ಪಡುಬಿದ್ರೆಯ ಪ್ರಖ್ಯಾತ ಆಯುರ್ವೇದಿಕ್ ವೈದ್ಯರಾದ ಡಾಕ್ಟರ್ ನಾರಾಯಣ ಟಿ ಅಂಚನ್ ರವರು ಭೇಟಿಕೊಟ್ಟು ಅಲ್ಲಿ ನಡೆಯುವ ದೇಯಿ ಬೈದೆದಿ ಆಯುರ್ವೇದಿಕ್ ಕೇಂದ್ರದ ಕಾಮಗಾರಿಯನ್ನು ಪರಿಶೀಲಿಸಿ ಸಂತಸವನ್ನು ವ್ಯಕ್ತಪಡಿಸಿದರು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಜೀವ ಪೂಜಾರಿ ಬಿರುವ ರವರು ಮಾಹಿತಿಯನ್ನು ನೀಡುತ್ತಾ,ಧನ್ವಂತರಿ ಮಾತೆಯ ಶಕ್ತಿ ಇರುವ ದೇಯಿ ಬೈದಿತಿ ಹೆಸರಿನಲ್ಲಿ ಆಯುರ್ವೇದಿಕ್ ಆಸ್ಪತ್ರೆಯನ್ನು ಮುಂದಿನ ದಿನಗಳಲ್ಲಿ ಗೆಜ್ಜೆ ಗಿರಿಯ ಅಭಿವೃದ್ಧಿ ಸಮಿತಿಯ ವತಿಯಿಂದ ನಡೆಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಕ್ಷೇತ್ರದ ವತಿಯಿಂದ ಎನ್ ಟಿ ಅಂಚನ್ ಮತ್ತು ಪರಿಣತರಾದ ಮೋನಪ್ಪ ಪೂಜಾರಿಯವರನ್ನು ಪ್ರಸಾದ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು. ಗೌರವಾಧ್ಯಕ್ಷರಾದ ಪೀತಾಂಬರ ಹೆರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲುಂಬಿ, ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ರಾಜಾರಾಮ್ ಕೆಬಿ, ವಾಸ್ತು ವಿನ್ಯಾಸ ಗಾರ ಪ್ರಮಲ್ ಕುಮಾರ್, ನಾರಾಯಣ ಮಚ್ಚಿನ ರತ್ನಾಕರ ಪೂಜಾರಿ, ಮುಂತಾದವರು ಜೊತೆಗಿದ್ದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬಿ.ವೈ. ರಾಘವೇಂದ್ರ ಭೇಟಿ

Suddi Udaya

ವೀರಶೈವ ಲಿಂಗಾಯತ ಸಂಘದ ವಾರ್ಷಿಕೋತ್ಸವ – ಸಾಧಕರಿಗೆ-ನಿವೃತ್ತರಿಗೆ ಸನ್ಮಾನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ – ಪದಗ್ರಹಣ ಸಮಾರಂಭ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದಲ್ಲಿ ಗ್ರಾಮ ಸುಭಿಕ್ಷೆಗಾಗಿ ಸೀಯಾಳ ಅಭಿಷೇಕ

Suddi Udaya

ಮುಂಡೂರು : ಕೋಟಿಕಟ್ಟೆಯಲ್ಲಿ ಶ್ರೀ ಮಹಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ: ಶಿಲಾಮಯ ಕಟ್ಟೆ ಹಾಗೂ ಗುಡಿ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಿದ ಗುರುವಪ್ಪ ಸಾಲಿಯಾನ್ ಕೇರಿಯಾರ್ ರವರಿಗೆ ಸನ್ಮಾನ

Suddi Udaya

ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗಬ್ರಹ್ಮಮಂಡಲೋತ್ಸವ, ಕಾರ್ಯಲಯ ಉದ್ಘಾಟನೆ

Suddi Udaya

ಡಿ.17: ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮದ ಕೋರಿಜಾತ್ರೆ

Suddi Udaya
error: Content is protected !!